Advertisement

ಡಣಾಯಕನಪುರ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ

12:18 PM Mar 12, 2017 | |

ತಿ.ನರಸೀಪುರ: ತಾಲೂಕಿನ ಡಣಾಯಕನ ಪುರ ಗ್ರಾಮದ ರಸ್ತೆಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ದಿಂದ 2 ಕೋಟಿ ರೂ. ವಿಶೇಷ ಅನುದಾನವನ್ನು ಬಿಡುಗಡೆ ಮಾಡ ಲಾಗಿದೆ ಎಂದು ವರುಣ ಕಾಂಗ್ರೆಸ್‌ ಯುವ ಮುಖಂಡ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

Advertisement

ವರುಣ ವಿಧಾನಸಭಾ ಕ್ಷೇತ್ರದ ಡಣಾಯಕನಪುರ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಅಭಿವೃದ್ಧಿ ನಿಗಮ(ಕೆಆರ್‌ಐಡಿಎಲ್‌)ದ ವಿಶೇಷ ಘಟಕ ಅನುದಾನದಲ್ಲಿ ಸಿಮೆಂಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಹಾಗೂ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಭವನ ಉದ್ಘಾಟನೆ ಸಮಾರಂಭದಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಗ್ರಾಮದ ಸಾಮಾನ್ಯ ವರ್ಗದ ಜನರು ರಸ್ತೆಗಳನ್ನು ಅಭಿವೃದ್ಧಿಯನ್ನು ಕೇಂದ್ರಿಕರಿಸಿ ವಿಶೇಷ ಅನುದಾನವನ್ನು ಸಿಎಂ ಸಿದ್ದರಾಮಯ್ಯ ಅವರು ಮಂಜೂರು ಮಾಡಿದ್ದಾರೆ ಎಂದರು. ಈಗಾಗಲೇ ವಿಶೇಷ ಘಟಕ ಯೋಜನೆ ಅನುದಾನಲ್ಲಿ ಪ.ಜಾತಿ / ಪ.ಪಂಗಡ ಸಮುದಾಯ ವಿರುವ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ಎಸ್ಸಿಪಿ ಮತ್ತು ಎಸ್ಟಿಪಿ ಯೋಜನೆಗಳ ಮಾದರಿಯಲ್ಲಿ ಸಾಮಾನ್ಯ ವರ್ಗದ ಜನರು ವಾಸಿಸುವ ರಸ್ತೆಗಳ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗಿದೆ. ವರುಣ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿಯಲ್ಲೂ ಬಾಕಿ ಉಳಿದಿರುವ ಅಭಿವೃದ್ಧಿ ಕೆಲಸ ಗಳನ್ನು ಪಟ್ಟಿ ಮಾಡಿಕೊಂಡು ಯೋಜನೆ ರೂಪಿಸಿ, ವರ್ಷದೊಳಗೆ ಕಾಮಗಾರಿ ಯನ್ನು ನಡೆಸಲಾಗುವುದು ಎಂದು ಡಾ. ಯತೀಂದ್ರ ತಿಳಿಸಿದರು.

ಸಿಮೆಂಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಗಗೇìಶ್ವರಿ ಜಿಪಂ ಸದಸ್ಯೆ ಜಯಮ್ಮ ಶಿವಸ್ವಾಮಿ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಕೆಎಂಎಫ್ ನಿರ್ದೇಶಕ ಕೆ.ಸಿ.ಬಲರಾಂ, ಸಿಎಂ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ, ಜಿಪಂ ಮಾಜಿ ಸದಸ್ಯ ಕೆ.ಮಹದೇವ, ತಾಪಂ ಸದಸ್ಯ ಎಂ.ರಮೇಶ, ಕುರುಬರ ಸಂಘದ ಅಧ್ಯಕ್ಷ ಟಿ.ಎಸ್‌.ಪ್ರಶಾಂತ್‌ಬಾಬು, ಗುತ್ತಿಗೆದಾರ ಹಾಗೂ ಪಿಎಸಿಸಿಎಸ್‌ ಅಧ್ಯಕ್ಷ ಎಚ್‌.ಮಹದೇವ,

Advertisement

ಮಾಜಿ ಉಪ ಪ್ರಧಾನ ಡಿ.ಆರ್‌.ಮೂರ್ತಿ, ಎಪಿಎಂಸಿ ನಿರ್ದೇಶಕರಾದ ಕೆ.ಬಿ.ಪ್ರಭಾಕರ, ಎನ್‌.ಅನಿಲ್‌ಕುಮಾರ್‌, ಮಸೂರ್‌ ಅಹಮ್ಮದ್‌, ಮಾಜಿ ಅಧ್ಯಕ್ಷ ಎಂ.ಆರ್‌.ಸೋಮಣ್ಣ, ಕಿರಗಸೂರು ಗ್ರಾಪಂ ಅಧ್ಯಕ್ಷ ಎನ್‌.ಅಶ್ವಿ‌ನ್‌, ಉಪಾಧ್ಯಕ್ಷೆ ಚಂದ್ರಮ್ಮ, ಮಾಜಿ ಅಧ್ಯಕ್ಷರಾದ ಮನ್ನೇಹುಂಡಿ ಮಹೇಶ, ಶೇಖರ, ಟಿ.ಎಂ.ನಂಜುಂಡಸ್ವಾಮಿ, ಭಾಗ್ಯ ಮರಿಸಿದ್ದಯ್ಯ, ಮಾಜಿ ಉಪಾಧ್ಯಕ್ಷ ಆರ್‌.ಮಹದೇವ, ವಕೀಲ ಎಂ.ರಂಗಯ್ಯ,

ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಮಹದೇವಣ್ಣ, ಕೆಆರ್‌ಐಡಿಎಲ್‌ನ ಚಿನ್ನಸ್ವಾಮಿ, ವರುಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ದೇಗೌಡ, ಚಾ.ನಗರ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಎನ್‌.ಸೋಮು, ಜಿಲ್ಲಾ ಮಾಧ್ಯಮ ಸಂಚಾಲಕ ಸಂತೃಪ್ತಿಕುಮಾರ್‌, ಮುಖಂಡರಾದ ಸೋಮಣ್ಣ, ಮಲ್ಲು ಅಣ್ಣ, ಎಂ. ವೆಂಕಟೇಶ್‌ (ವೆಂಕಿ), ಸೋಮಣ್ಣನಾಯಕ, ಫೈನಾನ್ಸ್‌ ಕಾಂತರಾಜು, ಗೋಪಾಲರಾಜು ಹಾಗೂ ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next