Advertisement

ಶ್ರೀರಂಗಪಟ್ಟಣ ದಸರಾಕ್ಕೆ ಬರದ ಸಿದ್ಧತೆ

05:17 PM Sep 22, 2021 | Team Udayavani |

ಶ್ರೀರಂಗಪಟ್ಟಣ: ವಿಶ್ವ ಪ್ರಸಿದ್ಧ ಶ್ರೀರಂಗಪಟ್ಟಣ ದಸರಾ ಆಚರಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ವಿಧಾನಸೌಧದ ಆವರಣದಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳ ಸಭೆ ನಡೆಸಿದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತೆಗೊಳಿಸಲು ಎಸಿ ಶಿವಾನಂದ ಮೂರ್ತಿ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ಕಿರಂಗೂರು ಬನ್ನಿ ಮಂಟಪ ಪರಿಶೀಲನೆ ನಡೆಸಿತು.

Advertisement

ಪಟ್ಟಣಕ್ಕೆ ಹೊಂದಿಕೊಂಡ ಮೈಸೂರು-ಬೆಂಗಳೂರು ಹೆದ್ದಾರಿ ವೃತ್ತದಲ್ಲಿರುವ ಕಿರಂಗೂರು ಬನ್ನಿಮಂಟಪದ ಬಳಿ ದಸರಾ ಅಭಿವೃದ್ಧಿ ಕಾಮಗಾರಿ ನಡೆಸಲು ಅಧಿಕಾರಿ ವರ್ಗದದೊಂದಿಗೆ ಪರಿಶೀಲನೆ ನಡೆಸಿ ಬಳಿಕ ಅ. 09,10,11ರಂದು 3 ದಿನಗಳ ಕಾಲ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುತ್ತದೆ.

ದಸರಾಕ್ಕೆ 15 ದಿನ ಬಾಕಿ: ದಸರಾ ಜಂಬುಸವಾರಿ ಕಾರ್ಯಕ್ರಮ ಆರಂಭಕ್ಕೆ 15 ದಿನಗಳ ಬಾಕಿ ಇದ್ದು, ಶ್ರೀರಂಗ ಪಟ್ಟಣದ ದಸರಾ ಬನ್ನಿ ಮಂಟ ಪದ ಸುತ್ತಲೂ ಸ್ವತ್ಛತೆ, ಹೆದ್ದಾರಿ ಡಿವೈಡರ್‌ ಮೇಲೆ ಬೆಳೆದು ನಿಂತ ಗಿಡಗಳನ್ನು ತೆಗೆಸಿ ಎರಡು ಬದಿಯ ರಸ್ತೆಯು ದ್ದಕ್ಕೂ ಬಣ್ಣ ಬಳಿಸಲು ಲೋಕೋಪಯೋಗಿ ಇಲಾಖೆಗೆ ತಿಳಿಸಲಾಗಿದೆ. ಆಕರ್ಷಣೆಯಾಗಿ ವಿದ್ಯುತ್‌ ದೀಪಾಲಂಕಾರ ಮಾಡಲು ವಿದ್ಯುತ್‌ ಇಲಾಖೆಗೆ ಸೂಚಿಸಲಾಗಿದೆ. ಶ್ರೀರಂಗನಾಥ ಸ್ವಾಮಿ ದೇವಾಲ ಯದ ಆವರಣದಿಂದ ಬನ್ನಿ ಮಂಟಪದವರೆಗೆ ಪಟ್ಟಣ ಪುರ ಸಭೆ ಹಾಗೂ ಸ್ಥಳೀಯ ಗ್ರಾಪಂಗಳಿಗೆ ವಹಿಸಲಾಗಿದೆ.

