Advertisement
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಸುಬ್ಬಯ್ಯಕಟ್ಟೆ ಕನ್ನಡ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಮತ್ತು ಆದಿತ್ಯ ಫ್ರೆಂಡ್ಸ್ ಕ್ಲಬ್ ನಾರಾಯಣಮಂಗಲಗಳ ಸಂಯುಕ್ತ ಆಶ್ರಯದಲ್ಲಿ ನಾರಾಯಣಮಂಗಲ ಅನುದಾನಿತ ಶಾಲಾ ವಠಾರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಓಣಂ-ದಸರಾ ಜಾನಪದ ಉತ್ಸವ ಸಮಾರಂಭವನ್ನು ತುಳು ನಾಡಿನ ಸಾಂಪ್ರದಾಯಿಕ ಚೆಂಡೆ ನುಡಿಸಿ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಮಾನವ ಕುಲದ ಉದ್ದಾರಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ನಿವೃತ್ತ ಪೋಲೀಸ್ ಮಹಾನಿರ್ದೇಶಕ ಕೆ.ವಿ.ಆರ್.ಠಾಗೋರ್ ಅವರು ಮಾತನಾಡಿ, ಹƒದಯ ವೈಶಾಲ್ಯತೆ, ಹಸುನ್ಮುಖದ ನಗು ಮನುಷ್ಯನನ್ನು ಬಹಳಷ್ಟು ಎತ್ತರಕ್ಕೆ ಒಯ್ಯುತ್ತದೆ. ಪ್ರತಿದಿನದ ಶುಭಸೂರ್ಯೋದವು ಮನುಷ್ಯ ಬದುಕಿನ ಅವಕಾಶಗಳಿಗೆ ತೆರೆದುಕೊಳ್ಳುವುದರೊಂದಿಗೆ ಆರಂಭಗೊಳ್ಳುತ್ತಿದ್ದು, ಸದುಪಯೋಗಪಡಿಸುವ ನೈಪುಣ್ಯತೆ ನಮ್ಮನ್ನು ಬೆಳೆಸುತ್ತದೆ. ಪರಂಪರೆಯ ಅರಿವಿನೊಂದಿಗೆ ನಮ್ಮ ಬದುಕು ಮುನ್ನಡೆದಾಗ ಸುಂದರ ಬದುಕು ನಿರ್ಮಾಣವಾಗುತ್ತದೆ. ಪಾರಂಪರಿಕ ಜಾನಪದ ಚಿಂತನೆಯ ಮೂಲ ಉದ್ದೇಶ ಮಾನವ ಕುಲದ ಉದ್ಧಾರವೇ ಆಗಿದೆ ಎಂದು ತಿಳಿಸಿದರು. ಕನ್ನಡವನ್ನು ಗಡಿನಾಡಿನ ಕನ್ನಡಿ ಗರು ಪೋಷಿಸಿ ಸಾಧನೆ ಮಾಡುತ್ತಿದ್ದಾರೆ. 26 ಭಾಷೆಗಳನ್ನೂ ಪೋಷಿ ಸುವ ಹೃದಯ ವೈಶಾಲ್ಯತೆ ಕಾಸರ ಗೋಡಿನ ಕನ್ನಡಿಗರದ್ದು. ಸ್ಪೂರ್ತಿಯಾ ಗುವ ವಿಶೇಷ ಗುಣ, ಅವಕಾಶಗಳನ್ನು ಸದಾವಕಾಶಗಳನ್ನಾಗಿ ಮಾಡುವ ಚಾಣಾಕ್ಷತೆ, ನಿಸ್ವಾರ್ಥ ಮನೋಭಾವ ಇಲ್ಲಿನ ಕನ್ನಡಿಗರನ್ನು ಶ್ರೀಮಂತವಾಗಿಸಿದೆ. ಎಡರು ತೊಡರುಗಳಿಂದ ಕೂಡಿದ ಕ್ಷಿಷ್ಟವಾದ ಹಾದಿಯಲಿ ನಡೆದರೇನೇ ತƒಪ್ತಿಯ ಕಡಲನು ಸೇರಬಹುದು.
– ಡಾ| ವೆಂಕಟೇಶ ತುಪ್ಪಿಲ್