Advertisement

ಜಂಟಲ್‌ಮನ್ ಹಾಡಿಗೆ ಸಾಥ್‌ ನೀಡಿದ ದರ್ಶನ್‌

11:14 AM Dec 26, 2019 | Lakshmi GovindaRaj |

ನಟ ಪ್ರಜ್ವಲ್‌ ದೇವರಾಜ್‌ ಅಭಿನಯದ “ಜಂಟಲ್‌ಮನ್’ ಚಿತ್ರ ಜನವರಿ ಕೊನೆಗೆ ತೆರೆಗೆ ಬರುತ್ತಿದೆ. ಮತ್ತೂಂದೆಡೆ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ, ಚಿತ್ರದ ಒಂದೊಂದೆ ಹಾಡುಗಳ ಮೂಲಕ ಪ್ರಮೋಶನ್‌ ಕೆಲಸವನ್ನು ಮಾಡುತ್ತಿದೆ.

Advertisement

ಮಂಗಳವಾರ ಚಿತ್ರದ “ನಡುಗುತಿದೆ…’ ಎನ್ನುವ ಹಾಡು ಬಿಡುಗಡೆ ಯಾಗಿದ್ದು, ಹಾಡನ್ನು ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಶೇರ್‌ ಮಾಡುವ ಮೂಲಕ “ಜಂಟಲ್‌ಮನ್’ಗೆ ಸಾಥ್‌ ನೀಡಿದ್ದಾರೆ. ವಸಿಷ್ಠ ಸಿಂಹ ಗಾಯನದಲ್ಲಿ ಮೂಡಿಬಂದಿರುವ ಈ ಹಾಡಿಗೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದಾರೆ.

“ಜಂಟಲ್‌ಮನ್’ ಚಿತ್ರದಲ್ಲಿ ನಾಯಕ ಪ್ರಜ್ವಲ್‌ ದೇವರಾಜ್‌ “ಸ್ಲಿಪಿಂಗ್‌ ಸಿಂಡ್ರೋಮ್‌’ ಅಥವಾ ಹೈಪರ್‌ ಸೋಮ್ನಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ದಿನಕ್ಕೆ 18 ಗಂಟೆ ಮಾಡುವ ನಿದ್ರೆ ಮಾಡುವ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ಗೆ ನಾಯಕಿಯಾಗಿ ನಿಶ್ವಿ‌ಕಾ ನಾಯ್ಡು ಜೋಡಿಯಾಗಿದ್ದಾರೆ. ಗುರುದೇಶಪಾಂಡೆ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಜಡೇಶ್‌ ಕುಮಾರ್‌ ಹಂಪಿ ನಿರ್ದೇಶನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next