Advertisement

ಬಹುರಾಷ್ಟ್ರೀಯ ಕೋಳಿ ಕಂಪನಿಗಳ ಗಡಿಪಾರು ಮಾಡಿ

03:05 PM Aug 19, 2022 | Team Udayavani |

ದಾವಣಗೆರೆ: ರಾಜ್ಯದಲ್ಲಿನ ಬಹುರಾಷ್ಟ್ರೀಯಕೋಳಿ ಕಂಪನಿಗಳನ್ನು ಕೂಡಲೇ ಗಡಿಪಾರುಮಾಡಬೇಕು ಎಂದು ರಾಜ್ಯ ಕೋಳಿಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದನಿರ್ದೇಶಕ ಮಲ್ಲಾಪುರದ ದೇವರಾಜ್‌ಒತ್ತಾಯಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಬಂಡವಾಳಶಾಹಿಕಂಪನಿಗಳು ರೈತರ ಹೆಸರಿನಲ್ಲಿಕೋಳಿ ಸಾಕಾಣಿಕೆ ಉದ್ಯಮದಲ್ಲಿತೊಡಗಿಕೊಂಡಿವೆ.

Advertisement

ಇದರಿಂದ ಕೋಳಿಸಾಕಾಣಿಕೆದಾರರು ಆರ್ಥಿಕವಾಗಿ ಶೋಷಣೆಎದುರಿಸುವಂತಾಗಿದೆ. ಸರ್ಕಾರಗಳುಬಂಡವಾಳ ಹೂಡಿಕೆದಾರರಿಗೆ ಮಣೆಹಾಕುತ್ತಿವೆ. ರೈತರಿಗೆ ಮಾರುಕಟ್ಟೆ ರಕ್ಷಣೆ,ಬ್ಯಾಂಕುಗಳ ರಕ್ಷಣೆ ಇಲ್ಲವಾಗಿದೆ. ಸಾಲಕೇಳಿದರೆ ವಾಪಸ್‌ ಕಳುಹಿಸುತ್ತಾರೆ.ಅಕ್ಕಿ, ಬೇಳೆ, ಹಾಲಿನ ಮೇಲೆ ಜಿಎಸ್‌ಟಿವಿಧಿಸುವ ಮೋದಿ ಸರ್ಕಾರ, ದೊಡ್ಡಕಂಪನಿಗಳಿಗೆ ಜಿಎಸ್‌ಟಿ ಹಾಕುವುದೇಇಲ್ಲ. ದೇಶದ ಆಹಾರ ಭದ್ರತೆ ಏನಾದರೂಬಂಡವಾಳಶಾಹಿ ಕಂಪನಿಗಳ ಕೈಗೆ ಸಿಕ್ಕರೆದೇಶದ ಹಾಗೂ ಜನರ ಗತಿ ಏನು ಎಂದುಪ್ರಶ್ನಿಸಿದರು.

ಬಹುರಾಷ್ಟ್ರೀಯ ಕಂಪನಿಗಳುಕೋಳಿ ಮಾಂಸದ ಉದ್ಯಮಮತ್ತುಮಾರುಕಟ್ಟೆಯನ್ನೇ ಕಪಿಮುಷ್ಠಿ ಯಲ್ಲಿಟ್ಟುಕೊಂಡು ಆಟವಾಡಿಸುತ್ತಿವೆ. ಅಂತರ್ಜಾಲದಲ್ಲಿಮನಬಂದಂತೆ ದರ ನಿಗದಿಪಡಿಸಲಾಗುತ್ತಿದೆ.ಏಕಾಏಕಿ ಬೆಲೆ ಹೆಚ್ಚಿಸುವ ಮೂಲಕಮಾರುಕಟ್ಟೆಯಲ್ಲಿ ರೈತರನ್ನು ಆರ್ಥಿಕವಾಗಿದಿವಾಳಿ ಮಾಡುತ್ತಿವೆ. ಕಂಪನಿಗಳಶೋಷಣೆಯ ಬಗ್ಗೆ ಹಲವಾರು ಬಾರಿಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿಮಾಡಿದ್ದರೂ ಯಾವುದೇ ಪ್ರಯೋಜನಆಗುತ್ತಿಲ್ಲ.

ಕೋಳಿ ಸಾಕಾಣಿಕೆ ಮಾಡುವರೈತರು, ಕಂಪನಿಗಳ ಕುತಂತ್ರದಿಂದ ದಿವಾಳಿಆಗುತ್ತಿದ್ದಾರೆ. ಕೂಡಲೇ ಕಂಪನಿಗಳನ್ನುರಾಜ್ಯದಿಂದ ಗಡಿಪಾರು ಮಾಡುವ ಮೂಲಕಕೋಳಿ ಸಾಕಾಣಿಕೆಯಲ್ಲಿನ ರೈತರಿಗೆ ಆರ್ಥಿಕಮತ್ತು ಮಾರುಕಟ್ಟೆ ರಕ್ಷಣೆ ನೀಡಬೇಕುಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next