ಪಣಜಿ : ಗೋವಾದಲ್ಲಿ ದ್ವಿಭಾಷಾ ಬರಹಗಾರರು ಕಡಿಮೆ. ಇತ್ತೀಚೆಗೆ ಅಸ್ವಾಭಾವಿಕವಾಗಿ ಭಾಷಾಶಾಸ್ತ್ರವನ್ನು ಕೆದಕುತ್ತಿರುವುದು ವಿಷಾದನೀಯ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಾಮೋದರ ಮಾವಜೋ ಹೇಳಿದರು.
ಪಣಜಿಯಲ್ಲಿ ಆಯೋಜಿಸಿದ್ದ ಸಾಹಿತ್ಯ ಅಕಾಡಮಿ, ಕಲೆ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ರವಿಶಂಕರ ರಮಣಿ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿರಿಯ ಸಾಹಿತಿ ಉದಯ ಬೆಂಬ್ರೆ ಮಾತನಾಡಿ ಯಾವುದನ್ನು ಬರೆಯಬೇಕು ಯಾವುದನ್ನು ಬರೆಯಬಾರದು ಎಂಬುದನ್ನು ಬರಹಗಾರನೇ ನಿರ್ಧರಿಸಬೇಕು. ಆದರೆ ಇತ್ತೀಚೆಗೆ ಲೇಖಕರಿಗೆ ಇದನ್ನೇ ಬರೆಯಬೇಕು ಎಂಬ ಪದ್ಧತಿ ಬಂದಿದೆ. ಈ ಪದ್ಧತಿಯು ಗುಣಮಟ್ಟದ ಬರಹಗಾರರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವಂತದ್ದಾಗಿದೆ. ಹೀಗೆ ಕಡಿವಾಣ ಹಾಕಲು ಹಕ್ಕು ಕೊಟ್ಟವರು ಯಾರು, ಈ ಸ್ವಾತಂತ್ರ್ಯ ಕೇವಲ ಭಾಷಣಕ್ಕೆ ಮಾತ್ರ ಸೀಮಿತವೇ..? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಪರೇಶ್ ಕಾಮತ್, ಮಾಧವ ಬೋರಕರ್ ಮತ್ತಿತರರು ಉಪಸ್ಥಿತರಿದ್ದರು. ಕವಿ ಶಂಕರ ರಮಣಿ ರವರ ಕವನ ಸಂಗ್ರಹ ಕೊಂಕಣಿ ಪುಸ್ತಕ ಪ್ರಕಾಶನವನ್ನು ಬಿಡುಗಡೆಗೊಳಿಸಲಾಯಿತು.
ಇದನ್ನೂ ಓದಿ : ಆಸ್ಪತ್ರೆಯ 7 ನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಮನೋರೋಗಿ