Advertisement

ದಸರಾ, ನವರಾತ್ರಿ ಸಂಭ್ರಮಕ್ಕೆ ತೆರೆ

09:57 PM Oct 08, 2019 | Team Udayavani |

ಹುಣಸೂರು: ಹಳೇ ಮೈಸೂರು ಭಾಗದಲ್ಲಿ ದಸರಾ ಮಹೋತ್ಸವ ಹಾಗೂ ನವರಾತ್ರಿ ಉತ್ಸವ ಎಂದರೆ ಸಂಭ್ರಮಕ್ಕೆ ಪಾರವೇ ಇಲ್ಲ. ಪ್ರತಿ ಮನೆಗಳಲ್ಲೂ ಸಡಗರ, ಸಂಭ್ರಮ ಮನೆ ಮಾಡಿರುತ್ತದೆ. ನವರಾತ್ರಿ ಬಂತೆಂದರೆ ಮಕ್ಕಳಿಗೆ ಒಂದೆಡೆ ರಜೆ ಖುಷಿ, ಮತ್ತೊಂದೆಡೆ ದೇವಾಲಯಗಳಲ್ಲಿ ಶಕ್ತಿ ದೇವತೆಗಳ ಆರಾಧನೆ ಅಲಂಕಾರ, ಮನೆ ಮನೆಗಳಲ್ಲಿ ಬೊಂಬೆಗಳನ್ನು ಪ್ರತಿಷ್ಠಾಪಿಸುವುದು,

Advertisement

ಮನೆಗೆ ಬರುವವರಿಗೆ ಸಿಹಿತಿಂಡಿ ಹಂಚುವುದು ಇಲ್ಲಿನ ಸಾಂಪ್ರದಾಯವಾಗಿದೆ. ಕೊನೆ ದಿನ ಆಯುಧ ಪೂಜೆಯಂದು ವಿಶೇಷ ಪೂಜೆ ಸಲ್ಲಿಸಿದ ನಂತರ ಬೊಂಬೆಗಳನ್ನು ವಿಸರ್ಜಿಸಿ, ಸ್ವಸ್ಥಾನಕ್ಕೆ ಸೇರಿಸುತ್ತಾರೆ. ಜೊತೆಗೆ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಮೂಲಕ ದಸರಾ ಮಹೋತ್ಸವ ಹಾಗೂ ನವರಾತ್ರಿ ಉತ್ಸವಕ್ಕೆ ತೆರೆ ಬೀಳುತ್ತದೆ.

ಅಲಂಕೃತ ಬೊಂಬೆಗಳು: ನಗರದ ಹಳೇ ಹೌಸಿಂಗ್‌ ಬೋರ್ಡ್‌ ನಿವಾಸಿ, ಶಿಕ್ಷಕಿ ನಾಗಜ್ಯೋತಿ ಮನೆಯಲ್ಲಿ ನವರಾತ್ರಿ ಅಂಗವಾಗಿ 100ಕ್ಕೂ ಹೆಚ್ಚು ಆಕರ್ಷಕ ಅಲಂಕೃತ ಬೊಂಬೆಗಳನ್ನಿಡಲಾಗಿತ್ತು. ನಿತ್ಯ ಬೊಂಬೆಯನ್ನು ವೀಕ್ಷಿಸಲು ಬರುವ ಮಹಿಳೆಯರು ಹಾಗೂ ಮಕ್ಕಳಿಗೆ ತಿಂಡಿಗಳನ್ನು ತಯಾರಿಸಿ, ವಿತರಿಸಿ ಧನ್ಯತಾ ಭಾವ ಮೆರೆಯುತ್ತಾರೆ.

