ಮಣಿಪಾಲ: ಐಐಟಿಗಳ ಡಿಸೈನ್ ವಿಭಾಗದ ಪ್ರವೇಶಕ್ಕೆ ನಡೆ ಸುವ ರಾಷ್ಟ್ರಮಟ್ಟದ ಯುಸೀಡ್ ಪರೀಕ್ಷೆ ಯಲ್ಲಿ ಮಂಗಳೂರಿನ ಡರೆನ್ ಮ್ಯಾಥ್ಯೂ ಲೋಬೋ 6ನೇ ರ್‍ಯಾಂಕ್ ಗಳಿಸಿದ್ದಾರೆ. ದೇಶಾದ್ಯಂತ 9,000 ಮಂದಿ ಯುಸೀಡ್ ಪರೀಕ್ಷೆ ಬರೆ ದಿದ್ದು ಮಂಗಳೂರಿನಿಂದ ತೇರ್ಗಡೆಯಾಗಿರು ವುದು ಲೋಬೊ ಮಾತ್ರ.
ಕರ್ನಾಟಕ ಸಿಇಟಿ ಆರ್ಕಿಟೆಕ್ಚರ್ ವಿಭಾಗದಲ್ಲಿ ಆದಿತ್ಯ ಕರಿಯ ಮತ್ತು ಫ್ರಿಜ್ಜೆಲ್ ಡಿ’ಸೋಜಾ ಕ್ರಮವಾಗಿ 9ನೇ ಮತ್ತು 14ನೇ ರ್‍ಯಾಂಕ್ ಗಳಿಸಿದ್ದಾರೆ. ಈ 3 ಮಂದಿ ಡಿಸೈನ್ ಕೋಷಂಟ್ ಲ್ಯಾಬ್ಸ್ (ಡಿಕ್ಯೂ ಲ್ಯಾಬ್ಸ್) ವಿದ್ಯಾರ್ಥಿಗಳು. ಇವರು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಯುಸೀಡ್, ಎನ್‌ಐಡಿ,ಎನ್‌ಎಟಿಎ ಮತ್ತು ಎನ್‌ಐಎಫ್ಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವುದು ಹೇಗೆ ಎಂದು ಮಾರ್ಗದರ್ಶನ ನೀಡಲಿದ್ದಾರೆ. ಎನ್‌ಐಡಿಯಲ್ಲಿ 1ನೇ ರ್‍ಯಾಂಕ್ ಗಳಿಸಿರುವ ಮನಸ್ವಿನಿ, ಆರ್ಕಿಟೆಕ್ಚರ್‌ನಲ್ಲಿ ಕ್ರಮವಾಗಿ 2ನೇ ಮತ್ತು 6ನೇ ರ್‍ಯಾಂಕ್ ಗಳಿಸಿರುವ ಪೂರ್ಣಿಮಾ ಸುಬ್ರಮಣಿಯಂ ಮತ್ತು ಅನಿರುದ್ಧ್ ಶಂಕರ್ ಸ್ಕೈಪ್ ಮೂಲಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.
ವಿನ್ಯಾಸಗಾರರಾಗಲು ಅತ್ಯುನ್ನತ ಮಟ್ಟದ ಸೃಜನಶೀಲತೆಯ ಅಗತ್ಯವಿದೆ. ತರಗತಿಗಳಲ್ಲಿ ಸೃಜನಶೀಲತೆ ಯನ್ನು ಪ್ರೋತ್ಸಾಹಿ ಸುವ ಮತ್ತು ಅರ್ಥ ಪೂರ್ಣ ಕಲಾಕೃತಿ ಗಳನ್ನು ರಚಿಸುವ ವಾತಾವರಣ ವಿದ್ದರೆ ಮಾತ್ರ ಈ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬಹುದು. ಎನ್‌ಐಡಿ ಪದವಿ ಹೊಂದಿರುವವರು ಐಐಟಿ ಬಾಂಬೆ ಅಥವಾ ಐಐಟಿ ಖರಗ್‌ಪುರದ ಪದವೀಧರರಿಗಿಂತಲೂ ಹೆಚ್ಚಿನ ವೇತನ ಪಡೆಯುತ್ತಿದ್ದಾರೆ.
ಎನ್‌ಐಡಿ ಅಹ್ಮದಾಬಾದ್ ವಿದ್ಯಾರ್ಥಿಗಳು ವಾರ್ಷಿಕ 72 ಲ.ರೂ.ಗಿಂತ ಅಧಿಕವೇತನ ಎಣಿಸುತ್ತಿದ್ದಾರೆ. ಎನ್‌ಐಡಿ ಅತ್ಯಂತ ಸ್ಪರ್ಧಾತ್ಮಕ ಮಾತ್ರವಲ್ಲದೆ ಬಹಳ ಬೇಡಿಕೆಯಿರುವ ಪದವಿಯಾಗಿದೆ ಎಂದು ಡಿಕ್ಯೂ ಲ್ಯಾಬ್ಸ್ ಸಹ ಸಂಸ್ಥಾಪಕ ಉಮೇಶ್ ಕುಮಾರ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯ ಕೊರತೆಯಿಲ್ಲ, ಆದರೆ ಅದನ್ನು ಪ್ರದರ್ಶಿಸಲು ಅವಕಾಶ ಸಿಗುವುದಿಲ್ಲ. ಜನರಲ್ ಮೋಟಾರ್ನ ಅಡ್ವಾನ್ಸ್‌ಡ್ ಡಿಸೈನ್ ಸ್ಟುಡಿಯೊದಲ್ಲಿ ಕೆಲಸ ಮಾಡು ತ್ತಿರುವಾಗ ನನಗಿದರ ಅನುಭವವಾಗಿದೆ ಎಂದು ಇನ್ನೋರ್ವ ಸಹ ಸಂಸ್ಥಾಪಕ ಶೌನ್ ಹೇಳಿದ್ದಾರೆ.
ಡಿಸೈನ್ ಕೋಷಂಟ್ ಲ್ಯಾಬ್ಸ್ನ ಒಂದು ಕೇಂದ್ರ ಮಂಗಳೂರಿನಲ್ಲಿ ರವಿವಾರ ಪ್ರಾರಂಭವಾಗಿದೆ. ಇಲ್ಲಿ ಡಿಸೈನ್, ಆರ್ಕಿಟೆಕ್ಚರ್ ಮತ್ತು ಫ್ಯಾಷನ್ ಕಲಿಸಲಾಗುತ್ತದೆ.