Advertisement

ಪಪ್ಪಾಯಿಯೊಳಗೆ ಮೂಡಿಬಂದ ಗಣಪ -ಇದು ಪ್ರಕೃತಿ ವಿಸ್ಮಯ

05:54 PM Aug 29, 2021 | Team Udayavani |

ದಾಂಡೇಲಿ: ಈ ಪ್ರಕೃತಿಯೆ ಹೀಗೆ. ವಿಜ್ಞಾನಕ್ಕೆ ಸವಾಲೊಡ್ಡುವ ಹಲವು ವಿಸ್ಮಯಗಳನ್ನು ಜಗತ್ತಿಗೆ ಅನಾವರಣಗೊಳಿಸುವ ಮೂಲಕ ಪ್ರಕೃತಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಸಾರುತ್ತಿದೆ. ಪ್ರಕೃತಿಯ ವಿವಿಧ ವಿಸ್ಮಯಗಳು ಹೊಸ ಅನುಭವವನ್ನು ನೀಡುವುದರಲ್ಲಿ ಎರಡು ಮಾತಿಲ್ಲ. ಅಂದ ಹಾಗೆ ಚೌತಿಯ ದಿನಗಣನೆಯಲ್ಲಿರುವ ಸಮಯದಲ್ಲಿ ದಾಂಡೇಲಿ ನಗರದ ಕುಳಗಿ ರಸ್ತೆಯ ಮನೆಯೊಂದರಲ್ಲಿ ವಿಚಿತ್ರ ಸಂಗತಿಯೊಂದು ಶನಿವಾರ ಸಂಜೆ ನಡೆದಿದೆ. ಈ ಘಟನೆ ವಿಚಿತ್ರವಾದರೂ ಸತ್ಯ.

Advertisement

ಕುಳಗಿ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ವಿನಾಯಕ ಲಕ್ಷ್ಮಣ ಕದಂ ಅವರು ತನ್ನ ಹುಟ್ಟೂರು ಹಳಿಯಾಳದ ಹಂಪಿಹಳ್ಳಿಯಿಂದ ಪಪ್ಪಾಯಿ ಹಣ್ಣೊಂದನ್ನು ತಂದಿದ್ದರು. ಮನೆಗೆ ಬಂದ ನಂತರ ಪಪ್ಪಾಯಿ ಹಣ್ಣನ್ನು ತಿನ್ನಲೆಂದು ಸರಿ ಅರ್ಧ ಮಾಡಿ ತುಂಡರಿಸಿದರೇ ಆಶ್ಚರ್ಯವೊಂದು ಕಾದಿತ್ತು. ಪಪ್ಪಾಯಿ ಹಣ್ಣನ್ನು ಎರಡು ಭಾಗವನ್ನಾಗಿ ಮಾಡಿದಾಗ ಎರಡು ಭಾಗಗಳ ಮಧ್ಯದಲ್ಲಿ ಹಣ್ಣಿನ ಬೀಜಗಳಿರುವ ಬದಲಿಗೆ ಗಣಪನ ಆಕಾರದ ಗಡ್ಡೆಯ ರೂಪವೊಂದು ಕಂಡು ಬಂದಿದೆ.

ಇದನ್ನೂ ಓದಿ:ಸರಳ ಗಣೇಶೋತ್ಸವಕ್ಕೆ ಗೋಮಯ ಗಣಪತಿ ಆಕರ್ಷಣೆ

ಇದನ್ನು ನೋಡಿದ ಮನೆಮಂದಿಯೆಲ್ಲಾ ಒಮ್ಮೆಲೆ ಆಶ್ಚರ್ಯಚಕಿತರಾದರಲ್ಲದೇ ಭಕ್ತಿಯ ಭಾವಪರವಶರಾದರು. ತಕ್ಷಣವೇ ಅಲ್ಲೆ ಇದ್ದ ಏಳು ಮಕ್ಕಳ ತಾಯಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಪ್ರಕೃತಿಯ ಈ ವೈಶಿಷ್ಟವನ್ನು ಕಂಡು ಅಲ್ಲಿದ್ದವರು ಬೆರಗಾದರು. ನಗರದ ಸಮಾಜ ಸೇವಕ ಮಹೇಶ ನಾಗಪ್ಪ ನಾಯ್ಕ ಅವರು ಸುಂದರ ಈ ಪ್ರಕೃತಿಯ ವೈಶಿಷ್ಟ್ಯವನ್ನು ತನ್ನ ಮೊಬೈಲ್ ಕ್ಯಾಮೇರಾದಲ್ಲಿ ಸೆರೆ ಹಿಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next