ಜಿಲ್ಲಾಧಿಕಾರಿಗಳ ಚರ್ಚೆ:
ಶ್ರೀರಂಗಪಟ್ಟಣ ದಸರಾವನ್ನು ನಿಯೋಜನೆ ಯಂತೆ ಅ.09ರಿಂದ 11ರವರೆಗೆ 3 ದಿನ ಗಳ ಕಾಲ ಅದ್ಧೂರಿಯಾಗಿ ಜಿಲ್ಲಾಡಳಿತ ವತಿಯಿಂದ ನಡೆಸಲಾಗುವುದು. ಬೇಕಾದ ಎಲ್ಲಾ ಅಗತ್ಯ ಕ್ರಮ ಹಾಗೂ ಕಾಮಗಾರಿಗಳನ್ನು ತ್ವರಿತವಾಗಿ ನಡೆಸಲಾಗುತ್ತಿದೆ. ಪಟ್ಟಣದ ದಸರೆಗೆ ರಾಜ್ಯದ ಗಣ್ಯರನ್ನು ಕರೆತರುವ ಸಾಧ್ಯತೆ ಇದ್ದು, ಅವರಿಂದ ದಸರಾ ಮೆರವಣಿಗೆಗೆ ಪುಷ್ಪಾರ್ಚನೆ ನಡೆಸಲಿದ್ದಾರೆ.

ಇದನ್ನೂ ಓದಿ:ಭೀಕರ ಕಾರು ಅಪಘಾತ: ಪ್ರಸಿದ್ಧ ಮರಾಠಿ ಚಿತ್ರನಟಿ ಈಶ್ವರಿ ದೇಶಪಾಂಡೆ ಸಾವು

Advertisement

ಹೆಸರು ಅಂತಿಮವಾಗಿಲ್ಲ: ದಸರಾ ಕಾರ್ಯಮಕ್ಕೆ ಭಾಗವಹಿಸುವ ಜನಪ್ರತಿನಿಧಿಗಳು, ಹೆಸರಾಂತ ಸಾಹಿತಿಗಳು, ದಸರಾ ಚಾಲನೆಗಾಗಿ ಈ ಹಿಂದೆ ನಡೆದು ಬಂದ ರೀತಿಯಲ್ಲಿ ಈಗಾಗಲೇ ರಾಜ್ಯದ ಸಾಹಿತ್ಯ ಕ್ಷೇತ್ರದ ಪ್ರಸಿದ್ಧ ಹಾಗೂ ಪ್ರಮುಖ ಸಂಪನ್ಮೂಲ ವ್ಯಕ್ತಿಗಳ ಹೆಸರುಗಳನ್ನು ಗುರುತಿಸ ಲಾಗುವುದು. ಇನ್ನು ಯಾರ ಹೆಸ ರನ್ನು ಸಹ ನಿಖರವಾಗಿ ಅಂತಿಮಗೊಳಿಸಲಾಗಿಲ್ಲ.

ಪಟ್ಟಿ ಸಿದ್ಧಗೊಳಿಸಲು ಸಮಯ ನಿಗದಿ:
ಶ್ರೀರಂಗ ನಾಥ ಮೈದಾನದಲ್ಲಿ ನಡೆಯುವ ವೇದಿಕೆ ಸಿದ್ಧತೆ ಕುರಿತು ಚರ್ಚೆ ಮಾಡಲು ಉಸ್ತುವಾರಿ ಸಚಿವರು ಹಾಗೂ ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಲಿದ್ದಾರೆ. ಸ್ಥಳೀಯ ಕಲಾವಿದರಿಗೆ ಈ ದಸರಾದಲ್ಲಿ ಅವಕಾಶ ನೀಡಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರ ನೇತೃತ್ವದಲ್ಲಿ ಕಾರ್ಯಕ್ರಮ ಕುರಿತು ಚರ್ಚೆ ಮಾಡಿ ಪಟ್ಟಿ ಸಿದ್ಧಗೊಳಿಸಲು ಸಮಯ ನಿಗದಿ ಮಾಡಿಕೊಳ್ಳಲಾಗುತ್ತದೆ ಎಂದರು.

