Advertisement

ಕಾರ್ಕಳ: ಲಿಫ್ಟ್ ಬಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ

01:00 AM Feb 12, 2019 | Team Udayavani |

ಕಾರ್ಕಳ: ನಗರದ ಮುಖ್ಯ ರಸ್ತೆಯಲ್ಲಿನ ಸಾಲ್ಮರ ಎಂಬಲ್ಲಿ ಕಾಮಗಾರಿ ಸ್ಥಗಿತಗೊಂಡಿರುವ ಬಹುಮಹಡಿ ಕಟ್ಟಡ ವೊಂದರಲ್ಲಿ ಸಾಮಗ್ರಿ ಮೇಲೇರಿಸುವ ಲಿಫ್ಟ್ ಅಪಾಯಕಾರಿ ಸ್ಥಿತಿಯಲ್ಲಿದ್ದು, ಅನಾಹುತಕ್ಕೆ ಆಹ್ವಾನ ನೀಡುತ್ತಿದೆ.

Advertisement

ಮುರಿದು ಬೀಳುವ ಸ್ಥಿತಿ
ಕಟ್ಟಡಕ್ಕೆ ಹೊಂದಿಕೊಂಡಂತೆ ಕಬ್ಬಿಣದ ರಾಡ್‌ ಬಳಸಿ ಲಿಫ್ಟ್ ನಿರ್ಮಿಸಲಾಗಿದ್ದು, ತುಕ್ಕು ಹಿಡಿದಿರುವುದು ಮಾತ್ರವಲ್ಲದೇ ಅದಕ್ಕೆ ಆಧಾರವಾಗಿರುವ ಮರದ ತುಂಡುಗಳು ಮುರಿದು ಬೀಳುವ ಸ್ಥಿತಿಯಲ್ಲಿದೆ.

ಸಂಭಾವ್ಯ ಅನಾಹುತ ನಡೆದಲ್ಲಿ ಭಾರವಾದ ರಾಡ್‌ ಹೈ ಟೆನÒನ್‌ ತಂತಿಗೆ ಬೀಳಲಿದೆ. ಪೇಟೆಯ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಈ ಕಟ್ಟಡ ಜನನಿಬಿಡ ಪ್ರದೇಶದಲ್ಲಿರುವುದರಿಂದ ಈ ಬಗ್ಗೆ  ಸಂಬಂಧಪಟ್ಟ ಇಲಾಖೆ ಶೀಘ್ರ ಗಮನ ಹರಿಸಿದಲ್ಲಿ ಉತ್ತಮ.

ಯಾಕೆ ನಿರ್ಲಕ್ಷ್ಯ?
ಪುರಸಭೆಯ 5ನೇ ವಾರ್ಡ್‌ನಲ್ಲಿ 8 ಅಂತಸ್ತುಗಳನ್ನು ಹೊಂದಿರುವ ಈ ಕಟ್ಟಡದ ಕಾಮಗಾರಿ ಅರ್ಧದಲ್ಲೇ ಮೂರು ವರ್ಷಗಳು ಕಳೆದರೂ, ಕಟ್ಟಡದ ಮಾಲಕರು ಅದಕ್ಕೆ ಕಟ್ಟಿದ ಲಿಫ್ಟ್ ತೆರವು ಮಾಡಲು ಮುಂದಾಗಿಲ್ಲ. ಇದು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.

ಕಾರ್ಯಾಲಯದಿಂದ ಅನತಿ ದೂರದಲ್ಲಿದ್ದರೂ ಅಪಾಯಕಾರಿ ಲಿಫ್ಟ್ ಕುರಿತು ಪುರಸಭೆಯ ಅರಿವಿಗೆ ಬಾರದಿರುವುದು ಆಶ್ಚರ್ಯವೇ ಸರಿ!

Advertisement

ಮೆಸ್ಕಾಂ ಮೌನ 
ಹೈ ಟೆನÒನ್‌ ತಂತಿ ಹಾದು ಹೋಗಿದ್ದಾಗ್ಯೂ ಮೆಸ್ಕಾಂ ಮಾತ್ರ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಅಪಾಯ ಸಂಭವಿಸುವ ಮೊದಲು ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಕೊಂಡು ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಲ್ಲಿ ಉತ್ತಮ.

ಪುರಸಭೆಗೆ ದೂರು ನೀಡುತ್ತೇವೆ
ಸಾರ್ವಜನಿಕರಿಗೆ ತೊಂದರೆಯಾಗಲಿರುವ ಕುರಿತು ನಾವು ಪುರಸಭೆಗೆ ದೂರು ನೀಡುತ್ತೇವೆ. ಪುರಸಭೆಯೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.
– ನಾರಾಯಣ ನಾಯ್ಕ ಕಾರ್ಯನಿರ್ವಾಹಕ ಎಂಜಿನಿಯರ್‌, ಮೆಸ್ಕಾಂ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next