Advertisement

Dandeli ತಾ.ಪಂ EO ಕಾರ್ಯವೈಖರಿ; ಸರಿಪಡಿಸುವ ಭರವಸೆ ನೀಡಿದ ಡಿಸಿ

10:43 PM Aug 21, 2023 | Team Udayavani |

ದಾಂಡೇಲಿ : ದಾಂಡೇಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರ ಬಗ್ಗೆ ದಾಂಡೇಲಿ ನಗರ ಸಭೆಯ ಆವರಣದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರಲ್ಲಿ ಮಾಧ್ಯಮದವರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

Advertisement

ತಾಲೂಕಿನ ಕೇರವಾಡದ ಕೆರೆ ಒಡೆದು ಅಪಾರ ಪ್ರಮಾಣದ ಹಾನಿಯಾಗಿರುವ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡದೇ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿರುವುದರ ಬಗ್ಗೆ ಮತ್ತು ತಾಲ್ಲೂಕಾಡಳಿತ ಮತ್ತು ನಗರಾಡಳಿತ ಆಯೋಜಿಸಿದ್ದ ಸ್ವಾತಂತ್ರೋತ್ಸವ ಕಾರ್ಯಕ್ರಮ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ವೀರಯೋಧರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವುದು. ತಾಲ್ಲೂಕು ಪಂಚಾಯ್ತು ಕಾರ್ಯಾಲಯದಲ್ಲಿ ಹೆಚ್ಚಿನ ದಿನಗಳಲ್ಲಿ ಇಲ್ಲದೇ ಇರುವ ವಿಚಾರ ಪ್ರಸ್ತಾಪಿಸಲಾಯಿತು.

ದಾಂಡೇಲಿ ತಾಲೂಕು ಸಣ್ಣ ತಾಲೂಕಾಗಿದ್ದು, ಕೇವಲ ನಾಲ್ಕೆ ನಾಲ್ಕು ಗ್ರಾ.ಪಂಚಾಯ್ತುಗಳನ್ನು ಒಳಗೊಂಡ ತಾಲೂಕಾಗಿದ್ದರೂ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರು ಕಾರ್ಯಾಲಯದಲ್ಲಿ ಅಪರೂಪ ಎಂಬಂತೆ ಕಾಣಸಿಗುತ್ತಾರೆ. ಮಾಧ್ಯಮದವರು ಸಹ ಕಾರ್ಯನಿರ್ವಹಣಾಧಿಕಾರಿಯವರಲ್ಲಿ ಗೌರವಯುತವಾಗಿ ಮಾತನಾಡಿಸಿದಾಗಲೂ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಯ್ತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಈ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಕಾಮಗಾರಿಗಳ ಬಾಕಿಯಿರುವ ಬಿಲ್ಲುಗಳನ್ನು ಪಾವತಿಸುವಂತೆ ಮನವಿ

Advertisement

15ನೇ ಹಣಕಾಸು, ನಗರ ಸಭೆ ನಿಧಿ ಮತ್ತು 2019-20ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದಡಿಯಲ್ಲಿ ಹಲವಾರು ಕಾಮಗಾರಿಗಳನ್ನು ಟೆಂಡರ್ ಮೂಲಕ ಗುತ್ತಿಗೆ ಪಡೆದು, ಕಾಮಗಾರಿಯನ್ನು ಪೂರ್ಣಗೊಳಿಸಿ ಮೂರು ತಿಂಗಳು ಕಳೆದರೂ, ಕಾಮಗಾರಿಯ ಬಾಕಿಯಿರುವ ಬಿಲ್ಲು ಮೊತ್ತವನ್ನು ಈವರೇಗೆ ಪಾವತಿ ಮಾಡಲಾಗಿಲ್ಲ. ಆದ್ದರಿಂದ ಪೂರ್ಣಗೊಂಡ ಕಾಮಗಾರಿಗಳ ಬಾಕಿಯಿರುವ ಬಿಲ್ಲನ್ನು ಕೂಡಲೆ ಪಾವತಿಸಲು ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘವು ನಗರ ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರಿಗೆ ಲಿಖಿತ ಮನವಿ ನೀಡಿ ವಿನಂತಿಸಿದೆ.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಯವರು ಈ ಬಗ್ಗೆ ಕೂಡಲೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಗರದ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್.ಶಶಿಧರನ್, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಲಮಾಣಿ, ಖಜಾಂಚಿ ಸುಧಾಕರ ರೆಡ್ಡಿ, ಪದಾಧಿಕಾರಿಗಳಾದ ಸುಬ್ರಹ್ಮಣ್ಯ ಪಡುಕೋಣೆ, ಆರ್.ಡಿ.ಜನ್ನು, ಆನಂದ್ ಮಾಧವ್, ಎಂ.ಸುಬ್ರಮಣಿ, ನಾಗರಾಜ ಗುಲಗಂಜಿ, ಶರಣಪ್ಪ ಮುರುಡೆ, ಚಂದ್ರ ಖೋಕಣೆ, ಪ್ರದೀಪ್ ಗವಸ, ಅವಿನಾಶ್ ಘೋಡ್ಕೆ, ಜಸ್ಪಲ್ ಸಿಂಗ್ ರಜಪೂತ್, ಅಪ್ನಾನ್ ಕುಟ್ಟಿ, ಕರೀಂ ಮುಲ್ಲಾ, ವಿಶಾಲ್ ಜಿತೂರಿ, ಬಸವರಾಜ ಮುರುಡೆ, ಅರವಿಂದ ಪಾಠನಕರ್ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next