Advertisement

ಕಿಟಿಕಿಯಾಚೆಗಿನ ಕತ್ತಲು

06:10 AM Nov 26, 2017 | Harsha Rao |

ಕಿಟಿಕಿಯಿಂದ ಆಚೆ ನೋಡುತ್ತಿದ್ದಳು ಅನು. ಗಾಢ ಕತ್ತಲೆ ಕಣ್ಣಿಗೆ ರಾಚುತ್ತಿತ್ತು. ಚಿಕ್ಕಪುಟ್ಟ ಕೀಟಗಳ ಸದ್ದು “ಗುಂಯ್‌ ಗುಂಯ್‌’ ಅನ್ನುತ್ತಾ ಕಿವಿಗೆ ಅಪ್ಪಳಿಸುತ್ತಿತ್ತು. ಆಗಲೇ ಗಂಟೆ 5.30 ಆಯ್ತು. ಇನ್ನು ಸ್ಪಲ್ಪ ಹೊತ್ತು ಕಳೆದರೆ ಬೆಳಕು ಮೂಡುತ್ತದೆ. ಗೋಡೆ ಗಡಿಯಾರದತ್ತ ನೋಡಿ ನಿಟ್ಟುಸಿರುಬಿಟ್ಟಳು. ಚಳಿಗಾಲವಾದ್ದರಿಂದ ಬೆಳಗಾಗುವುದು ಸ್ಪಲ್ಪ ತಡವಾಗಿಯೇ. ಮತ್ತೂಮ್ಮೆ ಬ್ಯಾಗ್‌ ಚೆಕ್‌ ಮಾಡಿಕೊಂಡಳು. ಅವನು ಕೊಡಿಸಿದ ಚೂಡಿದಾರ್‌, ಜುಮುಕಿ, ಕೀ ಬಂಚ್‌ನ್ನು ನೋಡಿ ಮತ್ತೆ ಹಾಗೆಯೇ ಜೋಡಿಸಿಟ್ಟಳು. ಲವರ್ ಕೀ ಬಂಚ್‌ ಕೊಡಿಸಿದರೆ ಚಂದ ಅಂತ ಹೇಳಿದವರು ಯಾರು? ಅವನಂತೂ ಲೆಕ್ಕವಿಲ್ಲದಷ್ಟು ಕೀ ಬಂಚ್‌ ಕೊಡಿಸಿ¨ªಾನೆ. ಯಾಕೆ ಅಷ್ಟೊಂದು ಪ್ರೀತಿಸುತ್ತಾನಾ? ಇಲ್ಲ , ಪ್ರೀತಿಯನ್ನು ತೋರ್ಪಡಿಸುವ ರೀತಿಯೋ, ಅರ್ಥವಾಗಲ್ಲಿಲ್ಲ.

Advertisement

ಏನನ್ನಿಸಿತೋ, ಬ್ಯಾಗ್‌ ಮತ್ತೆ ತೆರೆದು, ತಳದಲ್ಲಿದ್ದ ಅಪ್ಪ ಕೊಡಿಸಿದ್ದ ಆ ಹಸಿರು, ಹಳದಿ ಮಿಶ್ರಿತ ಸೀರೆಯನ್ನು ತೆಗೆದು ಗೋದ್ರೆಜ್‌ ಒಳಗೆ ಇಟ್ಟಳು. ಯಾಕೋ ಅಪ್ಪ ಪ್ರೀತಿಯಿಂದ ಕೊಡಿಸಿದ ಆ ಸೀರೆಯನ್ನು ತನ್ನ ಯಾನದಲ್ಲಿ ಜತೆಯಾಗಿಸಲು ಇಷ್ಟವಾಗಲಿಲ್ಲ. ದೂರದÇÉೆÇÉೋ “ಕ್ಕೋ… ಕ್ಕೋ… ಕ್ಕೋ…’ ಎಂದು ಕೊಳಿ ಕೂಗಿದ ಸದ್ದು ಕೇಳಿಸಿತು. ಮತ್ತೆ ಕಿಟಿಕಿಯಾಚೆ ದಿಟ್ಟಿಸಿ ನೋಡಿದಳು. ನಾನು ಮಾಡುತ್ತಿರುವುದು ಸರೀನಾ… ಗೊಂದಲ ತಲೆ ತುಂಬಾ ಗಿರಗಟ್ಟಲೆ ಹೊಡೆಯಿತು. ಉತ್ತರ ಸಿಗಲಿಲ್ಲ. “”ಏಕಾಏಕಿ ಕಷ್ಟಪಟ್ಟು ಸಾಕಿ ಸಲಹಿದ ಅಪ್ಪ-ಅಮ್ಮನನ್ನು ಬಿಟ್ಟು ಹೋಗುತ್ತಿದ್ದೀಯಲ್ಲ… ಅವರು ಇಷ್ಟು ವರ್ಷ ನೀಡಿದ ಪ್ರೀತಿಗೆ ಅರ್ಥವಿಲ್ವಾ?” ಕಗ್ಗತ್ತಲು ಏನೋ ಮಾತನಾಡಿದಂತೆ ತೋರಿತು. 

