Advertisement

ನ್ಯೂರಾನ್‌ನಲ್ಲಿ ಡಾರ್ಜಿಲಿಂಗ್‌ ಸ್ಟೋರಿ

09:41 AM Nov 23, 2019 | Team Udayavani |

ಕಳೆದ ಕೆಲ ದಿನಗಳಿಂದ ಗಾಂಧಿನಗರದಲ್ಲಿ ತನ್ನ ಟೈಟಲ್‌, ಫ‌ಸ್ಟ್‌ಲುಕ್‌ ಪೋಸ್ಟರ್‌, ಹಾಡುಗಳು ಮತ್ತು ಟ್ರೇಲರ್‌ಗಳ ಮೂಲಕ ಒಂದಷ್ಟು ಸದ್ದು ಮಾಡುತ್ತಿರುವ ಹೊಸ ಪ್ರತಿಭೆಗಳ “ನ್ಯೂರಾನ್‌’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ನ್ಯೂರಾನ್‌’ ಚಿತ್ರದ ಬಗ್ಗೆ ಮತ್ತು ಬಿಡುಗಡೆಗೆ ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ಮಾತನಾಡಿತು. ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ವಿಕಾಸ್‌ ಪುಷ್ಪಗಿರಿ, “ಹೆಸರೇ ಹೇಳುವಂತೆ “ನ್ಯೂರಾನ್‌’ ಒಂದು ಸೈನ್ಸ್‌ ಫಿಕ್ಷನ್‌ ಕಥಾಹಂದರದ ಸಿನಿಮಾ. 2010 ರಲ್ಲಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ, ಈ ಚಿತ್ರವನ್ನು ನಿರ್ಮಿಸಿದ್ದೇವೆ. ಇಡೀ ಚಿತ್ರದಲ್ಲಿ ಕಥೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದೇವೆ. ಕನ್ನಡದಲ್ಲಿ ಇತ್ತೀಚೆಗೆ ಈ ಥರದ ಕಥಾಹಂದರದ ಚಿತ್ರಗಳು ಬಂದಿದ್ದು ಅಪರೂಪ.

Advertisement

ಕನ್ನಡ ಪ್ರೇಕ್ಷಕರಿಗೆ ಖಂಡಿತವಾಗಿಯೂ ನಮ್ಮ ಚಿತ್ರ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.
ನಿರ್ಮಾಪಕ ವಿನಯ್‌ ಕುಮಾರ್‌. ವಿ.ಆರ್‌ ಅವರಿಗೂ “ನ್ಯೂರಾನ್‌’ ಸಾಕಷ್ಟು ನಿರೀಕ್ಷೆಯನ್ನು
ಮೂಡಿಸಿದೆಯಂತೆ. ಚಿತ್ರದ ಬಗ್ಗೆ ಮಾತನಾಡುವ ಅವರು, “ಈಗಾಗಲೇ ನಮ್ಮ ಚಿತ್ರದ ಹಾಡುಗಳು
ಮತ್ತು ಟ್ರೇಲರ್‌ಗೆ ಎಲ್ಲೆಡೆಯಿಂದ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ಚಿತ್ರತಂಡ ಎಲ್ಲಿಗೇ ಹೋದ್ರೂ, ಜನ ಚಿತ್ರ ಯಾವಾಗ ರಿಲೀಸ್‌ ಮಾಡುತ್ತೀರಿ? ಎಂದು ಕೇಳುತ್ತಿದ್ದಾರೆ. ಚಿತ್ರದ ಪ್ರಮೋಶನ್‌ ವೇಳೆಯಲ್ಲೂ ಚಿತ್ರಕ್ಕೆ ತುಂಬ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿರುವುದರಿಂದ, ಚಿತ್ರ ಜನಕ್ಕೆ ಇಷ್ಟವಾಗುವುದೆಂಬ ನಿರೀಕ್ಷೆ ಇದೆ’ ಎನ್ನುತ್ತಾರೆ.

