Advertisement

ಮಣ್ಣು ಹಾಕಿದ ಜಾಗಕ್ಕೆ ಡಾಮರು

09:35 AM Apr 16, 2022 | Team Udayavani |

ಬಂಟ್ವಾಳ: ಬಿ.ಸಿ.ರೋಡ್‌ನ‌ ಖಾಸಗಿ ಬಸ್‌ ನಿಲ್ದಾಣದ ಬಳಿ ಇಳಿಜಾರು ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಆರಂಭ ಗೊಂಡ ಅರ್ಧಕ್ಕೆ ನಿಂತಿದ್ದ ಕಾಮಗಾರಿಯಿಂದ ಕೆಸರಿನ ಸ್ಥಿತಿ ಉಂಟಾಗಿದ್ದು, ