Advertisement

Dandeli: ಆಕಸ್ಮಿಕ ಬೆಂಕಿ; ಹೊತ್ತಿ ಉರಿದ ಕಾರು

01:13 PM Feb 28, 2024 | Team Udayavani |

ದಾಂಡೇಲಿ: ದಾಂಡೇಲಿ-ಅಂಬಿಕಾನಗರ ರಸ್ತೆ ಸಮೀಪ ಬಡಕಾನಶಿರಡಾದಲ್ಲಿ ಕಾರೊಂದು ಹೊತ್ತಿ ಉರಿದ ಘಟನೆ ಫೆ. 28ರ ಬುಧವಾರ ಬೆಳಗ್ಗೆ ನಡೆದಿದೆ.

Advertisement

ದಾಂಡೇಲಿಯಿಂದ ಅಂಬಿಕಾನಗರದ ಕಡೆಗೆ ಹೋಗುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಚಾಲಕ ವಾಹನ ನಿಲ್ಲಿಸಿ ಕೆಳಗಿಳಿದಿದ್ದಾನೆ. ಆದರೆ ಕಾರು ಸಂಪೂರ್ಣ ಸುಟ್ಟು ಹೋಗಿದೆ.

ಘಟನೆ ನಡೆದ ತಕ್ಷಣ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ವಾಹನ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದೆ.

ಘಟನಾ ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next