Advertisement

Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ

02:01 AM Oct 05, 2024 | Team Udayavani |

ಶ್ರೀರಂಗಪಟ್ಟಣ: ದಸರಾ ಜಂಬೂ ಸವಾರಿಗೆ ಚಾಲನೆ ನೀಡಲು ಯಾವುದೇ ತಡವಾಗಿಲ್ಲ, ಕುಂಭಲಗ್ನದಲ್ಲಿ ದಸರಾ ಉದ್ಘಾಟಿಸಿದ್ದೇವೆ ಎಂದು ಶ್ರೀರಂಗಪಟ್ಟಣದಲ್ಲಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿಕೆ ನೀಡಿದರು.

Advertisement

ಜಂಬೂಸವಾರಿ ತಡವಾಗಿ ಆರಂಭವಾದ ವಿಚಾರ ಕುರಿತು ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರಿಗಿಂತ ಮೊದಲು ಶ್ರೀರಂಗಪಟ್ಟಣದಲ್ಲಿ ದಸರಾ ಮೊದಲು ಆರಂಭವಾಯಿತು. ಈ ಬಾರಿ ಹೆಚ್ಚು ಆಕರ್ಷಣೀಯವಾಗಿ 4ದಿನಗಳ ಕಾಲ ಆಚರಣೆ ಮಾಡಲಾಗುತ್ತಿದೆ. ಕಳೆದ 16 ವರ್ಷಗಳಿಂದ ಶ್ರೀರಂಗಪಟ್ಟಣದಲ್ಲಿ ಮತ್ತೇ ಆರಂಭಗೊಂಡಿರುವುದು ಈ ಭಾಗದ ಜನರಿಗೆ ಸಂತಸ ನೀಡಿದೆ ಎಂದರು.

ಮೈಸೂರಿನಲ್ಲಿ ಚಾಮುಂಡೇಶ್ವರಿ ಬಳಿ ಒಂದು ವರ್ಷ ಕಾಲಾವಕಾಶ ಕೇಳಿದ ವಿಚಾರವಾಗಿ ಮಾತನಾಡಿದ ಸಚಿವರು, ಮುಂದಿನ ವರ್ಷ ದಸರಾ ನಿರ್ವಿಘ್ನವಾಗಿ ಮಾಡಲು ಅವಕಾಶ ಕೊಡವ್ವ ಎಂದು ಕೇಳಿಕೊಂಡಿದ್ದಾರೆ. ಬೇರೇ ಅರ್ಥ ಬೇಡ ಎಂದರು. ಅಧಿಕಾರ ಹಂಚಿಕೆ ವಿಚಾರ ನಮ್ಮಲ್ಲಿ ಚರ್ಚೆ ಇಲ್ಲ. ನಾನು ಮುಂದುವರಿಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.

ಈಗ ಸಿಎಂ ಬದಲಾವಣೆ ಚರ್ಚೆ ಇಲ್ಲ. ಆರ್‌.ಅಶೋಕ್‌ ಮೊದಲು ರಾಜೀನಾಮೆ ಕೊಡಲಿ. ಅವರ ವಿಚಾರಕ್ಕೂ ಸಿದ್ದರಾಮಯ್ಯ ವಿಚಾರಕ್ಕೂ ವ್ಯತ್ಯಾಸವಿದೆ. ವಿರೋಧ ಪಕ್ಷ ನಾಯಕತ್ವಕ್ಕೆ ಮೊದಲು ರಾಜೀನಾಮೆ ಕೊಡಲಿ. ಕಾನೂನು ಏನಿದೆ ಅದರ ಪ್ರಕಾರ ನಮ್ಮ ನಾಯಕರು ನಡೆದುಕೊಳ್ತಾರೆ. ಅಶೋಕ್‌ ಅವರದು ಏನಿದೆ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ.

ಚನ್ನಪಟ್ಟಣ ಉಪಚುನಾವಣೆಗೆ ಹಣಕ್ಕೆ ಬೇಡಿಕೆ ವಿಚಾರವಾಗಿ, ದೂರು ಆಗಿದೆ, ತನಿಖೆ ಆಗಲಿ. ಗೊತ್ತಿಲ್ಲದೆ ಮಾತನಾಡಲು ನಾನು ಕುಮಾರಸ್ವಾಮಿ ಅಲ್ಲ. ಕುಮಾರಸ್ವಾಮಿ ಕಥೆ ನಿಮಗೂ ಗೊತ್ತಿದೆ, ಜನ ಕೊಟ್ಟಿರುವ ಜವಾಬ್ದಾರಿ ಎಚ್‌ಡಿಕೆ ನಿಭಾಯಿಸಲಿ. ಉಡಾಫೆ ಮಾತುಗಳನ್ನ ಕುಮಾರಸ್ವಾಮಿ ಬಿಡಲಿ ಎಂದು ಮಾರ್ಮಿಕವಾಗಿ ಹೇಳಿದರು.

Advertisement

136 ಶಾಸಕರು ಸಿದ್ದರಾಮಯ್ಯ ಪರ
136 ಜನ ಶಾಸಕರು, ಸಚಿವರು, ಹೈಕಮಾಂಡ್‌, ಸಿದ್ದರಾಮಯ್ಯ ಪರವಿದ್ದಾರೆ. ಕೆಲ ವಿರೋಧ ಪಕ್ಷದ ನಾಯಕರೇ ಸಿದ್ದರಾಮಯ್ಯ ಪರ ಮಾತನಾಡ್ತಾರೆ ಎಂದು ಸಚಿವ ಹೇಳಿದರು. ರಾಜೀನಾಮೆ ಸುಮ್ಮನೆ ಕೇಳಲಾಗಲ್ಲ. ಇವರು ರಾಜೀನಾಮೆ ಕೊಡುತ್ತಾರಾ ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ. ಈಗಲಾದರೂ ಈ ವಿಚಾರ ವಿಜಯೇಂದ್ರ, ಅಶೋಕ್‌ ಕುಮಾರಸ್ವಾಮಿ ಅವರಿಗೆ ಅರ್ಥ ಆಗಿದೆ ಅನಿಸುತ್ತಿದೆ.

ಪ್ರಕ ರಣ, ಕೇಸು,ಯಾರ ಯಾರ ಮೇಲೆ ಇದೆ ಅರ್ಥ ಮಾಡಿಕೊಳ್ಳಲಿ.ಸಿದ್ದರಾಮಯ್ಯ ಪರೋಕ್ಷ ಪ್ರಭಾವವಿದೆ ಎಂದು ದೂರು ಕೊಟ್ಟಿದ್ದಾರೆ. ನೇರವಾಗಿ ಅದರ ಹೊಣೆ ಹೊತ್ತ ಅಶೋಕ್‌, ವಿಜಯೇಂದ್ರ, ಕುಮಾರಸ್ವಾಮಿ ಇದರಲ್ಲಿದ್ದಾರೆ. ಅವರ ಹೆಸರ ತಳುಕು ಹಾಕಿಕೊಳ್ತಿಲ್ಲ. ಕೇವಲ ಸಿದ್ದರಾಮಯ್ಯ ಹೆಸರು ಮಾತ್ರ ಕೇಳಿ ಬರ್ತಿದೆ. ವಿರೋಧ ಪಕ್ಷದ ನಾಯಕರೇ ಹೇಳಿದ ಮೇಲೆ ಅವರ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next