Advertisement

ದೀಪಾವಳಿಗೆ ದರ್ಶನ್‌ ಹೊಸ ಚಿತ್ರದ ಫಸ್ಟ್ ಲುಕ್

11:20 AM Oct 31, 2018 | Team Udayavani |

ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ 53ನೇ ಚಿತ್ರದ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಇದರ ನಡುವೆ  ಚಿತ್ರದ ಫ‌ಸ್ಟ್‌ಲುಕ್‌ ಅನ್ನು ಪ್ರೇಕ್ಷಕರಿಗೆ ತೋರಿಸಲು ಚಿತ್ರತಂಡ ಸಿದ್ದತೆ ಮಾಡಿಕೊಳ್ಳುತ್ತಿದೆ.

Advertisement

ಗಾಂಧಿನಗರದ ಮೂಲಗಳ ಪ್ರಕಾರ ದೀಪಾವಳಿ ಹಬ್ಬದಂದು ಚಿತ್ರದ ಫ‌ಸ್ಟ್‌ಲುಕ್‌ ಅನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಯೋಚಿಸಿದೆ ಎಂಬ ಸುದ್ದಿ ಹೊರಬಿದ್ದಿದೆ. ಇದೊಂದು ಮಾಸ್‌ ಚಿತ್ರ ಎನಿಸಿದರೂ, ಇದೊಂದು ಸಂಪೂರ್ಣ ಕೌಟುಂಬಿಕ ಕಥಾಹಂದರವಿರುವ ಚಿತ್ರ. ದರ್ಶನ್‌ ಅವರ ಚಿತ್ರಗಳಲ್ಲಿ ಅಭಿಮಾನಿಗಳು ನಿರೀಕ್ಷಿಸುವ ಕಾಮಿಡಿ, ಸೆಂಟಿಮೆಂಟ್‌, ಲವ್‌ ಎಲ್ಲವೂ ಈ ಚಿತ್ರದಲ್ಲಿರಲಿದೆ.

ಜೊತೆಗೆ ಭರ್ಜರಿಯಾಗಿ ಆ್ಯಕ್ಷನ್‌ ದೃಶ್ಯಗಳೂ ಚಿತ್ರದಲ್ಲಿರಲಿದೆ. ಅಂದಹಾಗೆ, ಈ ಚಿತ್ರಕ್ಕೆ “ರಾಬರ್ಟ್‌’ ಎಂದು ಟೈಟಲ್‌ ಇಡಲಾಗಿದೆ ಎಂಬ ಸುದ್ದಿಯೂ ಜೋರಾಗಿ ಕೇಳಿಬರುತ್ತಿದೆ. ಈ ಚಿತ್ರವನ್ನು ತರುಣ್‌ ಸುಧೀರ್‌ ನಿರ್ದೇಶಿಸುತ್ತಿದ್ದು, ಉಮಾಪತಿ ನಿರ್ಮಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next