Advertisement

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು

12:30 AM Jun 18, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಆರೋಪಿ ನಟ ದರ್ಶನ್‌ ಹಾಗೂ ಇತರ ಕೆಲವರನ್ನು ಸೋಮವಾರ ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ ಆ್ಯಂಡ್‌ ಪಬ್‌ಗ ಕರೆತಂದು ಸ್ಥಳ ಮಹಜರು ನಡೆಸಿದರು.

Advertisement

ಮತ್ತೊಂದೆಡೆ ಹಾಸ್ಯನಟ ಚಿಕ್ಕಣ್ಣನನ್ನು ಪಬ್‌ಗ ಕರೆಸಿಕೊಂಡು ಅವರಿಂದಲೂ ಸ್ಥಳ ಮಹಜರು ನಡೆಸಿದರು.

ನಟ ದರ್ಶನ್‌, ಪಬ್‌ ಮಾಲಕ ವಿನಯ್‌, ಸಹಚರರಾದ ಪ್ರದೂಷ್‌, ಪವನ್‌ನನ್ನು ಪಬ್‌ಗ ಕರೆತಂದು 1 ಗಂಟೆ ಕಾಲ ಸ್ಥಳ ಪಬ್‌ನ ಎಲ್ಲೆಡೆ ಶೋಧಿಸಿದರು. ಬಳಿಕ ಬಂಧಿತರನ್ನು ಠಾಣೆಗೆ ಕರೆದೊಯ್ದರು.

ಜೂ. 8ರಂದು ರೇಣುಕಾಸ್ವಾಮಿ ಕೊಲೆಗೂ ಮೊದಲು ಆರೋಪಿ ನಟ ದರ್ಶನ್‌ ಹಾಗೂ ಸಚಹರರು ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ಪಾರ್ಟಿ ನಡೆಸಿದ್ದು, ಚಿಕ್ಕಣ್ಣ ಸಹ ಭಾಗಿಯಾಗಿದ್ದರು. ಪಾರ್ಟಿಯಲ್ಲಿರುವಾಗಲೇ ದರ್ಶನ್‌ ಮೊಬೈಲ್‌ಗೆ ಕರೆಯೊಂದು ಬಂದಿದ್ದು, ಕೂಡಲೇ ದರ್ಶನ್‌ ಕೊಂಚ ಕೆಲಸವಿದೆ ಎಂದು ಹೇಳಿ ಹೊರ ನಡೆದಿದ್ದರು ಎಂದು ತಿಳಿದು ಬಂದಿದೆ.

ಪಬ್‌ನಲ್ಲೇ ಕೊಲೆಗೆ ಸಂಚು?
ರೇಣುಕಾಸ್ವಾಮಿ ಕೊಲೆಗೂ ಮುನ್ನ  ಪಬ್‌ನಲ್ಲಿ ನಡೆದ ಪಾರ್ಟಿಯಲ್ಲಿ ನಟ ದರ್ಶನ್‌ ಹಾಗೂ ಇತರ ಆರೋಪಿಗಳು ಭಾಗಿಯಾಗಿದ್ದರು. ಹೀಗಾಗಿ ಈ ರೆಸ್ಟೋರೆಂಟ್‌ನಲ್ಲೇ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಈಗಾಗಲೇ ಪಬ್‌ನ ಸಿಸಿ ಕೆಮರಾ ದೃಶ್ಯಾವಳಿ ಸಂಗ್ರಹಿಸಿರುವ ಪೊಲೀಸರು, ಅಂದು ನಟ ದರ್ಶನ್‌ ಜತೆ ಯಾರೆಲ್ಲ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಈ ಮಾಹಿತಿ ಮೇರೆಗೆ ಹಾಸ್ಯ ನಟ ಚಿಕ್ಕಣ್ಣನನ್ನು ಕರೆಸಿ ಮಹಜರು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಊಟಕ್ಕೆ ಬಂದಿದ್ದೆ, ಬೇರೇನೂ ಗೊತ್ತಿಲ್ಲ: ಚಿಕ್ಕಣ್ಣ
ಜೂ. 8ರಂದು ದರ್ಶನ್‌ ಕರೆ ಮಾಡಿ ಪಬ್‌ಗ ಊಟಕ್ಕೆ ಕರೆದಿದ್ದರು. ಅದರಂತೆ ಪಾರ್ಟಿಯಲ್ಲಿ ಭಾಗವಹಿಸಿದ್ದು ನಿಜ. ಊಟ ಮಾಡಿ ಹೊರಟ್ಟಿದೆ. ರೇಣುಕಾಸ್ವಾಮಿ ಯಾರೆಂದು ಗೊತ್ತಿಲ್ಲ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚಿಕ್ಕಣ್ಣ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಯಶಸ್‌ ಸೂರ್ಯಗೆ ನೋಟಿಸ್‌?
ದರ್ಶನ್‌ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಗರಡಿ ಸಿನೆಮಾ ನಾಯಕ ನಟ ಯಶಸ್‌ ಸೂರ್ಯ ಕೂಡ ಪಬ್‌ನಲ್ಲಿ ನಡೆದ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದ್ದು, ಅವರಿಗೂ ತನಿಖಾಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next