ತೋಟದಾಚೆಯ ಮನೆಯಲ್ಲಿ ಸ್ಪಲ್ಪ ಬೆಳಕು ಕಾಣಿಸುತ್ತಿತ್ತು. ಸುಶೀಲಕ್ಕನ ಮಗನಿಗೆ ಕಣ್ಣೂರಿನÇÉೆಲ್ಲೋ ಕೆಲಸ. ಒಬ್ಬನೇ ಮಗ ಆದ ಕಾರಣ, ಯಾವತ್ತೂ ಮನೆಯಿಂದ ಹೋಗಿ ಬರುತ್ತಾ¤àನೆ. ಅದಕ್ಕೇ ಅವರು ಬೆಳಗ್ಗೆ ಬೇಗನೆದ್ದು ತಿಂಡಿ, ಊಟ ರೆಡಿ ಮಾಡುತ್ತಿರುತ್ತಾರೆ. ಅಪ್ಪ-ಅಮ್ಮನೆಂದರೆ ಅವನಿಗೂ ಬೆಟ್ಟದಷ್ಟು ಪ್ರೀತಿ, ಗೌರವ. ನೆರೆಮನೆಯವರೆಲ್ಲ ಸೇರಿದರೆ ಅವರಿಗೆಲ್ಲ ಮಾತನಾಡಲು ಇರುವುದು ಅವನ ಮಾತೃಪ್ರೇಮದ ಬಗ್ಗೆಯೇ. ಸುಶೀಲಕ್ಕ ಬೆಳಗ್ಗಿನ ತಿಂಡಿಗೆ ನೀರು ದೋಸೆ ಮಾಡುತ್ತಿರಬೇಕು. “ಘಮ್‌’ ಎನ್ನುವ ಪರಿಮಳ ಮೂಗಿಗೆ ಬಡಿಯಿತು.

ಇನ್ನು ಸ್ಪಲ್ಪ ಹೊತ್ತು ಕಳೆದರೆ ಮುಗಿಯಿತು. ಮನೆಮಂದಿ ಏಳುವಾಗ ಏನಿಲ್ಲವಾದರೂ ಆರೂವರೆಯಾದರೂ ಆಗುತ್ತದೆ. ಅಷ್ಟೊತ್ತಿಗೆ ಗೇಟು ದಾಟಿ ಬಿಡಬಹುದು. ಸ್ಪಲ್ಪ ಭಾರವಿದ್ದ ಬ್ಯಾಗ್‌ನ್ನು ಕೊಂಡೊಯ್ಯಲು ಅನುಕೂಲವಾಗುವಂತೆ ಬಾಗಿಲವರೆಗೆ ತಂದಿಟ್ಟಳು.

