Advertisement

ಹಳಿಯಾಳ ರಸ್ತೆಯಲ್ಲಿ ಮಟ್ಕಾ ಆಡಿಸುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ- ಪ್ರಕರಣ ದಾಖಲು

09:10 PM Sep 01, 2021 | Team Udayavani |

ದಾಂಡೇಲಿ : ನಗರದ ಹಳಿಯಾಳ ರಸ್ತೆಯ 3ನಂ. ಗೇಟ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಾಟ ಆಡಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಮಟ್ಕಾ ಜುಗರಾಟಕ್ಕೆ ಬಳಸುತ್ತಿದ್ದ ನಗದನ್ನು ವಶಪಡಿಸಿಕೊಂಡಿರುವ ಘಟನೆ ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ನಗರದ ಹಳೆದಾಂಡೇಲಿ ನಿವಾಸಿ  37 ವರ್ಷ ವಯಸ್ಸಿನ ಸಂತೋಷ ಬುದಾಜಿ ನಾಯ್ಕ ಎಂಬಾತನು ಹಳಿಯಾಳ ರಸ್ತೆಯ 3ನಂ. ಗೇಟ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತಮ್ಮ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ ಒಂದು ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ ಸಂಖ್ಯೆ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ,ಮಟ್ಕಾ ಜುಗಾರಾಟ ಆಡಿಸುತ್ತಿದ್ದನು.

ಇದನ್ನೂ ಓದಿ:ಸೈಬರ್ ಭದ್ರತೆ ಈಗ ಜಾಗತಿಕ ಅಗತ್ಯ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

ಈ ಸಂದರ್ಭದಲ್ಲಿ ದಾಂಡೇಲಿ ನಗರ ಪೊಲೀಸರು ದಾಳಿ ನಡೆಸಿ ಮಟ್ಕಾ ಬರೆದಿರುವ ಚೀಟಿ ಹಾಗೂ ನಗದು ರೂ: 1030/- ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಕಲಂ 78(3) ರ ಕೆ.ಪಿ.ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಸೈ ಯಲ್ಲಪ್ಪ.ಎಸ್ ಅವರು ದಾಳಿ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next