Advertisement

ದಸರಾ ಮಹೋತ್ಸವಕ್ಕೆ ಗಜಪಡೆ ಸಜ್ಜು; ಎರಡನೇ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು

05:53 PM Sep 09, 2021 | Team Udayavani |

ಮೈಸೂರು ದಸರಾ ಜಂಬೂ ಸವಾರಿಯಲ್ಲಿಈ ಬಾರಿ 8 ಆನೆಗಳನ್ನುಕರೆತರಲಾಗುತ್ತಿದ್ದು,ಕೂಬಿಂಗ್‌ ಸ್ಪೆಷಲಿಸ್ಟ್‌ ಎಂದೆ ಹೆಸರುವಾಸಿಯಾಗಿರುವ ಅಭಿಮನ್ಯುಆನೆಎರಡನೇ ಬಾರಿಗೆಅಂಬಾರಿ ಹೊರಲಿದ್ದಾನೆ.ಈಗಾಗಲೇ ಅರಣ್ಯ ಇಲಾಖೆಅಧಿಕಾರಿಗಳ ತಂಡ ಅಭಿಮನ್ಯು ನೇತೃತ್ವದಲ್ಲಿ 8 ಆನೆ ಗಳನ್ನು ಕರೆತರಲು ಸಿದ್ಧತೆ ನಡೆಸಿದ್ದು, ಸೆ.13ರಂದು ವೀರನ ಹೊಸಳ್ಳಿಯಲ್ಲಿ ನಡೆಯುವ ಗಜಪಯಣದಲ್ಲಿ ಸರಳವಾಗಿ ಪೂಜೆ ಸಲ್ಲಿಸಿ ಆನೆ ಗಳನ್ನು ಕರೆತರಲಾಗುತ್ತಿದೆ.ಈ ಬಾರಿಯ ದಸರಾ ಉತ್ಸವಕ್ಕೆ ಮತ್ತಿಗೋಡು ಆನೆ ಶಿಬಿರದ ಅಭಿಮನ್ಯುಹಾಗೂ ಗೋಪಾಲಸ್ವಾಮಿ ದೊಡ್ಡ ಹರವೆ ಆನೆ ಶಿಬಿರದ ಅಶ್ವತ್ಥಾಮ, ದುಬಾರೆಆನೆ ಶಿಬಿರ ದಧನಂಜಯ, ವಿಕ್ರಮ, ಕಾವೇರಿ, ರಾಮಾಪುರ ಆನೆ ಶಿಬಿರದ ಚೈತ್ರಾ,ಲಕ್ಷ್ಮೀ ಆನೆಗಳನ್ನು ಆಯ್ಕೆ ಮಾಡಲಾಗಿದ್ದು, 411ನೇದಸರಾ ಉತ್ಸವದಲ್ಲಿಪಾಲ್ಗೊಳ್ಳಲಿವೆ.

Advertisement

ಅಭಿಮನ್ಯು
ಹುಲಿ ಸೆರೆ, ಆನೆ ಪಳಗಿಸುವುದರಲ್ಲಿ ನಿಸ್ಸಿಮ
1970ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾದ ಈ ಆನೆಯು ಕೂಬಿಂಗ್‌ ಸ್ಪೆಷಲಿಸ್ಟ್‌ ಎಂದೇ ಜನಪ್ರಿಯವಾಗಿದೆ.
ಕಾಡಾನೆ, ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಹಾಗೂ ಆನೆ ಪಳಗಿಸುವುದರಲ್ಲಿ ನಿಸ್ಸೀಮ.ಈವರೆಗೆ 150 ಕಾಡಾನೆ ಹಾಗೂ 50 ಹುಲಿಗಳನ್ನು ಸೆರೆ ಹಿಡಿ ಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಯಶಸ್ವಿಯಾಗಿರುವುದು ವಿಶೇಷ. 56 ವರ್ಷದ ಅಭಿಮನ್ಯು ಆನೆಗೆ ಮಾವುತನಾಗಿ ವಸಂತ, ಕವಾಡಿಗನಾಗಿm ರಾಜು ಇದ್ದು, ಈ ಆನೆ 2,72 ಮೀತ್ತರ, 3.51 ಉದ್ದವಿದ್ದು 4,720 ಕೆ.ಜಿ. ತೂಕವನ್ನು ಹೊಂದಿದೆ