ಮನೆಯಲ್ಲಿ ಮೊದಲು ಏಳುವವರು ಅಪ್ಪ. ಎದ್ದ ತಕ್ಷಣ ತೋಟದÇÉೆÇÉಾ ಒಂದು ರೌಂಡ್‌. ಮತ್ತೆ ಹೂವಿನ ತೋಟಗಳಿಗೆಲ್ಲ ನೀರು ಹಾಯಿಸಿ ಬಿಟ್ಟು ನಂತರವೇ ಮನೆಯೊಳಗೆ ಬರುವುದು. ಅಷ್ಟರಲ್ಲಿ ಅಮ್ಮ ಎದ್ದು ದೋಸೆ ಹಿಟ್ಟು ರೆಡಿ ಮಾಡುತ್ತಿರುವಳು. ನಂತರ  ಇಬ್ಬರೂ ಯಾವುದೋ ವಿಷಯದ ಬಗ್ಗೆ ಮಾತನಾಡುತ್ತಿರುತ್ತಾರೆ. ತಮ್ಮನ ಕಲಿಕೆಯ ಬಗ್ಗೆ, ಇಲ್ಲವಾದರೆ ಅಡಿಕೆ ರೇಟು ಕಡಿಮೆಯಾದ ಬಗ್ಗೆ. ನಿ¨ªೆಗಣ್ಣಿನಲ್ಲಿ ಇಬ್ಬರೂ ಏರುದನಿಯಲ್ಲಿ ಮಾತನಾಡುವುದು ಕೇಳುತ್ತಲೇ ಇರುತ್ತದೆ. ಮಧ್ಯೆ ಮಧ್ಯೆ, “”ಬೇಗ ಏಳಾºರ್ದಾ, ಗಂಡನ ಮನೆಗೆ ಹೋದ್ಮೇಲೆ ಗೊತ್ತಾಗುತ್ತೆ ನೋಡು” ಅನ್ನೋ ಅಮ್ಮನ ಬೈಗುಳ. 

Advertisement

ಅಪ್ಪ ತಿಂಡಿ ತಿನ್ನುವ ಹೊತ್ತಿಗೆ ಎದ್ದು ಹಲ್ಲುಜ್ಜಲು ಹೊರಡುತ್ತಾಳೆ ಅನು. ತಮ್ಮ ಮಲಗಿದ್ದಲೇ ಮೊಬೈಲ್‌ ನೋಡುತ್ತ, ಅಮ್ಮನ ಬೈಗುಳ ಕೇಳಿಯೂ ಕೇಳಿಸದಂತೆ ಮೆಸೇಜ್‌ ಮಾಡುತ್ತಿರುತ್ತಾನೆ. ಇವತ್ತೇನಾಗಬಹುದು, ಅಪ್ಪ , “”ಯಾಕೆ ಇನ್ನೂ ಎದ್ದಿಲ್ವಾ ಅವಳು?” ಅಂತ ಜೋರುದನಿಯಲ್ಲಿ ಕೇಳಬಹುದು. ಅಮ್ಮ, “”ಏಳ್ತಾಳೆ ಬಿಡಿ” ಅಂತ ಹೇಳಿ ಸುಮ್ಮನಾಗಬಹುದು. ಏಳೂವರೆ ಕಳೆದ ಮೇಲೂ ರೂಮಿನಿಂದ ಹೊರ ಬಾರದಿದ್ದರೆ ಅಮ್ಮ ಖಂಡಿತ ರೂಮಿಗೆ ಬಂದು ಇಣುಕುತ್ತಾರೆ. ಒಮ್ಮೆಗೇ ಗಾಬರಿಯಾಗುತ್ತಾರೆ. ಸಿನೆಮಾ ಸ್ಟೈಲ್‌ನಂತೆ ಕೈಯಿಂದ ದೋಸೆಯ ಸಟ್ಟುಗ ಕೆಳಗೆ ಬೀಳಬಹುದಾ… ಇಲ್ಲ, ಅಷ್ಟೊತ್ತಿಗೆ ಅಮ್ಮನ ದೋಸೆ ಹೊಯ್ಯುವ ಕೆಲಸ ಮುಗಿದಿರುತ್ತದೆ.