ನವನಟ ಯುವ “ನ್ಯೂರಾನ್‌’ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್‌ ವುಡ್‌ನ‌ಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಚಿತ್ರದ ಫ‌ಸ್ಟ್‌ಲುಕ್‌, ಹಾಡುಗಳು ಮತ್ತು ಟ್ರೇಲರ್‌ನಲ್ಲಿ ಯುವ ಗೆಟಪ್‌ಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಒಳ್ಳೆಯ ರೆಸ್ಪಾನ್ಸ್‌ ಬರುತ್ತಿರುವುದರಿಂದ ಯುವ ಕೂಡ “ನ್ಯೂರಾನ್‌’ ಬಗ್ಗೆ ಭರವಸೆಯ ಮಾತುಗಳನ್ನಾ ಡುತ್ತಾರೆ. “ಸದ್ಯದ ಮಟ್ಟಿಗೆ ಚಿತ್ರರಂಗದಿಂದ ಮತ್ತು ಪ್ರೇಕ್ಷಕರಿಂದ ಒಳ್ಳೆಯ ಬೆಂಬಲ ಸಿಗುತ್ತಿದೆ. ಚಿತ್ರದಲ್ಲಿ ಎಲ್ಲಾ ಥರದ ಎಂಟರ್‌ ಟೈನ್ಮೆಂಟ್‌ ಎಲಿಮೆಂಟ್ಸ್‌ ಕೂಡ
ಇರುವುದರಿಂದ, ಎಲ್ಲಾ ವರ್ಗದ ಆಡಿಯನ್ಸ್‌ಗೂ ಚಿತ್ರ ಖಂಡಿತವಾಗಿಯೂ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ’ ಎನ್ನುತ್ತಾರೆ ನವನಟ ಯುವ.

ಇನ್ನು “ನ್ಯೂರಾನ್‌’ ಚಿತ್ರದಲ್ಲಿ ಯುವ ಅವರಿಗೆ ನಾಯಕಿಯರಾಗಿ ನೇಹಾ ಪಾಟೀಲ್‌, ವೈಷ್ಣವಿ ಮೆನನ್‌ ಮತ್ತು ನವನಟಿ ಶಿಲ್ಪಾ ಶೆಟ್ಟಿ ಜೋಡಿಯಾಗಿ ಅಭಿನಯಿಸಿದ್ದಾರೆ. ಮೂವರು ನಾಯಕಿಯರು ಕೂಡ ಚಿತ್ರದ ಬಗ್ಗೆ ಮತ್ತು ತಮ್ಮ ಪಾತ್ರದ ಬಗ್ಗೆ ಸಾಕಷ್ಟು ಭರವಸೆಯ ಮಾತುಗಳನ್ನಾಡಿದ್ದಾರೆ. ಉಳಿದಂತೆ ಬಹುಭಾಷಾ ನಟ ಕಬೀರ್‌ ಸಿಂಗ್‌ ದುಹಾನ್‌, ಹಿರಿಯ ನಟ ಜೈ ಜಗದೀಶ್‌, ಅರವಿಂದ ರಾವ್‌, ರಾಕ್‌ಲೈನ್‌ ಸುಧಾಕರ್‌, ಮೊದಲಾದವರು “ನ್ಯೂರಾನ್‌’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು ಈ ವಾರ ಕರ್ನಾಟಕ ರಾಜ್ಯದಾದ್ಯಂತ “ನ್ಯೂರಾನ್‌’ ಚಿತ್ರವನ್ನು ಸುಮಾರು ಎಪ್ಪತ್ತಕ್ಕೂ ಹೆಚ್ಚು
ಕೇಂದ್ರಗಳಲ್ಲಿ ಏಕಕಾಲಕ್ಕೆ ತೆರೆಗೆ ತರಲು ಪ್ಲಾನ್‌ ಮಾಡಿಕೊಂಡಿರುವ ಚಿತ್ರತಂಡ, ಎರಡು ವಾರಗಳ
ನಂತರ ಚಿತ್ರವನ್ನು ಅಮೆರಿಕಾ, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲೂ ಬಿಡುಗಡೆ ಮಾಡುವ
ಯೋಜನೆಯಲ್ಲಿದೆ. ಒಟ್ಟಾರೆ ಬಿಡುಗಡೆಗೂ ಮುನ್ನವೇ ಒಂದಷ್ಟು ಸದ್ದು ಮಾಡಲು ಯಶಸ್ವಿಯಾಗಿರುವ “ನ್ಯೂರಾನ್‌’ ಬಿಡುಗಡೆಯ ನಂತರ ಎಷ್ಟರ ಮಟ್ಟಿಗೆ ಸದ್ದು ಮಾಡಲಿದೆ ಅನ್ನೋದು ಇದೇ ವಾರಾಂತ್ಯದಲ್ಲಿ ಗೊತ್ತಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next