ಲಕ್ಷ್ಮೀ
ಗಜಪಡೆಯ ಪ್ರಮುಖ ಆಕರ್ಷಣೆ ಲಕ್ಷ್ಮೀ
ಗಜಪಡೆಯ ಗಂಡಾನೆಗಳಿಗೆ ಪ್ರಮುಖ ಆಕರ್ಷಣೆಯಾಗಿರುವ ಈಕೆ 20ರ ಹರೆಯದ ಸುಂದರಿ. ಅತಿ ಚಿಕ್ಕವಯಸ್ಸಿನ ಲಕ್ಷ್ಮೀ ರಾಮಾಪುರ ಆನೆ ಶಿಬಿರದ ಈಕೆ ತಾಯಿಯಿಂದ ಬೇರ್ಪಟ್ಟು ಅನಾಥಳಾಗಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ಕರೆತಂದು ಆರೈಕೆ ಮಾಡಿರುತ್ತಾರೆ. ಆನೆ ಮತ್ತು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ಈ ಆನೆ 2019ರ ದಸರಾ ಉತ್ಸವದಲ್ಲಿ ಪಾಲ್ಗೊಂಡಿದೆ. 20 ವರ್ಷ ವಯೋಮಾನದ ಲಕ್ಷ್ಮೀ 2.32 ಮೀಟರ್‌ ಎತ್ತರ ಹಾಗೂ 2.60 ಮೀಟರ್‌ ಉದ್ದವಿದ್ದು 2,540 ಕೆ.ಜಿ. ತೂಕವಿದ್ದಾಳೆ. ಈಕೆಗೆ ಚಂದ್ರ ಮತ್ತು ಲವ ಮಾವುತ ಮತ್ತು ಕವಾಡಿಗನಾಗಿ ಕೆಲಸ ಮಾಡುತ್ತಿದ್ದಾರೆ.

