ಧಾರವಾಡ: ಕಳೆದ ವರ್ಷ ಬೆಳೆ ಹಾನಿ, ನಿಗದಿತ ಸಮಯಕ್ಕೆ ತೆರೆಯದಬೆಂಬೆಲೆ ಖರೀದಿ ಕೇಂದ್ರಗಳು, ನೋಂದಣಿ ಕುಸಿತ, ಖರೀದಿ ಪ್ರಕ್ರಿಯೆಆರಂಭದಲ್ಲೂ ವಿಳಂಬ ಕಾರಣದಿಂದ ಬೆಂಬೆಲೆಯಡಿ ಹೆಸರು ಹಾಗೂಉದ್ದಿನ ಬೆಳೆಖರೀದಿಯೇ ಆಗಲಿಲ್ಲ.
ಆದರೆ ಈ ವರ್ಷ ನಿಗದಿತ ಸಮಯಕ್ಕೆಖರೀದಿ ಕೇಂದ್ರ ತೆರೆದಿದ್ದು, ಪೂರ್ಣ ಪ್ರಮಾಣದಲ್ಲಿ ನೋಂದಣಿ ಪ್ರಕ್ರಿಯೆಆರಂಭದ ಜತೆ ಜತೆಗೆ ಖರೀದಿ ಪ್ರಕ್ರಿಯೆಗೂ ಚಾಲನೆ ದೊರೆಯಬೇಕಿದೆ.
ನೋಂದಣಿ ಪ್ರಕ್ರಿಯೆಗೆ ಸಿದ್ಧಪಡಿಸಿರುವ ತಂತ್ರಾಂಶ ಪ್ರತಿವರ್ಷವೂಖರೀದಿ ಕೇಂದ್ರಗಳಿಗೆ ತಲುಪಲು ವಿಳಂಬ ಆಗುತ್ತಾ ಬಂದಿದೆ. ಈ ವರ್ಷಆ. 26ರಂದು ಖರೀದಿ ಕೇಂದ್ರ ತೆರೆದಿದ್ದರೂ ತಂತ್ರಾಂಶವು ಸೆ.4ರಂದು 16ಖರೀದಿ ಕೇಂದ್ರ ತಲುಪಿದೆ. ಈ ಪೈಕಿ ಕೆಲವೊಂದಿಷ್ಟು ಖರೀದಿ ಕೇಂದ್ರಗಳಲ್ಲಿ ಶನಿವಾರವೂ ತಂತ್ರಾಂಶ ಅಳವಡಿಕೆಯಾಗದ ಕಾರಣ ನೋಂದಣಿ ಪ್ರಕ್ರಿಯೆ ಆರಂಭಗೊಂಡಿರಲಿಲ್ಲ.
ಈ ರೀತಿ ಪ್ರತಿ ವರ್ಷವೂ ನೋಂದಣಿವಿಳಂಬ ಒಂದೆಡೆಯಾದರೆ ಖರೀದಿ ಪ್ರಕ್ರಿಯೆ ಆರಂಭಗೊಳ್ಳಲುನೋಂದಣಿ ಪ್ರಕ್ರಿಯೆ ಮುಕ್ತಾಯಕ್ಕೆ ಕಾಯಬೇಕು. ನೋಂದಣಿಪ್ರಕ್ರಿಯೆ ಮುಕ್ತಾಯಗೊಂಡರೂ ಖರೀದಿ ಪ್ರಕ್ರಿಯೆ ಆರಂಭಿಸಲು ಸಿದ್ಧತೆಕೊರತೆಯಿಂದ ಮತ್ತೆ ವಿಳಂಬ. ಹೀಗಾಗಿ ತಿಂಗಳುಗಟ್ಟಲೇ ರೈತರು ತಮ್ಮಬೆಳೆ ಮಾರಾಟ ಮಾಡಲು ಕಾಯುವ ಬದಲು ವ್ಯಾಪಾರಸ್ಥರಿಗೆ ಮಾರಾಟಮಾಡಿ ಕೈ ತೊಳೆದುಕೊಳ್ಳುವ ಸ್ಥಿತಿ ಇದೆ.
ಅಧಿಕಾರಿಗಳ ನಿಯೋಜನೆಯಾಗಲಿ: ಈ ಸಮಸ್ಯೆಗಳಿಂದ ರೈತರಿಗೆಆಗುತ್ತಿರುವ ತೊಂದರೆ ಗಮನಿಸಿರುವ ಸರಕಾರವು, ಈ ಸಲ ಮಾಡಿರುವಆದೇಶದಲ್ಲಿ ನೋಂದಣಿ ಜತೆ ಜತೆಗೆ ಖರೀದಿ ಪ್ರಕ್ರಿಯೆಗೂ ಚಾಲನೆನೀಡುವಂತೆ ಸೂಚಿಸಿದೆ. ರೈತರ ಸುಗ್ಗಿ ಸಮಯಕ್ಕೆ ಸರಿಯಾಗಿ ಈಸಲ ಖರೀದಿ ಕೇಂದ್ರ ಆರಂಭಿಸಿದ್ದು, ಆದರೆ ಪೂರ್ಣ ಪ್ರಮಾಣದಲ್ಲಿಪ್ರಕ್ರಿಯೆಗಳಿಗೆ ಚಾಲನೆ ಸಿಗಬೇಕಿದೆ. ತಂತ್ರಾಂಶ ವಿಳಂಬದಿಂದ ನೋಂದಣಿಪ್ರಕ್ರಿಯೆ ಒಂದು ವಾರ ತಡವಾಗಿ ಆರಂಭಗೊಂಡಿದ್ದು, ಈ ಸಲ ಸರಕಾರದ ಆದೇಶನ್ವಯ ನೋಂದಣಿ ಜತೆಗೆ ಖರೀದಿ ಪ್ರಕ್ರಿಯೆಗೂ ಚಾಲನೆ ನೀಡಿದರೆ ರೈತರಿಗೆ ಅನುಕೂಲ ಆಗಲಿದೆ.
ಸದ್ಯ ಎರಡೇ ದಿನಗಳಲ್ಲಿ ರೈತರ ನೋಂದಣಿ 1500ರ ಗಟಿ ದಾಟಿದೆ.ಹೀಗಾಗಿ ಕೃಷಿ ಇಲಾಖೆಯಿಂದ ಪ್ರತಿ ವರ್ಷ ತಡವಾಗಿ ನೇಮಕ ಆಗುವಕಾಳುಗಳ ಗುಣಮಟ್ಟ ಪರಿಶೀಲನೆಯ ಅಧಿಕಾರಿಗಳನ್ನೂ ಕೇಂದ್ರಗಳಿಗೆನಿಯೋಜಿಸುವ ಕಾರ್ಯವಾದರೆ ಬೇಗ ಖರೀದಿ ಪ್ರಕ್ರಿಯೆ ಆರಂಭದಿಂದರೈತರಿಗೂ ಅನುಕೂಲ ಆಗಲಿದೆ.
ಶಶಿಧರ್ ಬುದ್ನಿ