Advertisement

ಲೋಕಸಭೆಯಲ್ಲಿ ಡ್ಯಾನಿಷ್‌ ಈಗ ಬಿಎಸ್‌ಪಿ ನಾಯಕ

01:42 AM Jun 24, 2019 | Team Udayavani |

ಲಕ್ನೋ: ಲೋಕಸಭೆಯಲ್ಲಿ ಬಿಎಸ್‌ಪಿ ನಾಯಕರಾಗಿ ಕುನ್ವರ್‌ ಡ್ಯಾನಿಷ್‌ ಅಲಿ ಅವರನ್ನು ನೇಮಿಸಲಾಗಿದೆ. ಉತ್ತರ ಪ್ರದೇಶದ ಅನ್ರೋಹಾದಿಂದ ಡ್ಯಾನಿಷ್‌ ಅಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಉಳಿದಂತೆ ಪಕ್ಷದ ಪ್ರಮುಖ ಹುದ್ದೆಗಳಿಗೆ ತಮ್ಮ ಕುಟುಂಬ ಸದಸ್ಯರು, ಆಪ್ತರನ್ನೇ ಮಾಯಾವತಿ ರವಿವಾರ ನೇಮಿಸಿ ಆದೇಶ ಹೊರಡಿಸಿದ್ದಾರೆ.

Advertisement

ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ಸಹೋದರ ಆನಂದ ಕುಮಾರ್‌, ಸೋದರ ಸಂಬಂಧಿ ಆಕಾಶ್‌ ಆನಂದ್‌ರನ್ನು ಪಕ್ಷದ ರಾಷ್ಟ್ರೀಯ ಸಂಚಾಲಕರನ್ನಾಗಿ ಮಾಯಾವತಿ ನೇಮಿಸಿದ್ದಾರೆ. ಅದೇ ಹುದ್ದೆಗೆ ಪಕ್ಷದ ಮತ್ತೂಬ್ಬ ಪ್ರಮುಖ ನಾಯಕ ರಾಮ್‌ಜಿ ಗೌತಮ್‌ ಕೂಡ ನಿಯೋಜಿತರಾಗಿದ್ದಾರೆ. ನಾಗಿನ ಕ್ಷೇತ್ರದ ಸಂಸದ ಗಿರೀಶ್‌ ಚಂದ್ರರನ್ನು ಲೋಕಸಭೆಯಲ್ಲಿ ಮುಖ್ಯ ಸಚೇತಕರಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next