Advertisement
ಬೇಲಾಡಿ ಕಾಂತಾವರ ಮುಖ್ಯ ರಸ್ತೆಯು ಅಗಲೀಕರಣಗೊಂಡಿದ್ದು, ಸೇತುವೆ ಮಾತ್ರ ಕಿರಿದಾಗಿದ್ದು ವಾಹನ ಸವಾರರು ಅತೀ ವೇಗವಾಗಿ ಸಂಚರಿಸಿದಲ್ಲಿ ಕಿರಿದಾದ ಸೇತುವೆಯನ್ನು ಗಮನಿಸದೆ ಅವಘಡ ಸಂಭವಿಸಬಹುದಾಗಿದೆ. ಸೇತುವೆ ಕಿರಿದಾ ಗಿದ್ದು ಎರಡು ವಾಹನಗಳು ಏಕಕಾಲಕ್ಕೆ ಸಂಚರಿಸುವುದು ಕಷ್ಟ ಸಾಧ್ಯವಾಗಿದೆ. ಎದುರಿನಿಂದ ವಾಹನ ಬಂದಲ್ಲಿ ಮತ್ತೂಂದು ಪಾರ್ಶ್ವದಲ್ಲಿರುವ ವಾಹನವು ನಿಲ್ಲಿಸಬೇಕಾಗುತ್ತದೆ.
Related Articles
ಕಿರು ಸೇತುವೆಯು ಬಹಳ ಹಳೆಯ ಸೇತುವೆಯಾಗಿದ್ದು ಸೇತುವೆಯ ತಳಭಾಗದ ಕಲ್ಲುಗಳು ನೀರಿನ ರಭಸಕ್ಕೆ ಕೆಳಕ್ಕೆ ಜಾರಿದ್ದು, ಸೇತುವೆಯು ಕೆಲವೆಡೆ ಬಿರುಕು ಬಿಟ್ಟಿದೆ. ಸೇತುವೆಯ ಮೇಲ್ಭಾಗದ ತಡೆಗೋಡೆಯು ಮುರಿದು ಬಿದ್ದಿದೆ.
Advertisement
ಶೀಘ್ರ ಕಾಮಗಾರಿಬೇಲಾಡಿ ಕಿರು ಸೇತುವೆ ವಿಸ್ತರಣೆ ಕುರಿತು ಶಾಸಕರ ಗಮನಕ್ಕೆ ತಂದಿದ್ದು ಶಾಸಕರು ವಿಶೇಷ ಮುತುವರ್ಜಿ ವಹಿಸಿ 70ಲಕ್ಷ ರೂ. ಅನುದಾನ ಮಂಜೂರುಗೊಳಿಸಿದ್ದು ಟೆಂಡರ್ ಪೂರ್ಣಗೊಂಡಿದೆ. ಸೇತುವೆ ನಿರ್ಮಿಸುವ ಸ್ಥಳದ ಮಣ್ಣಿನ ತಪಾಸಣೆಗೆ ಕೊಂಡೊಯ್ದಿದ್ದು ವರದಿ ಕೈ ಸೇರಿದ ಬಳಿಕ ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು.
-ಪ್ರವೀಣ್ ಕೋಟ್ಯಾನ್, ತಾ.ಪಂ. ಸದಸ್ಯರು ಬಹು ದಶಕಗಳ ಬೇಡಿಕೆ
ಬೇಲಾಡಿ ಗ್ರಾಮದ ಬಹುಬೇಡಿಕೆಯಾದ ಕಿರು ಸೇತುವೆಯು ಸ್ಥಳೀಯರಿಗೆ ಅತೀ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರ ಸೇತುವೆ ಅಭಿವೃದ್ಧಿ ಕಾಮಗಾರಿಯು ನಡೆಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಬಹು ದಶಕಗಳ ಬೇಡಿಕೆಯನ್ನು ಈಡೇರಿಸುವಂತಾಗಬೇಕು.
-ಪ್ರಭಾಕರ ಕುಲಾಲ್, ಅಧ್ಯಕ್ಷರು, ಪುಂಡರೀಕ ವಿಷ್ಣುಮೂರ್ತಿ ಭಜನ ಮಂಡಳಿ ಬೇಲಾಡಿ