ಗೋಪಾಲಸ್ವಾಮಿ
ಸೌಮ್ಯ ಸ್ವಭಾವದ ಗೋಪಾಲಸ್ವಾಮಿ
ಮತ್ತಿಗೋಡು ಆನೆ ಶಿಬಿರದ ಗೋಪಾಲಸ್ವಾಮಿ ಆನೆಯನ್ನು 2009ರಲ್ಲಿ ಸಕಲೇಶಪುರದ ಎತ್ತೂರಿನಲ್ಲಿ ಸೆರೆ ಹಿಡಿಯಲಾಯಿತು. ಕಾಡಾನೆ
ಮತ್ತು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗುವುದಲ್ಲದೇ, 2012ರಿಂದ ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದ್ದಾನೆ.
ಸೌಮ್ಯ ಸ್ವಭಾವದ ಗೋಪಾಲಸ್ವಾಮಿಗೆ 38 ವರ್ಷಗಳಾಗಿದ್ದು 2.85 ಎತ್ತರ ಹಾಗೂ 3.42 ಮೀಟರ್‌ ಉದ್ದವಿರುವ ಈ ಆನೆ 4,420 ಕೆ.ಜಿ. ತೂಕವಿದೆ. ಮಾವುತನಾಗಿ ಜೆ.ಡಿ. ಮಂಜು. ಕವಾಡಿಗನಾಗಿ ಸೃಜನ್‌ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಕ್ರಮ
ದಸರಾದಲ್ಲಿ ಪಟ್ಟದ ಆನೆ ವಿಕ್ರಮ
ಕಳೆದ 18 ವರ್ಷಗಳಿಂದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಈ ಆನೆ 2015ರಿಂದ ಪಟ್ಟದ ಆನೆಯಾಗಿ ಗಮನ ಸೆಳೆದಿದೆ. 1990ರಲ್ಲಿ ದೊಡ್ಡಬೆಟ್ಟ ಅರಣ್ಯದಲ್ಲಿ ಸೆರೆ ಹಿಡಿಯಲಾದ ಈ ಆನೆ ಮೃದು ಸ್ವಭಾವ ಉಳ್ಳದ್ದು. ದುಬಾರೆ ಆನೆ ಶಿಬಿರದ ವಿಕ್ರಮ ಆನೆಗೆ 58 ವರ್ಷಗಳಾಗಿದ್ದು, 2.89 ಮೀಟರ್‌ ಎತ್ತರ ಹಾಗೂ 3.43 ಮೀಟರ್‌ ಉದ್ದವಿದ್ದು, 3,820 ಕೆ.ಜಿ. ತೂಕ ಹೊಂದಿದೆ. ಪುಟ್ಟ ಮತ್ತು ಹೇಮಂತ್‌ ಕುಮಾರ್‌ ಮಾವುತ ಮತ್ತು ಕವಾಡಿಗನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ಅಶ್ವತ್ಥಾಮ
ಬಲಿಷ್ಠ, ಸುಂದರ ಅಶ್ವತ್ಥಾಮ ಭವಿಷ್ಯದ ಅಂಬಾರಿ ಆನೆ
ಕಾಡಂಚಿನಲ್ಲಿ ಪುಂಡಾಟ ನಡೆಸಿ, ಅರಣ್ಯ ಇಲಾಖೆಗೆ ಸೆರೆ ಸಿಕ್ಕ ನಾಲ್ಕು ವರ್ಷದಲ್ಲೇ ದಸರಾ ಉತ್ಸವಕ್ಕೆ ಆಯ್ಕೆಯಾದ ಅಶ್ವತ್ಥಾಮ ಮೊದಲ ಬಾರಿಗೆ ನಾಡ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದೆ.ಸಮತಟ್ಟಾದ ಬೆನ್ನು,ಎತ್ತರ,ಸದೃಢ ಸೇಹ, ನೀಳವಾದ ದಂತಗಳು, ವಿಶಾಲವಾದ ಹಣೆಕಟ್ಟಿನಿಂದ ಬಲಿಷ್ಠ ಹಾಗೂ ಸುಂದರವಾಗಿ ಕಾಣುವ ಅಶ್ವತ್ಥಾಮ ಆನೆ ಭವಿಷ್ಯದ ಗಜಪಡೆ ನಾಯಕನನ್ನಾಗಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಈ ಬಾರಿಯ ದಸರಾದಲ್ಲಿ ಪಾಲ್ಗೊಂಡು ಯಶಸ್ವಿಯಾದರೆ ಭವಿಷ್ಯದ ಅಂಬಾರಿ ಆನೆಯಾನ್ನಾಗಿ ಮಾಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಹಾಸನ ಜಿಲ್ಲೆಯ ಸಕಲೇಶಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪದೇ ಪದೆ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನುಂಟು ಮಾಡಿದ್ದ ಕಾಡಾನೆ ಸೆರೆಗೆ ಸ್ಥಳೀಯರಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ 2017ರಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿತ್ತು. ಬಳಿಕ ದೊಡ್ಡಹರವೆ ಆನೆ ಶಿಬಿರದಲ್ಲಿ ಇಟ್ಟು ತರಬೇತಿ ನೀಡಿ ಅಶ್ವತ್ಥಾಮ ಎಂದು ನಾಮಕರಣ ಮಾಡಲಾಗಿತ್ತು. ಆರಂಭದಲ್ಲಿ ಮುಂಗೋಪಿಯಾಗಿದ್ದ ಅಶ್ವತ್ಥಾಮ ಮಾವುತ ಶಿವು ಹಾಗೂ ಕವಾಡಿಗ ಗಣೇಶನ ಮಾತು ಕೇಳುವ ಮೂಲಕ ಸೌಮ್ಯ ಸ್ವರೂಪಿಯಾಗಿ ಮಾರ್ಪಾಡಾಗಿದ್ದ. ಪ್ರಸ್ತುತ 34 ವರ್ಷದ ಅಶ್ವತ್ಥಾಮ 2.85 ಮೀಟರ್‌ ಎತ್ತರ,3.46 ಮೀಟರ್‌ ಉದ್ದ ಶರೀರ ಹೊಂದಿದ್ದು.3,630 ಕೆ.ಜಿ.ತೂಕವಿದ್ದಾನೆ.ಸಮತಟ್ಟಾದ ಬೆನ್ನು ಹೊಂದಿರುವ ಈ ಗಂಡಾನೆ ಭವಿಷ್ಯದ ಅಂಬಾರಿ ಆನೆಯಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣ ಹೊಂದಿದ್ದಾನೆ.ಈ ಹಿನ್ನೆಲೆಯಲ್ಲಿ ಮುಂದಿನ 5-8 ವರ್ಷ ದಸರಾ ಮಹೋತ್ಸವದಲ್ಲಿ ಕರೆತಂದು ತರಬೇತಿ ನೀಡಿದರೆ, 15 ವರ್ಷದ ನಂತರ ಅಂಬಾರಿ ಹೊರಲು ಅಶ್ವತ್ಥಾಮನನ್ನು ಸಜ್ಜು ಗೊಳಿಸಬಹುದು ಎಂಬ ಲೆಕ್ಕಾಚಾರ ಅರಣ್ಯ ಇಲಾಖೆಯದ್ದಾಗಿದೆ.

