Advertisement

ತಂಡಕ್ಕೆ ಮರಳಿದ ಬ್ರಾವೋ

12:30 AM Jan 17, 2019 | |

ಬ್ರಿಡ್ಜ್ಟನ್‌:  ವೆಸ್ಟ್‌ಇಂಡೀಸ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸಮನ್‌ ಡ್ಯಾರೆನ್‌ ಬ್ರಾವೋ ಅವರನ್ನು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ  ಮರಳಿ ಕರೆಸಿಕೊಳ್ಳಲಾಗಿದೆ.

Advertisement

23 ರಂದು ಆರಂಭವಾಗಲಿರುವ ಮೊದಲ ಟೆಸ್ಟ್‌ ಪಂದ್ಯಕ್ಕೆ ಆಲ್‌ರೌಂಡರ್‌ ಶಮರ್‌ ಬ್ರೂಕ್ಸ್‌ ಹಾಗೂ ಆರಂಭಿಕಕಾರ ಜಾನ್‌ ಕ್ಯಾಪ್‌ಬೆಲ್‌ ಮೊದಲ ಬಾರಿಗೆ ಟೆಸ್ಟ್‌ ಕ್ಯಾಪ್‌ ತೊಡಲಿದ್ದಾರೆ. ಬ್ರಾವೋ ಅವರೊಂದಿಗೆ ವೇಗಿ ಅಲ್ಜರಿ ಜೋಸೆಫ್ ಅವರು ಕೂಡ ಮರಳಿದ್ದಾರೆ.

ಸಾಮಾಜಿಕ ಜಾಲಾತಾಣದಲ್ಲಿ ವೆಸ್ಟ್‌ಇಂಡೀಸ್‌ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಡೇವ್‌ ಕ್ಯಾಮೆರನ್‌ ಅವರನ್ನು ಟೀಕೆ ಮಾಡಿದ ಕಾರಣ ಬ್ರಾವೋ ಅವರನ್ನು ತಂಡದಿಂದ ಅಮಾನತುಗೊಳಿಸಲಾಗಿತ್ತು. ಬ್ರಾವೋ 2016ರ ಅನಂತರ ಟೆಸ್ಟ್‌ ಪಂದ್ಯಗಳನ್ನು ಆಡಿರಲಿಲ್ಲ. ಕಳೆದ ನವೆಂಬರ್‌ನಲ್ಲಿ ಏಕದಿನ ಹಾಗೂ ಟಿ20 ಕ್ರಿಕೆಟ್‌ಗೆ ಬ್ರಾವೋ ಮರಳಿದ್ದರು.

ಡ್ಯಾರೆನ್‌ ಬ್ರಾವೋ ಅವರ ಮರಳುವಿಕೆಯೂ ಬ್ಯಾಟಿಂಗ್‌ ವಿಭಾಗಕ್ಕೆ ಹೆಚ್ಚಿನ ಮೌಲ್ಯ ತರಲಿದೆ. ಬ್ಯಾಟಿಂಗ್‌ ವಿಭಾಗದಲ್ಲಿ ಇನ್ನಷ್ಟು ಅಭಿವೃದ್ಧಿಯ ಅಗತ್ಯವಿದೆ. ಕಳೆದ 3 ವರ್ಷಗಳಲ್ಲಿ ಬ್ರೂಕ್ಸ್‌ ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಹಾಗೂ ವೆಸ್ಟ್‌ಇಂಡೀಸ್‌ “ಎ’ ತಂಡದ ಆರಂಭಿಕಕಾರ ಜಾನ್‌ ಉತ್ತಮ ಬ್ಯಾಟ್ಸ್‌ಮನ್‌ ಇವರಿಬ್ಬರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಆಯ್ಕೆಗಾರರ ಅಧ್ಯಕ್ಷ ಕೊರ್ಟ್ನಿ ಬ್ರೌನೆ ತಿಳಿಸಿದ್ದಾರೆ.

ವೆಸ್ಟ್‌ಇಂಡೀಸ್‌ ತಂಡ ಇಂಗ್ಲೆಂಡ್‌ ವಿರುದ್ಧ 3 ಟೆಸ್ಟ್‌, 5 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next