Advertisement

ಕೋವಿಡ್ ಎಚ್ಚರಿಕೆ ಮಧ್ಯೆ ಹೇಮಗುಡ್ಡದಲ್ಲಿ ದಸರಾ ಆಯುಧ ಪೂಜೆ

06:22 PM Oct 25, 2020 | sudhir |

ಗಂಗಾವತಿ: ಐತಿಹಾಸಿಕ ಪ್ರಸಿದ್ಧ ತಾಲೂಕಿನ ಹೇಮಗುಡ್ಡ ಕ್ಷೇತ್ರದಲ್ಲಿ ಕೋವಿಡ್ ಎಚ್ಚರಿಕೆ ಮಧ್ಯೆ ನವರಾತ್ರಿ ದಸರಾ ಪೂಜೆಯನ್ನು ರವಿವಾರ ನೆರವೇರಿಸಲಾಯಿತು.

Advertisement

ಕನ್ನಡ ನಾಡಿಗೆ ಶರನ್ನವರಾತ್ರಿ ದಸರಾ ಹಬ್ಬವನ್ನು ಪರಿಚಯ ಮಾಡಿದ್ದು ಕುಮ್ಮಟದುರ್ಗಾದ ದೊರೆ ಗಂಡುಗಲಿ ಕುಮಾರರಾಮ. ದಕ್ಷಿಣ ಭಾರತದ ಮೇಲೆ ದೆಹಲಿ ಸುಲ್ತಾನರ ದಾಳಿ ನಂತರ ಹೊಯ್ಸಳ ಸಾಮ್ರಾಜ್ಯ ಸೇರಿ ಕೆಲ ಸಂಸ್ಥಾನಗಳು ನಾಶವಾದವು ನಂತರ ಕುಮ್ಮಟದುರ್ಗಾ ಕಂಪ್ಲಿ ಪ್ರದೇಶಗಳನ್ನು ಸೇರಿಸಿ ರಾಜ್ಯ ಸ್ಥಾಪನೆ ಮಾಡಿ ಆಳ್ವಿಕೆ ನಡೆಸಿದರು. ಮೋಸದಿಂದ ದೆಹಲಿ ಸುಲ್ತಾನರು ಕುಮ್ಮಟದುರ್ಗಾ ಕೋಟೆಯನ್ನು ದ್ವಂಸಗೊಳಿಸಲಾಯಿತು. ಗಂಡುಗಲಿಕುಮಾರರಾಮನ ಆಳ್ವಿಕೆಯಲ್ಲಿ ದಸರಾ ಹಬ್ಬ ಆಚರಣೆ ಆರಂಭ ಮಾಡಲಾಯಿತು.

ಪ್ರತಿ ವರ್ಷ 9 ದಿನಗಳ ಕಾಲ ದಸರಾ ಹಬ್ಬ ಆಚರಣೆ ಮಾಡಲಾಗಿತ್ತಿತ್ತು. ನಂತರ ಹಂಪಿ ವಿಜಯನಗರ ಸಾಮ್ರಾಜ್ಯದಲ್ಲಿ‌ ಪ್ರಸ್ತುತ ಮೈಸೂರಿನಲ್ಲಿ ಶರನ್ನವರಾತ್ರಿ ವೈಭವದಿಂದ ಆಚರಣೆ ಮಾಡಲಾಗುತ್ತಿದೆ. ಹೇಮಗುಡ್ಡದಲ್ಲಿ ಕಳೆದ 35 ವರ್ಷಗಳಿಂದ ಶರನ್ನವರಾತ್ರಿ ದಸರಾ ಆಚರಣೆಯನ್ನು ಮಾಜಿ ಸಂಸದ ಎಚ್.ಜಿ.ರಾಮುಲು ಅವರ‌ ಪುತ್ರ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಆಯೋಜನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಚಿಕಿತ್ಸೆಗಾಗಿ ಕೋವಿಡ್ ರೋಗಿಯನ್ನು 500ಮೀಟರ್ ದೂರ ಬೆನ್ನಮೇಲೆ ಹೊತ್ತು ತಂದ ಅರೋಗ್ಯ ಸಿಬ್ಬಂದಿ

Advertisement

9 ದಿನಗಳ ಕಾಲ ಎಲ್ಲಾ ಸಮುದಾಯದ ಬಾಂಧವರ ಸಾಮೂಹಿಕ ಮದುವೆ, ದೇವಿಯ ಪುರಾಣ ಕೊನೆಯ ದಿನ ಆನೆ ಮೇಲೆ ಅಂಬಾರಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಮೂರ್ತಿ ಮೆರವಣಿಗೆ ನಡೆಯುತ್ತದೆ. ಸುಮಾರು 2 ಕೀ.ಮೀ.ದೂರ ಸಾಗುವ ಮೆರವಣಿಗೆಯಲ್ಲಿ ನಾಡಿನ ಕಲೆ ಸಂಸ್ಕೃತಿ ಬಿಂಬಿಸುವ ಕಲಾತಂಡಗಳ‌ ಮೆರವಣಿಗೆ ನಡೆಯುತ್ತದೆ.

ಈ ಭಾರಿ ಕೊವೀಡ್ ಸೋಂಕು ವ್ಯಾಪಕವಾಗಿದ್ದರಿಂದ ಹೇಮಗುಡ್ಡದಲ್ಲಿ ದಸರಾ ಸರಳವಾಗಿ ನಡೆಸಲಾಗುತ್ತಿದೆ. ದೇವಿ ಮೂರ್ತಿ ಇಟ್ಟು ಸರಳವಾಗಿ ಮೆರವಣಿಗೆ ನಡಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next