Advertisement

ಜೊಕೊವಿಕ್ ಕನಸು ನುಚ್ಚುನೂರು ಮಾಡಿದ ಮೆಡ್ವೆಡೆವ್ ಗೆ ಯುಎಸ್ ಓಪನ್ ಕಿರೀಟ

08:15 AM Sep 13, 2021 | Team Udayavani |

ನ್ಯೂಯಾರ್ಕ್: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಯುಎಸ್ ಓಪನ್ ಟೆನ್ನಿಸ್ ಕೂಟದ ಪುರುಷರ ಫೈನಲ್ ಪಂದ್ಯದಲ್ಲಿ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಗೆಲುವು ಸಾಧಿಸಿದ್ದಾರೆ. ಯುಎಸ್ ಓಪನ್ ಗೆದ್ದು ಕ್ಯಾಲೆಂಡರ್ ಸ್ಲ್ಯಾಮ್ ಗೆಲ್ಲುವ ಅಪರೂಪದ ದಾಖಲೆ ನಿರ್ಮಿಸುವ ಹಂತದಲ್ಲಿದ್ದ ನೊವಾಕ್ ಜೊಕೊವಿಕ್ ಆಘಾತಕಾರಿ ಸೋಲನುಭವಿಸಿದ್ದಾರೆ.

Advertisement

ಫೈನಲ್ ಪಂದ್ಯ ವಿಶ್ವದ ಒಂದು ಮತ್ತು ಎರಡನೇ ಶ್ರೇಯಾಂಕಿತ ಆಟಗಾರರ ನಡುವಿನ ಸೆಣಸಾಟಕ್ಕೆ ಸಾಕ್ಷಿಯಾಯಿತು. ರ್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿರುವ ಮೆಡ್ವೆಡೆವ್ ಅವರು ಅಗ್ರ ಶ್ರೇಯಾಂಕಿತ ಜೊಕೊವಿಕ್ ರನ್ನು 6-4, 6-4, 6-4 ನೇರ ಸೆಟ್ ಗಳಿಂದ ಮಣಿಸಿದರು. ಈ ಮೂಲಕ ಈ ವರ್ಷದ ಎಲ್ಲಾ ಗ್ಯಾನ್ ಸ್ಲಾಮ್ ಗೆಲ್ಲುವ ನೊವಾಕ್ ಜೊಕೊವಿಕ್ ಕನಸು ಈಡೇರಲಿಲ್ಲ.

ಇದನ್ನೂ ಓದಿ:ಶ್ರೀಲಂಕಾ ವಿಶ್ವಕಪ್‌ ತಂಡದಲ್ಲಿ ನಾಲ್ವರು ಸ್ಪಿನ್ನರ್

ನ್ಯೂಯಾರ್ಕ್ ನ ಆರ್ಥರ್ ಆಶೆ ಸ್ಟೇಡಿಯಂ ನಲ್ಲಿ 23 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ 25ರ ಹರೆಯದ ಡೇನಿಯಲ್ ಮೆಡ್ವೆಡೆವ್ ತನ್ನ ಚೊಚ್ಚಲ ಗ್ರಾನ್ ಸ್ಲಾಮ್ ಗೆದ್ದರು. 2019ರ ಯುಎಸ್ ಓಪನ್ ನಲ್ಲಿ ಮೆಡ್ವೆಡೆವ್ ರನ್ನರ್ ಅಪ್ ಆಗಿದ್ದರು.

Advertisement

52 ವರ್ಷಗಳ ಹಿಂದೆ ರಾಡ್ ಲಾವರ್ ನಂತರ ಮೊದಲ ಬಾರಿಗೆ ಯುಎಸ್, ಫ್ರೆಂಚ್ ಮತ್ತು ಆಸ್ಟ್ರೇಲಿಯಾ ಓಪನ್ಸ್ ಮತ್ತು ವಿಂಬಲ್ಡನ್ ಅನ್ನು ಗೆಲ್ಲುವ ಜೊಕೊವಿಕ್ ಅವರ ಕನಸು ಕೊನೆಯ ಆಟದಲ್ಲಿ ಹುಸಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next