ಓಡೋಡಿ ಅಪ್ಪನಿಗೆ ವಿಷಯ ಮುಟ್ಟಿಸಬಹುದು. ಅಪ್ಪ ಗಾಬರಿಯಾದರೂ ತೋರಿಸಿಕೊಳ್ಳರು. “”ಬಾತ್‌ರೂಮ್‌ಗೆ ಹೋಗಿರ್ತಾಳೆ ಬಿಡು” ಅಂತಾರೆ. ತಮ್ಮ ಇÇÉೆÇÉೋ ಇರ್ತಾಳೆ ಅಂದು ಸುಮ್ಮನಾಗ್ತಾನೆ. ಅಷ್ಟರÇÉೇ ಅಮ್ಮನ ಅಳು ಶುರುವಾಗಿರುತ್ತದೆ. “”ಯಾವಾಗ್ಲೂ ಅವಳಿಗೆ ಬೈಯೆºàಡಿ ಅಂದ್ರೆ ಕೇಳಲ್ಲ. ಯಾವಾಗ್ಲೂ ಮೊಬೈಲ್‌ನÇÉೇ ಮಾತನಾಡ್ತಾ ಇರುತ್ತಿದುÉ. ಯಾರನ್ನಾದ್ರೂ ಲವ್‌ ಮಾಡ್ತಿದ್ಲೋ ಏನೋ… ಎಲ್ಲಿಗೋದುÉ?” ಅಮ್ಮನ ಅಳು ಮತ್ತೂ ಏರಬಹುದು. “”ನೀನೇನು ಅಕ್ಕಪಕ್ಕದ ಮನೆಗೂ ರಂಪಾಟ ಕೇಳಿಸ್ಬೇಕು ಅಂತಿದ್ಯಾ?” ಅಪ್ಪ ಗದರಬಹುದು. ಅಲ್ಲಿಗೆ ಎಲ್ಲರಿಗೂ ವಾಸ್ತವ ಅರಿವಾಗಿ ಬಿಡುತ್ತದೆ- ಮಗಳು ಮನೆ ಬಿಟ್ಟು ಓಡಿ ಹೋಗಿ¨ªಾಳೆಂದು. ಒಮ್ಮೆ ನಿಟ್ಟುಸಿರು ಹೊರಬಂತು.

ಮತ್ತೆ ಕಿಟಿಕಿ ಬಳಿ ಬಂದು ನಿಂತಳು ಅನು. ಹೊರಗೆ ಬೆಳಕು ಚೆನ್ನಾಗಿ ಬಂದಿತ್ತು. ಮನೆ ಮುಂದೆ ಅಪ್ಪ ನೆಟ್ಟಿದ್ದ ಮಲ್ಲಿಗೆ ಅರೆ ಬಿರಿದು ಪರಿಮಳ ಸೂಸುತ್ತಿತ್ತು. ಸ್ವೆಟರ್‌ ಮೇಲೆ ಅಮ್ಮ ಕೊಟ್ಟಿದ್ದ ಶಾಲು ಹೊದ್ದುಕೊಂಡಳು. ಕೆದರಿದ್ದ ತಲೆಗೂದಲು ಸರಿಪಡಿಸಿಕೊಂಡು ಸಪ್ಪಳವಾಗದಂತೆ ಬಾಗಿಲಾಚೆ ನಡೆದಳು. ಅರ್ಜುನ ಇಷ್ಟೊತ್ತಿಗೆ ಬಂದಿರುತ್ತಾನೆ. ನನಗಾಗಿ ಕಾಯುತ್ತಿರುತ್ತಾನೇನೋ ಪಾಪ ! ಗಾಬರಿಯಿಂದ ಬೇಗ ಬೇಗ ಹೆಜ್ಜೆ ಹಾಕಿದಳು. ಸಪ್ಪಳವಾಗದಂತೆ ಬೆಕ್ಕಿನ ಹೆಜ್ಜೆ ಇಡುತ್ತಿದ್ದವಳು, ಮನೆಯ ಗೇಟು ಕಣ್ಣಿಂದ ಮರೆಯಾದ ಮೇಲೆ ದಾಪುಗಾಲಿಡಲು ಶುರು ಮಾಡಿದಳು. 

