Advertisement

ನಿಸರ್ಗದ ಮಡಿಲಲ್ಲಿ ಕಂಗೊಳಿಸುತ್ತಿರುವ ದಮ್ಮೂರ ದಿಡಗು ಜಲಪಾತ !

03:04 PM Jun 10, 2024 | Team Udayavani |

ಅಮೀನಗಡ: ಧಾರಾಕಾರ ಮಳೆಯಿಂದ, ದಮ್ಮೂರ ದಿಡಗಿನ ಮಿನಿ ಜಲಪಾತ ಮೈದುಂಬಿ ಹರಿಯುತ್ತಿದ್ದು, ಅಲ್ಲಿಯ ಸೌಂದರ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.

Advertisement

ಹೌದು, ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ದಮ್ಮೂರ ಗ್ರಾಮದ ಹೊರ ವಲಯದ ಬೆಟ್ಟದ ಮೇಲೆ ದಿಡಗಿನ ಬಸವೇಶ್ವರ ದೇವಸ್ಥಾನವಿದೆ ಅದರ ಪಕ್ಕದಲ್ಲಿ ಬೃಹದಾಕಾರದ ಆಲದ ಮರಯಿದೆ. ಅಲ್ಲಿ ಹೋಗಲು ಮೆಟ್ಟಿಲುಗಳು ಇವೆ. ಮೆಟ್ಟಿಲು ಹತ್ತುತ್ತಾ ಹೋದಂತೆ ನಿಸರ್ಗದ ಮಡಲಲ್ಲಿ, ಕಲ್ಲು ಬಂಡೆಗಳ ಮಧ್ಯೆ ಸುಮಾರು 50 ಅಡಿ ಎತ್ತರದಿಂದ ಹಾಲಿನಂತೆ  ಬೀಳುವ ದಿಡಗಿನ ಮಿನಿ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಜಲಪಾತಕ್ಕೆ ಹೋಗುವ ದಾರಿ: ದಮ್ಮೂರ ದಿಡಗಿನ ಮಿನಿ ಜಲಪಾತ, ಇಳಕಲ್ಲದಿಂದ ಹೂಲಗೇರಿ, ಕಟಾಪೂರ ದಾರಿಯ ಮೂಲಕ 20 ಕಿಮೀ ದೂರದಲ್ಲಿದೆ, ಗುಡೂರ ಗ್ರಾಮದಿಂದ 10 ಕಿಮೀ ದೂರದಲ್ಲಿದೆ. ಹನಮಸಾಗರದಿಂದ 10 ಕಿಮೀ ದೂರದಲ್ಲಿದೆ. ವಾಹನ ಮೂಲಕ ಹೋಗಲು ಸುಲಭವಾದ ದಾರಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next