ತಹಶೀಲ್ದಾರ್‌ ಶ್ವೇತಾ, ತಾಪಂ ಇಒ ಬೈರಪ್ಪ, ಪಿಐ ಪುನೀತ್‌, ಪುರಸಭೆ ಮುಖ್ಯಾಧಿಕಾರಿ ಮಾನಸ ಸೇರಿದಂತೆ ಇತರ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಪಂ ಅಧಿಕಾರಿಗಳು ಉಪಸ್ಥಿತರಿದ್ದರು.

ಜಂಬೂಸವಾರಿ
ಕಳೆದ ಬಾರಿಯಂತೆ ಗಜಪಡೆಯೊಂದಿಗೆ ನಾಡದೇವಿ ಚಾಮುಂಡೇಶ್ವರಿಯನ್ನು ಹೊತ್ತ ಪಾರಂಪರಿಕ ದಸರಾ ಮೆರವಣಿಗೆಯನ್ನು ಬನ್ನಿಮಂಟಪದಿಂದ ರಾಜಬೀದಿಯಲ್ಲಿ ಶ್ರೀರಂಗನಾಥ ದೇವಾಲಯವರೆಗೂ ಜಂಬೂಸವಾರಿ ಮೂಲಕ ಕೊಂಡೊಯ್ಯಲಾಗುವುದು.

ಗಜಪಡೆ
ಜ್ಯೋತಿಷಿ ಭಾನುಪ್ರಕಾಶ್‌ ಶರ್ಮ ಅವರ ಸೂಚನೆಯಂತೆ ಅ.09 ರ ಮಧ್ಯಾಹ್ನ ಶುಭಮೂಹೂರ್ತದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಲಾಗುತ್ತದೆ. ಈ ಬಾರಿಯ ದಸರಾಗೆ ಮೈಸೂರಿನಿಂದ ಆನೆಗಳನ್ನು ಕರೆತರಲು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುತ್ತದೆ.

3 ದಿನ ಸಾಂಸ್ಕೃತಿಕ ಕಾರ್ಯಕ್ರಮ
ಪಟ್ಟಣವನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ, ಮೆರವಣಿಗೆ ಬಳಿಕ ಶ್ರೀರಂಗ ವೇದಿಕೆಯಲ್ಲಿ 3 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ಕಲಾವಿದರಿಗೆ ಈ ವೇಳೆ ತೊಡಕು ಉಂಟಾಗದಂತೆ ಮೂಲ ಎಚ್ಚರ ವಹಿಸಲಾ ಗುವುದು ಎಂದರು.

ಕಲಾ ತಂಡ, ಸ್ತಬ್ದಚಿತ್ರ
ಹಲವು ಸ್ಥಳೀಯ ಮತ್ತು ರಾಜ್ಯದ ವಿವಿಧ ಜಾನಪದ ಕಲಾತಂಡಗಳು, ವಿದ್ಯಾರ್ಥಿಗಳ ಪಥಸಂಚಲನ, ಪ್ರಮುಖ ಇಲಾಖೆಗಳ ಸ್ತಬ್ದಚಿತ್ರಗಳು ಹಾಗೂ ಪೊಲೀಸ್‌ ಬ್ಯಾಂಡ್‌ ಜತೆಗೆ ನಿಯೋಜಿತ ಮಾರ್ಗದಲ್ಲಿ ತೆರಳುವುದು. ಪ್ರಮುಖ ವೃತ್ತಗಳು ಸೇರಿದಂತೆ ವಿವಿಧೆಡೆ ಜನರು ಕುಳಿತು ದಸರಾ ಮೆರವಣಿಗೆ ನೋಡುವಂತೆ ರಸ್ತೆಯುದ್ದಕ್ಕೂ ಆಸನ ವ್ಯವಸ್ಥೆ ಕೈಗೊಳ್ಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next