Advertisement

ದಾಂಡೇಲಿ: ಎಂಇಎಸ್ ನಿಷೇಧಿಸುವಂತೆ ಆಗ್ರಹಿಸಿ ಕರವೇಯಿಂದ ಪ್ರತಿಭಟನೆ

11:39 AM Dec 16, 2021 | Team Udayavani |

ದಾಂಡೇಲಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕರ್ನಾಟಕ ರಾಜ್ಯದ ಬಾವುಟವನ್ನು ಸುಟ್ಟು ಹಾಕಿ ಪುಂಡಾಟಿಕೆ ಮಾಡಿರುವ ಘಟನೆಯನ್ನು ಹಾಗೂ ಕನ್ನಡ ನಾಡಿನ ಸ್ವಾಭಿಮಾನವನ್ನು ತೋರಿಸಿಕೊಟ್ಟ ಸಂಪತ್ ಕುಮಾರ್ ದೇಸಾಯಿಯವರ ಮೇಲೆ ಕೊಲೆಯತ್ನದಡಿ ಸುಳ್ಳು ಪ್ರಕರಣವನ್ನು ದಾಖಲಿಸಿರುವುದನ್ನು ಖಂಡಿಸಿ ನಗರದ ಸೋಮಾನಿ ವೃತ್ತದಲ್ಲಿ ಕರವೇ (ಪ್ರ) ಬಣದ ವತಿಯಿಂದ ಬುಧವಾರ ಸಂಜೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು ಹಾಗೂ ಈ ಸಂದರ್ಭದಲ್ಲಿ ಎಂ.ಇ.ಎಸ್ ಬಾವುಟವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.

Advertisement

ಬೆಳಗಾವಿಯಲ್ಲಿ ಎಂ.ಇ.ಎಸ್ ಸಂಘಟನೆಯ ಪುಂಡಾಟಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಯ ಸಂಪತ್ ಕುಮಾರ್ ದೇಸಾಯಿಯವರ ತಂಡ ಎಂ.ಇ.ಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಕಪ್ಪು ಮಸಿ ಬಳಿದು ಘರ್ಜಿಸಿ ಕನ್ನಡ ನಾಡಿನ ಸ್ವಾಭಿಮಾನವನ್ನು ತೋರಿಸಿಕೊಟ್ಟಿದ್ದರು. ಆದರೆ ಸಂಪತ್ ಕುಮಾರ್ ದೇಸಾಯಿಯವರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿರುವುದು ಖಂಡನೀಯ. ಆದ್ದರಿಂದ ಈ ಕೂಡಲೇ ಸಂಪತ್ ಕುಮಾರ್ ದೇಸಾಯಿಯವರ ಮೇಲೆ ದಾಖಲಿಸಲಾದ ಪ್ರಕರಣವನ್ನು ಕೈ ಬಿಡಬೇಕು ಮತ್ತು ನಾಡದ್ರೋಹಿ ಎಂ.ಇ.ಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆಯಲಾದ ಮನವಿಯನ್ನು ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ಮೂಲಕ ನೀಡಲಾಯಿತು.

ಈ ಸಂದರ್ಭದಲ್ಲಿ ಕರವೇ (ಪ್ರ) ಬಣದ ತಾಲೂಕು ಘಟಕದ ಅಧ್ಯಕ್ಷ ಮಂಜು ಪಂಥೋಜಿ, ಮುಖಂಡರುಗಳಾದ ಪ್ರವೀಣ ಕೊಠಾರಿ, ಯಲ್ಲಪ್ಪ ನರಿಯವರ, ಸಂತೋಷ ತೇರದಾಳ, ಸಂಜು ಸಿಂಗಾಯಿ, ಅಕ್ಷಯ್ ಪಂತೋಜಿ, ಅಸ್ಲಂ ದೇಸಾಯಿ, ತೌಸೀಪ್ ಮುಲ್ಲಾ, ಪ್ರಸಾದ, ಕಾರ್ತಿಕ್ ಪಂತೋಜಿ, ವಿನೋದ, ವಿಷ್ಣು ನಾಯರ್, ರಾಮಾ ನಾಯ್ಡು, ಅಶೋಕ ನಾಯ್ಕ, ವಿರೂಪಾಕ್ಷ ಕಿನ್ಯಾಳ, ರಾಮಲಿಂಗ ಜಾಧವ್, ರಾಘವೇಂದ್ರ ಗಡೆಪ್ಪನವರ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next