ಧನಂಜಯ
ಹುಲಿ ಸೆರೆಗೆ ಧನಂಜಯ ಸಹಕಾರ
ದುಬಾರೆ ಆನೆ ಶಿಬಿರದ ಧನಂಜಯ ಕಳೆದ 3 ವರ್ಷಗಳಿಂದ ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದ್ದು, 2013ರಲ್ಲಿ ಹಾಸನ ಜಿಲ್ಲೆ ಯಸಳೂರಿನಲ್ಲಿ ಸೆರೆ ಹಿಡಿಯಲಾಯಿತು. ಆನೆ ಮತ್ತು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ಈ ಆನೆಗೆ 43 ವರ್ಷಗಳಾಗಿದ್ದು, 2.92
ಮೀಟರ್‌ ಎತ್ತರ ಹಾಗೂ‌ 3.84 ಮೀಟರ್‌ ಉದ್ದವಿದ್ದು, 4,050 ಕೆ.ಜಿ. ತೂಕ ಹೊಂದಿದೆ. ಭಾಸ್ಕರ್‌ ಮತ್ತು ಮಣಿ ಮಾವುತ ಮತ್ತು ಕವಾಡಿಗನಾಗಿ ಕೆಲಸ ಮಾಡುತ್ತಿದ್ದಾರೆ.

ಚೈತ್ರಾ
ಕಾರ್ಯಾಚರಣೆಗೆ ಚೈತ್ರಾ ನೆರವು
ರಾಮಾಪುರ ಆನೆ ಶಿಬಿರದ ಈಕೆ ಅರಣ್ಯ ಇಲಾಖೆ ಆನೆ ಶಿಬಿರದಲ್ಲಿ ಗಂಗೆ ಎಂಬಾಕೆಗೆ ಜನಿಸುತ್ತಾಳೆ. ಹುಲಿ, ಆನೆ ಸೆರೆ ಹಿಡಿಯುವ ಕಾರ್ಯಾ ಚರಣೆಯಲ್ಲಿ ಭಾಗವಹಿಸುವ ಈಕೆ 2018ರಲ್ಲಿ ದಸರಾ ಉತ್ಸವದಲ್ಲಿ ಭಾಗವಹಿಸಿದ್ದಳು. 48 ವರ್ಷದ ಚೈತ್ರಾ 2.30 ಮೀಟರ್‌ ಎತ್ತರ, 3.10
ಮೀಟರ್‌ ಉದ್ದವಿದ್ದು, 2,600 ಕೆ.ಜಿ. ತೂಕವಿದೆ. ಈಕೆಯನ್ನು ಮಾವುತ ಭೀಜ, ಕವಾಡಿಗ ಕಲಿಂ ಪಾಷ ಪೋಷಣೆ ಮಾಡುತ್ತಿದ್ದಾರೆ.

ಕಾವೇರಿ
ಕಾವೇರಿ 9 ವರ್ಷದಿಂದ ದಸರಾದಲ್ಲಿ ಭಾಗಿ
ದುಬಾರೆ ಆನೆ ಶಿಬಿರದ ಈಕೆ ಕಳೆದ 9 ವರ್ಷಗಳಿಂದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, 2009ರಲ್ಲಿ ಸೋಮವಾರ ಪೇಟೆಯ ಆಡಿನಾಡೂರು ಅರಣ್ಯದಲ್ಲಿ ಸೆರೆ ಹಿಡಿಯಲಾಯಿತು. 44 ವರ್ಷದ ಕಾವೇರಿ 2.60 ಎತ್ತರ ಹಾಗೂ 3.32 ಉದ್ದವಿದ್ದು, 3,220 ಕೆಜಿ ತೂಕ
ಹೊಂದಿದೆ. ಈಕೆಗೆ ಡೋಬಿ ಮತ್ತು ರಂಜನ್‌ ಮಾವುತ ಮತ್ತು ಕವಾಡಿಗನಾಗಿ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next