Advertisement

Dandeli: ದ್ವಿಚಕ್ರ ವಾಹನಗಳ‌ ನಡುವೆ ಅಪಘಾತ

02:54 PM Sep 02, 2023 | Team Udayavani |

ದಾಂಡೇಲಿ: ಎರಡು ದ್ವಿಚಕ್ರ ವಾಹನಗಳ‌ ನಡುವೆ ಅಪಘಾತ ಸಂಭವಿಸಿ ಪತಿ-ಪತ್ನಿ ಇಬ್ಬರಿಗೂ ಗಾಯವಾದ ಘಟನೆ ನಗರದ ಸೋಮಾನಿ ವೃತ್ತದಲ್ಲಿ ಸೆ.2ರ ಶನಿವಾರ ನಡೆದಿದೆ.

Advertisement

ನಗರದ ಅಂಬೆವಾಡಿ ನಿವಾಸಿ ರವಿ ಜೋಶಿ ಎಂಬವರು ತಮ್ಮ ನಾಲ್ಕು ವರ್ಷದ ಮಗಳನ್ನು ಭಟ್ ಆಸ್ಪತ್ರೆಗೆ ಪತ್ನಿ ಸಹಿತ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸೋಮಾನಿ ವೃತ್ತದಿಂದ ಭಟ್ ಆಸ್ಪತ್ರೆಗೆ ಹೋಗುವಾಗ ಹಿಂಬದಿಯಿಂದ ಬಂದ ದ್ವಿಚಕ್ರ ವಾಹನವೊಂದು ಅಪಘಾತ ಮಾಡಿ ಪರಾರಿಯಾಗಿದೆ.

ಈ ಸಮಯದಲ್ಲಿ ರವಿ ಜೋಶಿ ಮತ್ತು ಅವರ ಪತ್ನಿಗೆ ಗಾಯವಾಗಿದೆ. ಗಾಯಗೊಂಡವರನ್ನು ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಘಟನಾ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next