Advertisement

ಲವ್ ಮಾಕ್ಟೇಲ್ 2 ಬಿಡುಗಡೆಗೆ ಸಿದ್ದ: ರಿಲೀಸ್ ದಿನಾಂಕ ಘೋಷಣೆ

11:57 AM Dec 20, 2021 | Team Udayavani |

ಕೊರೋನಾ ಭಯ ಮತ್ತು ಆತಂಕದ ನಡುವೆಯೇ 2020ರ ಆರಂಭದಲ್ಲಿ ತೆರೆಗೆ ಬಂದಿದ್ದ “ಲವ್‌ ಮಾಕ್ಟೇಲ್‌’ ಸ್ಯಾಂಡಲ್‌ವುಡ್‌ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಜೋಡಿಯಾಗಿ ಅಭಿನಯಿಸಿದ್ದ “ಲವ್‌ ಮಾಕ್ಟೇಲ್‌’ ಬಾಕ್ಸಾಫೀಸ್‌ ನಲ್ಲೂ ಉತ್ತಮ ಗಳಿಕೆ ಕಂಡಿದ್ದಲ್ಲದೆ, ಬಳಿಕ ಓಟಿಟಿಯಲ್ಲೂ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅದಾದ ಬಳಿಕ, ಇದೇ ಖುಷಿಯಲ್ಲಿ ಚಿತ್ರತಂಡ, “ಲವ್‌ ಮಾಕ್ಟೇಲ್‌ 2′ ಚಿತ್ರವನ್ನು ಘೋಷಣೆ ಮಾಡಿತ್ತು.

Advertisement

ಇದೀಗ “ಲವ್‌ ಮಾಕ್ಟೇಲ್‌-2′ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರ “ಯು’ ಸರ್ಟಿಫಿಕೆಟ್‌ ಪಡೆದುಕೊಳ್ಳುವ ಮೂಲಕ ಸೆನ್ಸಾರ್‌ನಿಂದಲೂ ಬಿಡುಗಡೆಗೆ ಗ್ರೀನ್‌ ಸಿಗ್ನಲ್‌ ಪಡೆದುಕೊಂಡಿದೆ. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಚಿತ್ರದ ಹಾಡುಗಳಿಗೆ ಕೂಡ ಉತ್ತಮ ರೆಸ್ಪಾನ್ಸ್‌ ಸಿಗುತ್ತಿದ್ದು, ಇದೀಗ “ಲವ್‌ ಮಾಕ್ಟೇಲ್‌ 2′ ಚಿತ್ರದ ಬಿಡುಗಡೆಯ ದಿನಾಂಕ ಕೂಡ ಅನೌನ್ಸ್‌ ಮಾಡಿದೆ.

ಮುಂಬ ರುವ ಫೆಬ್ರವರಿ 11ರಂದು ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿರುವ ಚಿತ್ರತಂಡ ಈ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ:36 ವರ್ಷಗಳ ಬಳಿಕ ಈಡೇರಿತು ಕಿಚ್ಚನ ಆಸೆ: ಫೋಟೋ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ!

“ಲವ್‌ ಮಾಕ್ಟೇಲ್‌-2′ ಚಿತ್ರದ ಹಾಡುಗಳಿಗೆ ನಕುಲ್‌ ಅಭ್ಯಂಕರ್‌ ಸಂಗೀತ ಸಂಯೋಜನೆ ಯಿದೆ. ಚಿತ್ರದ ಹಾಡುಗಳಿಗೆ ರಾಘವೇಂದ್ರ ಕಾಮತ್‌ ಸಾಹಿತ್ಯವಿದೆ. ಚಿತ್ರಕ್ಕೆ ಕ್ರೇಜಿಮೈಂಡ್ಸ್‌ ಶ್ರೀ ಛಾಯಾಗ್ರಹಣ ಮತ್ತು ಸಂಕಲವಿದೆ. “ಕೃಷ್ಣ ಟಾಕೀಸ್‌’ ಬ್ಯಾನರ್‌ನಲ್ಲಿ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ನಿರ್ಮಿಸಿರುವ “ಲವ್‌ ಮಾಕ್ಟೇಲ್‌-2′ ಚಿತ್ರಕ್ಕೆ ಡಾರ್ಲಿಂಗ್‌ ಕೃಷ್ಣ, ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next