Advertisement

ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ: ಪೊಲೀಸರಿಂದ ದಾಳಿ

02:08 PM Jul 14, 2023 | sudhir |

ದಾಂಡೇಲಿ: ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅನಧಿಕೃತವಾಗಿ ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ಸಂದರ್ಭದಲ್ಲಿ ದಾಂಡೇಲಿ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ, ಅನಧಿಕೃತವಾಗಿ ಮಾರಲಿಟ್ಟಿದ್ದ ಮದ್ಯವನ್ನು ವಶಪಡಿಸಿಕೊಂಡಿರುವ ಘಟನೆ ನಗರದ ಹಳಿಯಾಳ ರಸ್ತೆಯ ಮೂರು ನಂ ಗೇಟ್ ಹತ್ತಿರ ನಡೆದಿದೆ.

Advertisement

ಹಳಿಯಾಳ ರಸ್ತೆಯ ಮೂರು ನಂ ಗೇಟ್ ಹತ್ತಿರದ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಂಗಡಿಯಾತ ದೇವರಾಜ ಎಂಬಾತನು ಸಾರ್ವಜನಿಕರಿಗೆ ಅನಧಿಕೃತವಾಗಿ ಸರಾಯಿ ಕುಡಿಯಲು ಅವಕಾಶ ಮಾಡಿಕೊಟ್ಟ ಸಂದರ್ಭದಲ್ಲಿ ದಾಂಡೇಲಿ ನಗರ ಠಾಣೆಯ ಪಿಎಸ್ಐ ಐ.ಆರ್.ಗಡ್ಡೇಕರ್ ಅವರ ನೇತೃತ್ವದ ಪೊಲೀಸ್ ತಂಡ ದಾಳಿ ಮಾಡಿ ಸರಾಯಿ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟ ದೇವರಾಜ ಮತ್ತು ಅನಧಿಕೃತವಾಗಿ ಅಲ್ಲಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಎಂಬಪ್ಪೆ ಬಗ್ಗೆ ಫ್ರಾನ್ಸ್ ಜನರಿಗಿಂತ ಭಾರತೀಯರಿಗೆ ಹೆಚ್ಚು ಗೊತ್ತು: ಪ್ಯಾರಿಸ್ ನಲ್ಲಿ ಮೋದಿ

Advertisement

Udayavani is now on Telegram. Click here to join our channel and stay updated with the latest news.

Next