ರಬ್ಬರ್‌ ಗಿಡಗಳಿರುವ ಗುಡ್ಡದ ಬದಿಯ ರಸ್ತೆಯಲ್ಲಿ ಬಂದಾಗ ಸ್ಪಲ್ಪ ಭಯವಾಯಿತು. ಬೆಳಗಾದರೂ, ಸಂಜೆಯಾದರೂ ಆ ದಾರಿಯಲ್ಲಿ ಸ್ಪಲ್ಪ ಕತ್ತಲೆಯೇ. ರಬ್ಬರ್‌ ಮರಗಳ ಸೊಪ್ಪು ಆ ರಸ್ತೆಯನ್ನು ಕತ್ತಲಾಗಿಸಿಬಿಡುತ್ತದೆ. ಆ ರಬ್ಬರ್‌ ಕಾಡಿನ ಕೀಟಗಳು ಸಸ್ಪೆನ್ಸ್‌ ಸಿನೆಮಾದ ಕೆಲ ವಿಚಿತ್ರ ಮ್ಯೂಸಿಕ್‌ಗಳನ್ನು ಹೊರಡಿಸುತ್ತವೆ. ಕಾಲೇಜು ಬಿಟ್ಟು ಬರುವುದು ತಡವಾದರೆ ಆ ರಸ್ತೆಯ ತಿರುವಿನಲ್ಲಿ ನಿಂತು ಬಿಡುತ್ತಿದ್ದಳು ಅನು. ಮತ್ತೆ ಅಪ್ಪನೇ ಬರಬೇಕು- ಮನೆಯವರೆಗೆ ಕರೆದೊಯ್ಯಲು.

ಹಾಗೆ ಬರಲು ಅಪ್ಪ ಯಾವತ್ತೂ ಬೇಜಾರು ಮಾಡಿಕೊಂಡಿದ್ದಿಲ್ಲ. “”ಬರಬೇಕಾದ್ರೆ ಕಾಲ್‌ ಮಾಡೋಕೆ ಹೇಳು” ಅಂತ ಅಮ್ಮನಿಗೆ ತಪ್ಪದೇ ಹೇಳುತ್ತಾರೆ. ಯಾಕೋ ಅನುವಿನ ಕಣ್ಣಂಚಲ್ಲಿ ನೀರು ಜಿನುಗಿತು. ಲಗೇಜ್‌ ಬ್ಯಾಗ್‌ ಕೆಳಗಿಟ್ಟು ಕಣ್ಣೀರು ಒರೆಸಿಕೊಂಡಳು. ಜೋಮು ಹಿಡಿದಿದ್ದ ಕೈಯನ್ನು ಒಮ್ಮೆ ಅತ್ತಿತ್ತ ಬೀಸಿ ಮತ್ತೆ ಬ್ಯಾಗ್‌ನ್ನು ಕೈಗೆ ತೆಗೆದುಕೊಂಡು ಮತ್ತಷ್ಟು ಬಿರುಸಾಗಿ ನಡೆಯಲಾರಂಭಿಸಿದಳು.

