Advertisement

ಅಪಾಯಕಾರಿ ಬಸ್‌ ನಿಲ್ದಾಣ!

11:59 PM Oct 13, 2019 | Sriram |

ಉಡುಪಿ: ಉಡುಪಿ ನಗರದ ಹಳೆ ತಾಲೂಕು ಕಚೇರಿ ಮುಂಭಾಗದಲ್ಲಿರುವ ಬಸ್‌ ನಿಲ್ದಾಣ ನಾದುರಸ್ತಿಯಲ್ಲಿದ್ದು, ಬೆಂಚುಗಳಿಗೆ ಅಳವಡಿಸಿದ್ದ ಕಲ್ಲುಗಳು ಮುರಿದು ಬಿದ್ದಿವೆ.
ಜನನಿಬಿಡ ಪ್ರದೇಶದಲ್ಲಿರುವ ಈ ಬಸ್‌ ನಿಲ್ದಾಣದ ಸನಿಹದಲ್ಲೇ ಖಾಸಗಿ ಆಸ್ಪತ್ರೆ ಇದ್ದು, ಸಣ್ಣ ಮಕ್ಕಳು, ಗರ್ಭಿಣಿಯರು ಬಸ್‌ಗೆ ಕಾಯುತ್ತಿರುತ್ತಾರೆ.

Advertisement

ಮಕ್ಕಳು ಕುಳಿತುಕೊಳ್ಳಲು ಪ್ರಯತ್ನಪಟ್ಟರೆ ಅಪಾಯ ಖಚಿತವಾಗಿದೆ. ಆಸನಕ್ಕೆ ಅಳವಡಿಸಿದ್ದ ಕಡಪ ಕಲ್ಲು ಮುರಿದು ಬಿದ್ದಿದೆ. ಇತ್ತೀಚೆಗೆ ಬಸ್‌ ನಿಲ್ದಾಣದಲ್ಲಿ ಜಾಹೀರಾತು ಬೋರ್ಡ್‌ಗಳನ್ನು ಬದಲಿಸಿ ಹೊಸ ಬೋರ್ಡ್‌ ಅಳವಡಿಸಲಾಗಿದೆ. ಆದರೆ ಬೆಂಚ್‌ ಸರಿ ಮಾಡುವ ಬಗ್ಗೆ ನಗರ ಸಭೆ ನಿರ್ಲಕ್ಷ್ಯ ವಹಿಸಿದೆ.

ಮಾನಸಿಕ ಅಸ್ವಸ್ಥರು, ಕುಡುಕರು ಇದನ್ನೇ ಉಪಯೋಗಿಸಿಕೊಂಡು ಸಾರ್ವಜನಿಕರ ಮೇಲೆ ಹಲ್ಲೆ ಮಾಡುವ ಅಪಾಯವೂ ಇದೆ. ಹೀಗಾಗಿ ನಗರ ಸಭೆ ಕೂಡಲೇ ಈ ತಂಗುದಾಣವನ್ನು ದುರಸ್ತಿ ಮಾಡಿ, ಸ್ಟೀಲ್‌ ಬೆಂಚ್‌ಗಳನ್ನು ಅಳವಡಿಸಬೇಕಿದೆ.

ಅಪಾಯಕಾರಿ ಸ್ವಿಚ್‌ಗಳು
ನಗರದ ಹಲವೆಡೆ ಇಂಥ ಅಪಾಯಕಾರಿ ಬಸ್‌ ನಿಲ್ದಾಣಗಳಿವೆ. ಕೆಲವೆಡೆ ಬೆಂಚ್‌ಗಳು ತುಂಡಾಗಿದ್ದರೆ, ಇನ್ನು ಕೆಲವಡೆ ಬಸ್‌ ನಿಲ್ದಾಣದಲ್ಲಿ ಅಳವಡಿಸಿರುವ ಜಾಹೀರಾತು ಫ‌ಲಕಗಳಿಗೆ ವಿದ್ಯುತ್‌ ಸರಬರಾಜು ಮಾಡುವ ಸ್ವಿಚ್‌ ಬೋರ್ಡ್‌ಗಳ ಬಾಗಿಲುಗಳು ತೆರೆದುಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಸೂಚನೆ ನೀಡಲಾಗುವುದು
ನಗರದಲ್ಲಿ ಕೆಲವು ಬಸ್‌ ನಿಲ್ದಾಣಗಳನ್ನು ನಗರಸಭೆ ಹಾಗೂ ಉಳಿದ ಕೆಲವನ್ನು ಖಾಸಗಿ ಏಜೆನ್ಸಿಗಳು ನಿರ್ವಹಿಸುತ್ತಿವೆ. ನಾದುರಸ್ತಿಯಲ್ಲಿರುವ ಬಸ್‌ ನಿಲ್ದಾಣಗಳ ಪರಿಶೀಲನೆ ನಡೆಸುವಂತೆ ಎಂಜಿನಿಯರ್‌ ವಿಭಾಗಕ್ಕೆ ಸೂಚನೆ ನೀಡಲಾಗುವುದು.
-ಆನಂದ ಕಲ್ಲೋಳಿಕರ್‌,
ಪೌರಾಯುಕ್ತರು, ನಗರಸಭೆ

Advertisement
Advertisement

Udayavani is now on Telegram. Click here to join our channel and stay updated with the latest news.

Next