Advertisement

ಪದ್ಮಶ್ರೀ ಪುರಸ್ಕೃತ ನೃತ್ಯ ವಿಮರ್ಶಕ, ಇತಿಹಾಸಕಾರ ಸುನೀಲ್‌ ಕೊಠಾರಿ ವಿಧಿವಶ

08:33 PM Dec 27, 2020 | sudhir |

ಹೊಸದಿಲ್ಲಿ: ಪದ್ಮಶ್ರೀ ಪುರಸ್ಕೃತ ನೃತ್ಯ ಇತಿಹಾಸಕಾರ ಹಾಗೂ ವಿಮರ್ಶಕ ಸುನೀಲ್‌ ಕೊಠಾರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಿಂಗಳ ಹಿಂದೆ ಇವರು ಕೋವಿಡ್ ಸೋಂಕಿಗೆ ತುತ್ತಾಗಿದ್ದರು.

Advertisement

87 ವರ್ಷದ ಕೊಠಾರಿ ಅವರು ದೆಹಲಿಯ ಏಷ್ಯನ್‌ ಗೇಮ್ಸ್ ವಿಲೇಜ್‌ನಲ್ಲಿ ವಾಸಿಸುತ್ತಿದ್ದರು. ಇಂದು ಮುಂಜಾನೆ ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಸ್ಸಾಂನ ಸತ್ರಿಯಾ ನೃತ್ಯ ಹಾಗು ಭಾರತೀಯ ನೃತ್ಯ ಪ್ರಕಾರಗಳಲ್ಲಿ ಹೊಸ ನಿರ್ದೇಶನಗಳು, ಭರತನಾಟ್ಯಂ, ಒಡಿಸ್ಸಿ,ಕಥಕ್‌, ಕೂಚಿಪುಡಿ ಮತ್ತು ಉದಯ್‌ ಶಂಕರ್‌ ಮತ್ತು ರುಕ್ಮಿಣಿ ದೇವಿ ಅರುಂಧಲೆಯವರ ಜೀವನಚರಿತ್ರೆ ಸೇರಿದಂತೆ ಭಾರತೀಯ ನೃತ್ಯ ಪ್ರಕಾರಗಳ ವಿಷಯದ ಕುರಿತು ಇವರು 20ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ.

ಇದನ್ನೂ ಓದಿ:ಸಿಎಂ ಸ್ಥಾನಕ್ಕೆ ಖರ್ಗೆ ಹೆಸರು ತಿರಸ್ಕರಿಸಿದವರು ಯಾರು? ದೇವೇಗೌಡರಿಗೆ ಸಿದ್ದರಾಮಯ್ಯ ಪ್ರಶ್ನೆ

ಪುರಸ್ಕಾರ ಹಾಗೂ ಪ್ರಶಸ್ತಿ
ಭಾರತೀಯ ನೃತ್ಯ ಪ್ರಕಾರಗಳಿಗೆ ನೀಡಿದ ಕೊಡುಗೆಗಾಗಿ ಕೊಠಾರಿ ಅವರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1995), ಗೌರವ್‌ ಪುರಸ್ಕಾರ್‌, ಗುಜರಾತ್‌ ಸಂಗೀತ ನಾಟಕ ಅಕಾಡೆಮಿ (2000) ಸಂದಿದೆ.
ಭಾರತ ಸರಕಾರದಿಂದ ಪದ್ಮಶ್ರೀ (2001) ಪ್ರಶಸ್ತಿ, ನ್ಯೂಯಾರ್ಕ್‌ನ ನೃತ್ಯ ವಿಮರ್ಶಕರ ಸಂಘದಿಂದ ಲೈಫ್ ಟೈಮ್‌ ಅಚೀವೆ¾ಂಟ್‌ ಅವಾರ್ಡ್‌ (2011) ಕೂಡಾ ಕೊಠಾರಿ ಅವರನ್ನು ಹುಡುಕಿಕೊಂಡು ಬಂದಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next