ಮುಖ್ಯರಸ್ತೆಗೆ ಬಂದಿ¨ªಾಯ್ತು. ಒಂದೋ ಎರಡೋ ವಾಹನಗಳು ಓಡಾಡುತ್ತಿದ್ದವು. ಬಸ್‌ಸ್ಟಾಂಡ್‌ ಪಕ್ಕ ನಿಂತಿರುವ ಬಸ್‌ ಆರು ಮುಕ್ಕಾಲಕ್ಕೆ ಹೊರಡುತ್ತದೆ. ಆರೂವರೆಗೆಲ್ಲ ಕೆಲಸಕ್ಕೆ ಹೊರಡುವ ಜನ ಜಮಾಯಿಸಿಬಿಡುತ್ತಾರೆ. ಬೇಗ ಬಸ್‌ಸ್ಟಾಂಡ್‌ ಸೇರಿಬಿಡಬೇಕೆಂದು ಓಡತೊಡಗಿದಳು ಅನು. ದಿಢೀರ್‌ ಅಂತ ಎದುರಾದರೂ, ಮೇಲಿನ ಮನೆಯ ಶಾಮಣ್ಣ. “”ಎಲ್ಲಿಗಮ್ಮ ಇಷ್ಟು ಬೆಳಗ್ಗೆೆ?” ಅಂತ ಕೇಳುವ ಮೊದಲೇ, “”ಕ್ಯಾಂಪ್‌ ಇದೆ ಅಂಕಲ್‌” ಸರಾಗವಾಗಿ ಬಂದಿತ್ತು ಉತ್ತರ. “”ಹುಷಾರು” ಎಂದು ಹೇಳಿ ಮುಂದೆ ನಡೆದರು. ಯಾವಾಗ ಇಷ್ಟು ಸುಲಭವಾಗಿ ಸುಳ್ಳು ಹೇಳಲು ಕಲಿತುಕೊಂಡೆ, ಅರ್ಥವಾಗಲಿಲ್ಲ. ಬೆವರುತ್ತಲೇ ಮುಂದೆ ನಡೆದಳು ಅನು. ಬಸ್‌ಸ್ಟ್ಯಾಂಡ್‌ ತಲುಪುತ್ತಿದ್ದಂತೆ ಭಾರದ ಲಗ್ಗೇಜ್‌ ಕೆಳಗಿಳಿಸಿ, ಬ್ಯಾಗ್‌ನಿಂದ ಮೊಬೈಲ್‌ ಹೊರ ತೆಗೆದು ಅರ್ಜುನ್‌ಗೆ ಡಯಲ್‌ ಮಾಡಿದಳು. 

ಎರಡು ಸಾರಿ ರಿಂಗಾದ್ರೂ ಫೋನ್‌ ರಿಸೀವ್‌ ಆಗಲಿಲ್ಲ. ಇವತ್ತೂ ಬೇಜವಾಬ್ದಾರಿತನವೋ… ಸಿಟ್ಟೇ ಬಂದು ಬಿಟ್ಟಿತು. “”ನಿನ್ನನ್ನು ಪ್ರೀತಿಸಿ ತಪ್ಪು ಮಾಡಿದೆ” ಎಂದು ಅದೆಷ್ಟೋ ಸಾರಿ ಹೇಳಿದ್ದಳು. ಈಗ ಫೋನ್‌ ರಿಸೀವ್‌ ಮಾಡಿ, “”ನಿನ್ನನ್ನು ಪ್ರೀತಿಸಿದ್ದೇ ಸುಳ್ಳು ಅಂದುಬಿಡುತ್ತಾನ !” ಅರೆಕ್ಷಣ ಭಯವಾಯಿತು. ಆನ್‌ ದಿ ವೇ ಬೈಕ್‌ನಲ್ಲಿ¨ªಾನೇನೋ, ಸ್ಪಲ್ಪ ಹೊತ್ತು ಬಿಟ್ಟು ಮಾಡಿದರಾಯಿತೆಂದು, ಅÇÉೇ ಬಸ್‌ಸ್ಟ್ಯಾಂಡ್‌ನೊಳಗೆ ಕುಳಿತಳು. ಅಪ್ಪಾ ಏಳುವ ಹೊತ್ತಾಯಿತೋ, ಗಾಬರಿಯಾಗಿರುತ್ತಾರೇನೋ. ನಾಳೆ ಎಲ್ಲರೂ ಅಪ್ಪನನ್ನು ಏನೆÇÉಾ ಕೇಳಬಹುದು. ಈಶ್ವರಣ್ಣ, “”ನಿಮ್ಮ ಮಗಳು ಓಡಿ ಹೋದ್ಲಂತೆ ಹೌದಾ… ಹೇಗಿ¨ªಾಳಂತೆ ಈಗ” ಅಂತೆÇÉಾ ಕೇಳಬಹುದು. ವಿಷಯ ಗೊತ್ತಿದ್ದೂ ಗಾಯ ಕೆದಕುವವರು ಜಾಸ್ತಿ. “”ಈಗಿನ ಹುಡುಗಿಯರೆಲ್ಲ  ಹೀಗೇ ಬಿಡಿ” ಅನ್ನೋ ಕೊಂಕನ್ನು ಸೇರಿಸುತ್ತಾರೆ. ಯಾರಲ್ಲೂ ಜಾಸ್ತಿ ಮಾತನಾಡದ ಅಪ್ಪ ಏನೆಂದು ಉತ್ತರಿಸಬಹುದು. ತಲೆತಗ್ಗಿಸಿ ಮುಂದೆ ಹೋಗುತ್ತಾರಷ್ಟೇ. ಯಾಕೋ ಗಂಟಲು ಕಟ್ಟಿತು.

