Advertisement

ಅಪಾಯಕಾರಿ ವಿದ್ಯುತ್‌ ಕಂಬ

11:46 AM Apr 02, 2019 | pallavi |
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ-ಕಡಬ ರಾಜ್ಯ ಹೆದ್ದಾರಿ ನಡುವೆ ಕೈಕಂಬ ಜಂಕ್ಷನ್‌ ಬಳಿಯಿಂದ ಸ್ವಲ್ಪ ಮುಂದಕ್ಕೆ ರಸ್ತೆ
ಬದಿಯಲ್ಲಿ ವಿದ್ಯುತ್‌ ಕಂಬ ರಸ್ತೆಗೆ ಬಾಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ರಸ್ತೆಯ ತಿರುವಿನಲ್ಲಿ ಈ ಅಪಾಯಕಾರಿ
ವಿದ್ಯುತ್‌ ಕಂಬ ಇದ್ದು, ಕಂಬದ ಬುಡದ ಸುತ್ತಲ ಮಣ್ಣು ಸವೆದಿದೆ.
ಕಂಬಕ್ಕೆ ಬಲ ಒದಗಿಸಲು ಜೋಡಿಸಿದ ಆಧಾರ ತಂತಿ ಕಂಬದಿಂದ ತುಂಡಾಗಿ ಬಿದ್ದಿದೆ. ಕಂಬ ರಸ್ತೆ ಕಡೆಗೆ ಬಾಗಿದೆ. ಈ ಮಾರ್ಗವಾಗಿ ನೂರಾರು ವಾಹನಗಳು ತೆರಳುತ್ತಿದ್ದು, ಕಂಬ ಬಿದ್ದು ಅಪಾಯವಾಗುವ ಸಾಧ್ಯತೆ ಇದೆ. ಇದನ್ನು ಸರಿಪಡಿಸುವಂತೆ ಸ್ಥಳೀಯರು ಮೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next