ದೇಗುಲಗಳಲ್ಲಿ ವಿಶೇಷ ಪೂಜೆ: ನಗರದ ಶಕ್ತಿದೇವತೆ ಎಂದೇ ಪ್ರತೀತಿ ಇರುವ ಮುತ್ತುಮಾರಮ್ಮ ದೇವಾಲಯದಲ್ಲಿ ದೇವರನ್ನು ವಿವಿಧ ಹೂವುಗಳಿಂದ ಸಿಂಗರಿಸಿರುವುದಲ್ಲದೇ ದೇವಾಲಯಕ್ಕೆ ಜಗಮಗಿಸುವ ವಿದ್ಯುತ್‌ ದೀಪಾಲಂಕಾರ ಮಾಡಿರಲಾಗಿರುತ್ತದೆ. ದೇಗುಲದ ಆವರಣದಲ್ಲಿ ಕಲ್ಲು ಗುಡ್ಡದಂತೆ ನಿರ್ಮಿಸಿರುವ ಅಲಂಕೃತ ಮಂಟಪದಲ್ಲಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸುತ್ತೆಲ್ಲಾ ಬೊಂಬೆಗಳನ್ನಿಟ್ಟು ತ್ರಿಕಾಲ ಪೂಜೆ ಸಲ್ಲಿಸಲಾಯಿತು. ಇನ್ನು ನಗರದ ಹೊರ ವಲಯದ ಮಡಿಕೇರಿ ಹೆದ್ದಾರಿಯಲ್ಲಿರುವ ಮೂರೂರಮ್ಮ ದೇವಾಲಯದಲ್ಲಿ ನವಧಾನ್ಯಗಳನ್ನು ಮೊಳಕೆ ಬರಿಸಿ, ನಿತ್ಯ ಪೂಜೆ ಸಲ್ಲಿಸಿ, ದೇವಸ್ಥಾಕ್ಕೆ ಬರುವ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಗುತ್ತಿದೆ.

ಭಜನೆ: ಶ್ರೀ ಮುತ್ತುಮಾರಮ್ಮ ದೇವಾಯಲದಲ್ಲಿ ದೇವರಿಗೆ ಶೈಲಪುತ್ರಿ, ಸಮಯಪುರ ಮಾರಿಯಮ್ಮ ಅಲಂಕಾರ, ದೇವರಿಗೆ ಕೊರವಂಜಿ ಅಲಂಕಾರ ಮಾಡಲಾಗಿತ್ತು. ಚಂದ್ರಘಂಟಾ, ಮಹಾಗೌರಿ, ಅರ್ಧನಾರೇಶ್ವರ, ಕೂಷ್ಮಾಂಡ, ವಾರಾಹಿ ಅಲಂಕಾರ, ಸ್ಕಂದಮಾತಾ, ಮಧುರೈ ಮೀನಾಕ್ಷಿ ಅಲಂಕಾರ, ಕಾತ್ಯಾಯಿನಿ, ರೇಣುಕಾ ಎಲ್ಲಮ್ಮದೇವಿ ಅಲಂಕಾರ, ಕಾಲರಾತ್ರಿ, ಸರಸ್ವತಿ ಅಲಂಕಾರ, ಮಹಾಗೌರಿ, ಕಾಳಿಕಾದೇವಿ ಅಲಂಕಾರ, ದೇವಧೂತೀ, ಮಹಿಷಾಸುರ ಮರ್ಧಿನಿಯ ಅಲಂಕಾರಗೊಳಿಸಿ, ನಿತ್ಯ ಪೂಜೆ ಸಲ್ಲಿಸಿ, ಪ್ರತಿದಿನ ಮಧ್ಯಾಹ್ನ ಮಹಾಮಂಗಳಾರತಿ, ಸಂಜೆ ಭಜನೆ ನಡೆಸಲಾಯಿತು. ಭಕ್ತರ ನೆರವಿನೊಂದಿಗೆ ಪ್ರಸಾದ ವಿನಿಯೋಗ ನಡೆಯಿತು.

Advertisement

ಕರಗ ಮಹೋತ್ಸವ: ಇನ್ನು ಮುನೇಶ್ವರಸ್ವಾಮಿ ದೇವಾಲಯದಲ್ಲಿ ಆಯುಧಪೂಜೆ ದಿನದಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ನಗರದ ಬ್ರಾಹ್ಮಣರ ಬಡಾವಣೆ, ಸ್ಕೋರ್‌ ಬೀದಿ, ಎಸ್‌.ಜೆ.ರಸ್ತೆಗಳಲ್ಲಿ ಕರಗ ಮಹೋತ್ಸವ ನಡೆಸಲಾಯಿತು. ಈ ಮೂಲಕ ನವರಾತ್ರಿ ಉತ್ಸವ ಸಂಪನ್ನವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next