Advertisement

ಉಳವಿ ರಸ್ತೆಯಲ್ಲಿ ಪ್ರವಾಸಿಗರಿಗೆ ಶಾಕ್‌ ಕೊಟ್ಟ ಕಪ್ಪು ಚಿರತೆ !

08:55 PM Oct 14, 2021 | Team Udayavani |

ದಾಂಡೇಲಿ :  ವನ್ಯಪ್ರಾಣಿಗಳಿಗೆ ಹೆಸರುವಾಸಿಯಾದ ದಟ್ಟ ಕಾಡಿನ ಅರಮನೆ ಎಂದೆ ಜನಜನಿತವಾದ ಜೋಯಿಡಾ ತಾಲೂಕಿನ ಪೊಟೋಲಿಯಿಂದ ಉಳವಿಗೆ ಹೋಗುವ ರಸ್ತೆಯಲ್ಲಿ ಚಾಪೇಲಿ ಬಳಿ ರಸ್ತೆಯಲ್ಲಿ ಕಪ್ಪು ಚಿರತೆಯೊಂದು ಪ್ರವಾಸಿಗರಿಗೆ ಕಾಣಿಸಿಕೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

Advertisement

ಇದನ್ನೂ ಓದಿ:ಉಪಚುನಾವಣೆ ಬಿಜೆಪಿ ವಿರುದ್ಧ ಕೋಪ, ತಾಪ ತೀರಿಸಿಕೊಳ್ಳಲು ಅವಕಾಶ: ಡಿಕೆಶಿ

ಪ್ರವಾಸೋದ್ಯಮಿ ವಿಕ್ರಂ ಸೋಗಿಯವರ ಪೊಟೋಲಿಯಲ್ಲಿರುವ ಸಾಂಗ್ವೆ ಹೋಂ ಸ್ಟೆಗೆ ಬಂದಿದ್ದ ಪ್ರವಾಸಿಗರು ಬೆಳಿಗ್ಗೆ ಉಳವಿಗೆಂದು ಹೋಗುತ್ತಿದ್ದಾಗ ಚಾಪೇಲಿ ಎಂಬಲ್ಲಿ ಕಪ್ಪು ಚಿರತೆ ರಸ್ತೆಯನ್ನು ದಾಟುತ್ತಿರುವುದು ಕಂಡುಬಂದಿದ್ದು, ತಕ್ಷಣವೆ ಎಚ್ಚೆತ್ತುಕೊಂಡ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಕಪ್ಪು ಚಿರತೆ ರಸ್ತೆ ದಾಟುತ್ತಿರುವುದನ್ನು ವಿಡಿಯೊ ಮಾಡಿದ್ದಾರೆ. ಇದೀಗ ಆ ವಿಡಿಯೋ ಭಾರಿ ವೈರಲ್ ಆಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next