Advertisement

Dandeli: SSCL ಮರು ಮೌಲ್ಯಮಾಪನ; ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಆವೇಸ್ ಮುಜಾವರ್

02:36 PM Jun 10, 2023 | Team Udayavani |

ದಾಂಡೇಲಿ : ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹಳಿಯಾಳ-ದಾಂಡೇಲಿ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದ ದಾಂಡೇಲಿಯ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ವಿದ್ಯಾರ್ಥಿ ಆವೇಸ್ ಹಸನ್ ಮುಜಾವರ್ ಮರು ಮೌಲ್ಯಮಾಪನದಲ್ಲಿ 2 ಅಂಕಗಳನ್ನು ಹೆಚ್ಚಿಸಿಕೊಂಡು ಹಳಿಯಾಳ-ದಾಂಡೇಲಿ ತಾಲೂಕಿಗೆ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾನೆ.

Advertisement

ಈ ಹಿಂದೆ 619 ಅಂಕಗಳನ್ನು ಪಡೆದುಕೊಂಡಿದ್ದ ಆವೇಸ್ ಹಸನ್ ಮುಜಾವರ್ ನಿಗೆ ಮರು ಮೌಲ್ಯಮಾಪನದಲ್ಲಿ ವಿಜ್ಞಾನ ವಿಷಯದಲ್ಲಿ 2 ಅಂಕಗಳು ಹೆಚ್ಚಾಗುವುದರೊಂದಿಗೆ ಒಟ್ಟು ಪಡೆದ ಅಂಕಗಳು 621 ಆಗಿದ್ದು, ಶೇ:99.40 ಫಲಿತಾಂಶ ಪಡೆದುಕೊಂಡಿದ್ದಾನೆ.

ಈತ ನಗರ ಸಭಾ ಸದಸ್ಯ ಆಸೀಪ್ ಮುಜಾವರ್ ಮತ್ತು ಶಿಕ್ಷಕಿ ನಾಝೀಯಾ ದಂಪತಿಗಳ ಪುತ್ರ. ಆವೇಸ್ ಹಸನ್ ಮುಜಾವರ್ ಸಾಧನೆಗೆ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಹಾಗೂ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next