ಅಮ್ಮ ಮನೆಯಿಂದ ಹೊರ ಬರೋಕೆ ಸಹ ಅಂಜುತ್ತಾರಷ್ಟೆ. “”ನನ್ನ ಮಗಳು ಎಂಎ ಮಾಡ್ತಿ¨ªಾಳೆ” ಊರೆÇÉಾ ಹೆಮ್ಮೆಯಿಂದ ಹೇಳಿಕೊಂಡು ಬರೋರು. ಒಂದು ಪ್ರçಜ್‌ ಸಿಕ್ಕಿದ್ರು, ನ್ಯಾಶನಲ್‌ ಲೆವೆಲ್‌ ಸಿಕ್ಕಿದ್ದಷ್ಟು ನೆರೆಹೊರೆಯವರಿಗೆ ಬಣ್ಣಿಸುವ ಅಮ್ಮ, ನಾನು ಓಡಿಹೋಗುವ ಬಗ್ಗೆ ಏನು ಹೇಳುವಳು. ಸುಮ್ಮನೇ ಶೂನ್ಯದತ್ತ ದಿಟ್ಟಿಸಿದಳು ಅನು. ಕೀರಲು ಶಬ್ದ ಮಾಡುತ್ತ¤ ಹೋದ ಮರಳಿನ ಲಾರಿಯ ಸದ್ದು ಬೆಚ್ಚಿಬೀಳುವಂತೆ ಮಾಡಿತು.

ಇನ್ನೇನು ಸ್ಪಲ್ಪ ಹೊತ್ತಲ್ಲಿ ಹೊರಡುವ ಬಸ್‌ನ ಕ್ಲೀನರ್‌ ಶ್ಯಾಂಪೂ ಹಾಕಿ ಬಸ್‌ ತೊಳೆಯುತ್ತಿದ್ದ. ಅನುಮಾನದಿಂದಲೇ ಏನೋ ದಿಟ್ಟಿಸಿ ನೋಡಿದ. ಪರಿಚಯ ಸಿಗಲಿಲ್ಲವೇನೋ, ಮತ್ತೆ ತನ್ನ ಕೆಲಸದಲ್ಲಿ ನಿರತನಾದ. ಅಪ್ಪನ ದಯನೀಯ ಮುಖ, ಅಮ್ಮನ ವಾತ್ಯಲ್ಯದ ಮೊಗ ಕಣ್ಮುಂದೆ ಬಂದಾಯ್ತು. ಕ್ಲೀನರ್‌ ಬಸ್‌ ಹಿಂದಿನ ಗಾಜು ಒರೆಸುತ್ತಿದ್ದ. ಹಾಗೆಯೇ ಎದ್ದು ಬ್ಯಾಗ್‌ ಕೈಗೆತ್ತಿಕೊಂಡಳು ಅನು. ಬಸ್‌ಸ್ಟ್ಯಾಂಡ್‌ ಹಿಂಬದಿಗೆ ಬಂದು ಅವನು ಕೊಡಿಸಿದ್ದ ಡ್ರೆಸ್‌, ಜುಮುಕಿಯಿದ್ದ ಬ್ಯಾಗ್‌ನ್ನು ಬೀಸಿ ಎಸೆದಳು. ಮತ್ತೆ ಹಿಂತಿರುಗಿ ನೋಡದೆ ಮನೆಯತ್ತ ದಾಪುಗಾಲಿಡತೊಡಗಿದಳು. 

– ವಿನುತಾ ಪೆರ್ಲ

Advertisement

Udayavani is now on Telegram. Click here to join our channel and stay updated with the latest news.

Next