Advertisement

ದಾಂಡೇಲಿ-ಅಳ್ನಾವರ ಕುಡಿಯುವ ನೀರು ಪೊರೈಕೆಯ ಕಾಮಗಾರಿ ನಿಲ್ಲಿಸುವಂತೆ ಅಗ್ರಹ

02:54 PM Dec 20, 2021 | Team Udayavani |

ದಾಂಡೇಲಿ : ದಾಂಡೇಲಿಯಿಂದ ಅಳ್ವಾವರಕ್ಕೆ ಕುಡಿಯುವ ನೀರು ಪೊರೈಕೆಯ ಪೈಪ್ಲೈನ್ ಕಾಮಗಾರಿಯನ್ನು ಯಾವುದೇ ಮುನ್ಸೂಚನೆ ನೀಡದೆ ಮತ್ತೆ ಪುನರಾರಂಭಿಸಲಾಗಿದೆ.

Advertisement

ಈ ಹಿಂದೆ ದಾಂಡೇಲಿಯಿಂದ ನೀರು ಕೊಂಡೊಯ್ಯವುದನ್ನು ವಿರೋಧಿಸಿ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ 53 ದಿನಗಳ ಕಾಲ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಕೊರೊನಾ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಲಿಕವಾಗಿ ಮುಂದೂಡಲಾಗಿತ್ತು.

ಆ ಸಮಯದಲ್ಲಿ ನೀರಿನ ಯೋಜನೆಯ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಯಾವುದೇ ಸೂಚನೆ ನೀಡದೆ ಮತ್ತೇ ನೀರು ಪೊರೈಕೆಯ ಕಾಮಗಾರಿ ಆರಂಭಿಸಲಾಗಿದೆ. ಕೂಡಲೇ ಕಾಮಗಾರಿಯನ್ನು ನಿಲ್ಲಿಸಬೇಕೆಂದು ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ನಿಯೋಗ ತಹಶೀಲ್ದಾರ್ ಕಾರ್ಯಾಲಯಕ್ಕೆ ಭೇಟಿ ನೀಡಿ ತಹಶೀಲ್ದಾರ್ ಶೈಲೇಶ ಪರಮಾನಂದ ಮತ್ತು ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರಿಗೆ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ  ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್, ಸಮಿತಿಯ ಪದಾಧಿಕಾರಿಗಳಾದ ರಾಮಲಿಂಗ ಜಾಧವ್, ರಮೇಶ ನಾಯ್ಕ, ಶಿವಪ್ಪ ನಾಯ್ಕ, ಗೌರೀಶ ನಾಯ್ಕ, ತುಕರಾಮ ಪರಸೋಜಿ, ಲೀಲಾವತಿ ಕೊಳಚೆ, ಲೀಲಾ ಮಾದರ, ಶಹಜಾದಿ, ಸಾಧಿಕದ ಮುಲ್ಲಾ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next