Advertisement

ʼಡ್ಯಾನ್ಸ್‌ ದಿವಾನೆ -4ʼ ಟ್ರೋಫಿ ಗೆದ್ದ ಬೆಂಗಳೂರು ಮೂಲದ ನಿತಿನ್; ಸಾಥ್‌ ಕೊಟ್ಟ ಗೌರವ್

11:31 AM May 26, 2024 | Team Udayavani |

ಮುಂಬಯಿ: ಹಿಂದಿಯ ಜನಪ್ರಿಯ ಡ್ಯಾನ್ಸ್‌ ರಿಯಾಲಿಟಿ ಶೋ ʼಡ್ಯಾನ್ಸ್‌ ದಿವಾನೆʼ ಸೀಸನ್‌ -4 ಫಿನಾಲೆ ಮುಕ್ತಾಯ ಕಂಡಿದ್ದು, ವಿಜೇತರನ್ನು ಅನೌನ್ಸ್‌ ಮಾಡಲಾಗಿದೆ.

Advertisement

ಸುನಿಲ್ ಶೆಟ್ಟಿ ಹಾಗೂ ಮಾಧುರಿ ದೀಕ್ಷಿತ್ ತೀರ್ಪುಗಾರರಾಗಿರುವ ʼಡ್ಯಾನ್ಸ್‌ ದಿವಾನೆʼ -4 ಕಾರ್ಯಕ್ರಮದ ಫಿನಾಲೆ ಕಲರ್ಸ್‌ ಹಿಂದಿ ವಾಹಿನಿಯಲ್ಲಿ ಪ್ರಸಾರ ಕಂಡಿತು.

ಅದ್ಧೂರಿ ಫಿನಾಲೆಯಲ್ಲಿ ಮಾಧುರಿ ದೀಕ್ಷಿತ್‌ ಹಾಗೂ ಸುನಿಲ್‌ ಶೆಟ್ಟಿ ಅವರು ಕಲರ್‌ ಫುಲ್‌ ಹಾಡೊಂದಕ್ಕೆ ನೃತ್ಯವನ್ನು ಮಾಡಿ ರಂಜಿಸಿದರು.

ಕಾರ್ಯಕ್ರಮದಲ್ಲಿ ಜೋಡಿಯಾಗಿ ಮೋಡಿ ಮಾಡಿದ ನಿತಿನ್ ಮತ್ತು ಗೌರವ್ ʼಡ್ಯಾನ್ಸ್‌ ದಿವಾನೆ -4ʼ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾರೆ. ವಿಜೇತರಿಗೆ 20 ಲಕ್ಷ ರೂ. ನಗದು ಹಾಗೂ ಟ್ರೋಫಿಯನ್ನು ನೀಡಲಾಗಿದೆ.

ನಿತಿನ್‌ ಬೆಂಗಳೂರಿನವರಾಗಿದ್ದು, ಗೌರವ್‌ ದೆಹಲಿ ಮೂಲದವರಾಗಿದ್ದಾರೆ. ಇವರಿಬ್ಬರ ಡ್ಯಾನ್ಸ್‌ ನೋಡಿ ಟೈಗರ್‌ ಶ್ರಾಫ್‌ ಫಿದಾ ಆಗಿದ್ದರು.

Advertisement

“ಟ್ರೋಫಿ ಮತ್ತು ವೀಕ್ಷಕರ ಹೃದಯವನ್ನು ಗೆದ್ದ ನಿತಿನ್ ಮತ್ತು ಗೌರವ್ ಅವರಿಗೆ ಅಭಿನಂದನೆಗಳು! ನಿಮ್ಮ ಹಲವಾರು ಪ್ರದರ್ಶನಗಳು ಜನಮನ ಗೆದ್ದಿದೆ. ಮುಂದೆಯೂ ನಿಮ್ಮ ಈ ಜರ್ನಿ ಮುಂದುವರೆದು ಜಗತ್ತನ್ನು ದಿಗ್ಭ್ರಮೆಗೊಳಿಸುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಮಾಧುರಿ ವಿಜೇತರನ್ನು ಅಭಿನಂದಿಸಿದ್ದಾರೆ.

ಫಿನಾಲೆಯಲ್ಲಿ ನಟ ಕಾರ್ತಿಕ್‌ ಆರ್ಯನ್‌ ಅತಿಥಿಯಾಗಿ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next