ವಾಷಿಂಗ್ಟನ್: ಅದ್ನಾನ್ ಅಬ್ದಿ, ಸನಾ ಇರ್ಷಾದ್ ಮಾಟ್ಟೋ, ಅಮೀತ್ ಆವೆ ಹಾಗೂ ದಾನಿಶ್ ಸಿದ್ದಿಖಿ ಸೇರಿದಂತೆ ನಾಲ್ವರು ಛಾಯಾಗ್ರಾಹಕರಿಗೆ 2022ನೇ ಸಾಲಿನ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ:Updates:ಶಹೀನ್ ಭಾಗ್ ನಲ್ಲಿನ ಅಕ್ರಮ ಕಟ್ಟಡ ತೆರವು ವಿಚಾರದಲ್ಲಿ ಮಧ್ಯಪ್ರವೇಶಿಸಲ್ಲ: ಸುಪ್ರೀಂ
ಭಾರತದಲ್ಲಿನ ಕೋವಿಡ್ 19 ಗೆ ಸಂಬಂಧಿಸಿದ ಫೀಚರ್ ಫೋಟೋಗ್ರಫಿ ವಿಭಾಗದಲ್ಲಿ ಈ ನಾಲ್ವರು ಭಾರತೀಯರು ಪುಲಿಟ್ಜರ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ದಾನಿಶ್ ಸಿದ್ದಿಖಿ ಜುಲೈನಲ್ಲಿ ಅಫ್ಘಾನಿಸ್ತಾನದಲ್ಲಿ ಹತ್ಯೆಗೀಡಾಗಿದ್ದರು.
2022ನೇ ಸಾಲಿನ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯನ್ನು ಪತ್ರಿಕೋದ್ಯಮ, ಪುಸ್ತಕ, ರಂಗಭೂಮಿ ಮತ್ತು ಸಂಗೀತ ಕ್ಷೇತ್ರದಲ್ಲಿನ ಸಾಧಕರಿಗೆ ಸೋಮವಾರ ಮಧ್ಯಾಹ್ನ ಈ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಇದರಲ್ಲಿ ದಿ ವಾಷಿಂಗ್ಟನ್ ಪೋಸ್ಟ್ ಹಾಗೂ ಭಾರತೀಯ ಪತ್ರಕರ್ತರು ಸೇರಿರುವುದಾಗಿ ವರದಿ ವಿವರಿಸಿದೆ.
ಪುಲಿಟ್ಜರ್ ಪ್ರಶಸ್ತಿಯಲ್ಲಿ ಉಕ್ರೇನ್ ಪತ್ರಕರ್ತರಿಗೆ ವಿಶೇಷ ಆದ್ಯತೆಯನ್ನು ನೀಡಿದ್ದು, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಧೈರ್ಯ, ಸಾಹಸ ಮತ್ತು ಬದ್ಧತೆ ಮೂಲಕ ವರದಿ ಮಾಡಿದವರನ್ನು ಗುರುತಿಸಿರುವುದಾಗಿ ತಿಳಿಸಿದೆ.