Advertisement

ಭಕ್ತಿ-ಭಾವದ ಮಧ್ಯೆ ಸಡಗರದ ದಸರಾ

10:08 AM Oct 16, 2021 | Team Udayavani |

ಆಳಂದ: ಕರ್ನಾಟಕ-ಮಹಾರಾಷ್ಟ್ರ ಗಡಿಗೆ ಹೊಂದಿ ಕೊಂಡ ತಾಲೂಕು ಕೇಂದ್ರ ಪಟ್ಟಣ ಸೇರಿದಂತೆ ನೂರಕ್ಕೂ ಹೆಚ್ಚು ಹಳ್ಳಿಗಳಲ್ಲಿ ನವರಾತ್ರಿ ಉತ್ಸವ ಆಚರಿಸಲಾಯಿತು.

Advertisement

ಒಂಭತ್ತು ದಿನಗಳ ಕಾಲ ಮನೆಗಳಲ್ಲಿ ಹಾಗೂ ಸಾರ್ವಜನಿಕವಾಗಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ, ಸಾಂಪ್ರದಾಯಿಕವಾಗಿ 9 ಅಥವಾ 5 ದಿನಗಳ ಕಾಲ ತಮ್ಮ ಮನೆಗಳಲ್ಲಿ ಘಟಸ್ಥಾಪಿಸಿ, ನಿರಂತರ ದೀಪ ಹಚ್ಚಿ, ವಿಶೇಷ ವ್ರತಾಚರಣೆ ಕೈಗೊಂಡು 9ನೇ ದಿನಕ್ಕೆ ಹಬ್ಬ ಆಚರಿಸಿ ಕುಟುಂಬದವರು, ಪರಿಚಯಸ್ಥರು, ಸಂಬಂಧಿಕರು, ಬಡಾವಣೆ ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಸಾರ್ವಜನಿಕವಾಗಿ ಹಾಗೂ ದೇವಸ್ಥಾನಗಳಲ್ಲಿ ಸ್ಥಾಪಿಸಿದ ದೇವಿ ಆರಾಧನಾ ಮಹೋತ್ಸವದಲ್ಲಿ ಹೋಮ-ಹವನ, ರಂಗೋಲಿ ಸ್ಪರ್ಧೆ, ಭಜನೆ ಹೀಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆದವು.

ಪಟ್ಟಣದಲ್ಲಿ ಹನುಮಾನ ರಸ್ತೆ, ಚಕ್ರಕಟ್ಟಾ, ಬಾಳನಕೇರಿ, ಹತ್ತ್ಯಾನಗಲ್ಲಿ, ಶರಣನಗರ, ರೇವಣಸಿದ್ಧೇಶ್ವರ ಕಾಲೋನಿ, ನಾಯಕ ನಗರ ಮತ್ತಿತರ ಕಡೆ ದೇವಿ ಪ್ರತಿಷ್ಠಾಪಿಸಿ ಆರಾಧನೆ ಕೈಗೊಂಡರು. ಗ್ರಾಮೀಣ ಭಾಗದಲ್ಲಿ ಖಜೂರಿ, ಹಿರೋಳಿ, ರುದ್ರವಾಡಿ, ಮಾದನಹಿಪ್ಪರಗಾ, ಕೊಡಲಹಂಗರಗಾ, ಕಡಂಗಚಿ, ನಿಂಬರಗಾ ನರೋಣಾ, ಬಸವಣ್ಣ ಸಂಗೋಳಗಿ, ಸಾಲೇಗಾಂವ, ಹಡಲಗಿ ಮತ್ತಿತರ ಗ್ರಾಮಗಳಲ್ಲಿ ಹಬ್ಬದ ಸಡಗರ ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next