Advertisement

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ

09:23 AM May 05, 2024 | Team Udayavani |

ದಾಂಡೇಲಿ: ತಾಲೂಕಿನ ಹಾಲಮಡ್ಡಿಯಲ್ಲಿ ಗಂಡ-ಹೆಂಡತಿಯ ಜಗಳದಿಂದಾಗಿ ಜನ್ಮಕೊಟ್ಟ ತಾಯಿಯಿಂದಲೇ ಶನಿವಾರ ರಾತ್ರಿ ನಾಲಾಕ್ಕೆಸೆಯಲಾಗಿದ್ದ 6 ವರ್ಷದ ಗಂಡು ಮಗುವಿನ ಶೋಧ ಕಾರ್ಯಾಚರಣೆ ಇಂದು ಕೂಡಾ ಮುಂದುವರೆದು, ಇದೀಗ ಮಗುವಿನ ಮೃತದೇಹ ಪತ್ತೆಯಾಗಿದ್ದು, ದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

Advertisement

ಡಿವೈಎಸ್ಪಿ ಶಿವಾನಂದ್, ಸಿಪಿಐ ಭೀಮಣ್ಣ ಎಂ. ಸೂರಿ, ಪಿಎಸ್ಐಗಳಾದ ಕೃಷ್ಣ ಗೌಡ ಅರಕೇರಿ, ಜಗದೀಶ್, ಸಹಾಯಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜೋಯಿಡಾದ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗು ತಜ್ಞರ ಸಹಕಾರದಿಂದ ಮಗುವನ್ನು ಮೊಸಳೆಯ ಬಾಯಿಯಿಂದ ಬಿಡಿಸಿಕೊಂಡು ಮೇಲಕ್ಕೆ ತರಲಾಗಿದೆ.

ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next