Advertisement
ಅರಮನೆಗೆ ಗಜಪಡೆ ಪ್ರವೇಶಿಸಿದ ಬಳಿಕ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಗೋಡೆಗಳಿಗೆ ಬಣ್ಣ ಬಳಿಯುವ, ವಿದ್ಯುತ್ ಬಲ್ಬ್ ಬದಲಾಯಿಸುವುದು, ಹೂದೋಟ ಸೇರಿ ವಿವಿಧ ಕೆಲಸಗಳು ಆರಂಭಗೊಂಡಿದ್ದು, ವಾರದಲ್ಲಿ ಮುಕ್ತಾಯವಾಗಲಿವೆ. ಇದರ ಜೊತೆಗೆ ಅರಮನೆ ಸುತ್ತಲಿನ ರಸ್ತೆ, ರಾಜಮಾರ್ಗ, ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡುವ ಕಾರ್ಯ ನಡೆಯುತ್ತಿದೆ.
Related Articles
Advertisement
ಈಗಾಗಲೇ ಬೆಂಗಳೂರು ರಸ್ತೆ, ಅಂಬೇಡ್ಕರ್ ವೃತ್ತ, ಸಯ್ನಾಜಿರಾವ್ ರಸ್ತೆ, ಹಾರ್ಡಿಂಜ್ ವೃತ್ತ, ಕೆ.ಆರ್. ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ಮಾಡಲಾಗಿದ್ದು, ಉಳಿದ ರಸ್ತೆ ಮತ್ತು ವೃತ್ತಗಳಲ್ಲಿ ದೀಪಗಳ ಅಲಂಕಾರ ಮಾಡಲು ರಸ್ತೆ ಎರಡು ಬದಿಯಲ್ಲಿ ಮರದ ಕಂಬಗಳನ್ನು ನೆಡಲಾಗುತ್ತಿದೆ. ಒಟ್ಟಾರೆ ದಸರಾ ದೀಪಾಲಂಕಾರ ಕಾರ್ಯದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ತೊಗಿಸಿಕೊಂಡಿದ್ದು, ಅನಗತ್ಯವಾಗಿ ವಿದ್ಯುತ್ ಪೋಲಾಗದಂತೆ ತಡೆಯಲು ರಾಜ ಮಾರ್ಗದಲ್ಲಿ ಅರಮನೆಗೆ ಬಳಸಿರುವ ಬಲ್ಬ್ಗಳನ್ನು ಬಳಸಿ, ಉಳಿದೆಲ್ಲಾ ರಸ್ತೆಗಳಿಗೆ ಎಲ್‌ಇಡಿ ಬಲ್ಬ್ಗಳನ್ನು ಬಳಸಲಾಗುತ್ತಿದೆ. ಇದರಿಂದ 1ಲಕ್ಷದ 25 ಸಾವಿರ ಯೂನಿಟ್ ವಿದ್ಯುತ್ ಸಾಕಾಗಲಿದೆ ಎಂದು ಸೆಸ್ಕ್ನ ಅಧೀಕ್ಷಕ ಎಂಜಿನಿಯರ್ ಪತ್ರಿಕೆಗೆ ತಿಳಿಸಿದ್ದಾರೆ.
ಒಟ್ಟಾರೆ ಅ.7ರಂದು ದಸರಾ ದೀಪಾಲಂಕಾರ ಉದ್ಘಾಟನೆಗೊಳ್ಳಲಿರುವುದರಿಂದ ದೀಪಾಲಂಕಾರಜೋಡಣೆ ಕಾರ್ಯ ಬಿರುಸಿನಿಂದ ಸಾಗಿದ್ದು, ಮಳೆ ಕಡಿಮೆಯಾದರೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.
24 ವಿಶೇಷ ಪ್ರತಿಕೃತಿ:
ಈ ಬಾರಿಯ ದಸರಾ ದೀಪಾಲಂಕಾರಕ್ಕೆ ಒಲಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಅವರ ಪ್ರತಿಕೃತಿ ನಿರ್ಮಿಸಲಾಗುತ್ತಿರುವುದು ವಿಶೇಷ. ಹಾಗೆಯೇ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಅಮೃತೋತ್ಸವದ ಅಂಗವಾಗಿ ನಗರದ ವಿವಿಧ ರಸ್ತೆ ಮತ್ತು ವೃತ್ತಗಳಲ್ಲಿ ಭಾರತದ ಭೂಪಟ, ಸ್ವಾತಂತ್ರ್ಯ ಹೋರಾಟಗಾರರು,ದೇಶದ ನಾಯಕರು, ಮೈಸೂರು ಅರಮನೆ,ವಿಷ್ಣು, ಶ್ರೀಕೃಷ್ಣ ರಥ, ಸುತ್ತೂರು ರಾಜೇಂದ್ರ ಸ್ವಾಮೀಜಿ ಅವರ ಪ್ರತಿಕೃತಿ ವಿಶೇಷವಾಗಿದೆ.ಜೊತೆಗೆ ನಗರದ ಎಲ್‌ಐಸಿ ಕಚೇರಿ ವೃತ್ತದಲ್ಲಿವಿವಿಧ ಪ್ರಾಣಿಗಳ ಕಲಾಕೃತಿಗಳು ಮತ್ತುಚಾಮುಂಡಿ ಬೆಟ್ಟದಲ್ಲಿ ಸ್ವಾಗತ ಕೋರುವ ಪ್ರತಿಕೃತಿ ಮಾಡುವ ಕೆಲಸ ನಡೆಯುತ್ತಿದೆ.
ಅ.7ರಂದು ಸಯ್ನಾಜಿ ರಾವ್ ರಸ್ತೆಯಲ್ಲಿನ ಹಸಿರು ಚಪ್ಪರದಲ್ಲಿದೀಪಾ ಲಂಕಾರ ಉದ್ಘಾಟಿಸಲಾಗುತ್ತದೆ.ನಿತ್ಯ ರಾತ್ರಿ 7 ಗಂಟೆಯಿಂದ 9.30ರವರೆಗೆ ದೀಪಾಲಂಕಾರ ಇರಲಿದೆ. ಈ ಬಾರಿ ದೀಪಾಲಂಕಾರವೇ ಪ್ರಮುಖ ಆಕರ್ಷಣೆ ಯಾಗಿರುವುದರಿಂದ ಒತ್ತು ನೀಡಲಾಗಿದೆ.– ನಾಗೇಶ್, ಅಧೀಕ್ಷಕ ಎಂಜಿನಿಯರ್ ಸೆಸ್ಕ್
– ಸತೀಶ್ ದೇಪುರ