Advertisement

ಪೊಲೀಸ್ ಖದರ್ ನಲ್ಲಿ ತಲೈವಾ ‘ದರ್ಬಾರ್’: ಹೇಗಿದೆ ಗೊತ್ತಾ ಸೂಪರ್ ಸ್ಟಾರ್ ಹೊಸಚಿತ್ರದ ಟ್ರೈಲರ್

09:52 AM Dec 17, 2019 | Hari Prasad |

ಚೆನ್ನೈ: ಸೂಪರ್ ಸ್ಟಾರ್ ಸ್ಟೈಲ್ ಕಿಂಗ್ ರಜನಿಕಾಂತ್ ಅವರ ಮುಂಬರುವ ಹೊಸ ಚಿತ್ರ ‘ದರ್ಬಾರ್’ನ ಟ್ರೈಲರ್ ಬಿಡುಗಡೆಗೊಂಡಿದೆ. ರಜನಿ ಫ್ಯಾನ್ ಗಳಿಗೆ ಭರ್ಜರಿ ಮನರಂಜನೆಯನ್ನು ನೀಡುವುದು ಟ್ರೈಲರ್ ನಲ್ಲೇ ಫಿಕ್ಸಾಗಿದೆ.

Advertisement

ಎ. ಮುರುಗದಾಸ್ ನಿರ್ದೇಶನದ ಈ ಚಿತ್ರದಲ್ಲಿ ಸ್ಟೈಲ್ ಕಿಂಗ್ ರಜನಿ ಇನ್ನಷ್ಟು ಸ್ಟೈಲಿಷ್ ಪೊಲೀಸ್ ಕಮಿಷನರ್ ಪಾತ್ರದಲ್ಲಿ ಮಿಂಚಿದ್ದಾರೆ. ಅದೂ ರಜನಿ ನಿರ್ವಹಿಸುತ್ತಿರುವುದು ಮುಂಬಯಿ ಪೊಲೀಸ್ ಕಮಿಷನರ್ ಪಾತ್ರ ಎಂಬುದು ಟ್ರೈಲರ್ ನಲ್ಲಿ ರಿವೀಲ್ ಆಗಿದೆ.

‘ಪೊಲೀಸ ಸರ್ ಅವ?… ಕಿಲ್ಲರ್..’ ಎಂಬ ಡೈಲಾಗ್ ಟ್ರೈಲರ್ ನಲ್ಲಿದೆ. ಅಲ್ಲಿಗೆ ತಲೈವಾ ಪಾತ್ರ ಈ ಚಿತ್ರದಲ್ಲಿ ಮಾಸ್ ಕಾಪ್ ಎಂಬುದು ಸಾಬೀತಾಗುತ್ತದೆ. ಅಲ್ಲಿಗೆ ತಲೈವಾ ಅಭಿಮಾನಿಗಳಿಗೆ ಮನರಂಜನೆಗಂತೂ ಬರವಿಲ್ಲ ಎಂಬುದು ಶತ:ಸಿದ್ಧ!

ರಜನಿಗೆ ನಾಯಕಿಯಾಗಿ ನಿವೇತಾ ಥೋಮಸ್ ಅಭಿನಯಿಸುತ್ತಿದ್ದಾರೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ ವಿಲನ್ ಪಾತ್ರದಲ್ಲಿ ರಜನಿಗೆ ಠಕ್ಕರ್ ನೀಡಲು ರೆಡಿಯಾಗಿದ್ದಾರೆ.

ಈ ಸಲದ ಪೊಂಗಲ್ ಹಬ್ಬಕ್ಕೆ ಸಿಲ್ವರ್ ಸ್ಕ್ರೀನ್ ನಲ್ಲಿ ರಜನಿಯ ದರ್ಬಾರ್ ಆರಂಭವಾಗಲಿದೆ. ತಮಿಳಿನ ಜನಪ್ರಿಯ ಚಿತ್ರ ನಿರ್ದೇಶಕ ಎ.ಆರ್ ಮುರುಗದಾಸ್ ಅವರ ನಿರ್ದೇಶನವಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರು ಸಂಗೀತ ನೀಡಿದ್ದಾರೆ. ಸಂತೋಷ್ ಶಿವನ್ ಅವರ ಕೆಮರಾ ವರ್ಕ್ ಈ ಚಿತ್ರದ ದೃಶ್ಯಗಳನ್ನು ರಿಚ್ ಆಗಿಸುವಲ್ಲಿ ನೆರವಾಗಿದೆ.

Advertisement

ಸೋಮವಾರ ಸಾಯಂಕಾಲ ಬಿಡುಗಡೆಗೊಂಡಿರುವ 1.45 ನಿಮಿಷದ ಈ ಟ್ರೈಲರ್ ಈಗಾಗಲೇ 30 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೊಳಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next