ಚೆನ್ನೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನೆರಡು ದಿನವಷ್ಟೇ ಬಾಕಿಯುಳಿದಿದೆ. ಆದರೆ ಇದಕ್ಕೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ಎದುರಾಗಿದೆ.
ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಕೋವಿಡ್ ಸೋಂಕು ದೃಢವಾದ ಬೆನ್ನಲ್ಲೇ ಮತ್ತೋರ್ವ ಆಟಗಾರನಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಆರ್ ಸಿಬಿ ತಂಡದ ಆಲ್ ರೌಂಡರ್ ಡೇನಿಯಲ್ ಸ್ಯಾಮ್ಸ್ ಗೆ ಕೋವಿಡ್ ಸೋಂಕು ದೃಢವಾಗಿದೆ.
ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್ : ಪಂತ್ ಕ್ಯಾಪ್ಟನ್ಸಿಗೊಂದು ಟೆಸ್ಟ್
ಆರ್ ಸಿಬಿ ಫ್ರಾಂಚೈಸಿ ಈ ಬಗ್ಗೆ ಖಚಿತಪಡಿಸಿದ್ದು, ಆಸೀಸ್ ನಿಂದ ಬಂದಾಗ ಮೊದಲು ನಡೆಸಿದ ಟೆಸ್ಟ್ ನಲ್ಲಿ ನೆಗೆಟಿವ್ ವರದಿಯಾಗಿತ್ತು. ಆದರೆ ಎರಡನೇ ಟೆಸ್ಟ್ ವೇಳೆ ಸ್ಯಾಮ್ಸ್ ವರದಿ ಪಾಸಿಟಿವ್ ಆಗಿದೆ ಎಂದಿದೆ.
ಪಡಿಕ್ಕಲ್ ಗೆ ನೆಗೆಟಿವ್: ಮಾ.22ರಂದು ದೇವದತ್ತ ಪಡಿಕ್ಕಲ್ ಗೆ ಕೋವಿಡ್ ಪಾಸಿಟಿವ್ ಆಗಿತ್ತು. ನಂತರ ಅವರು ಐಸಲೋಶನ್ ಗೆ ಒಳಗಾಗಿದ್ದರು. ಇದೀಗ ಪಡಿಕ್ಕಲ್ ವರದಿ ನೆಗೆಟಿವ್ ಆಗಿದ್ದು, ಮಾರ್ಗಸೂಚಿಯಂತೆ ಚೆನ್ನೈ ನ ತಂಡದ ಹೋಟೆಲ್ ಗೆ ಸೇರ್ಪಡೆಯಾಗಿದ್ದಾರೆ.
ಧೋನಿಯಿಂದ ಧೋನಿಯ ಸಂದರ್ಶನ, ಅಲ್ಲ ಆತ್ಮಾವಲೋಕನ!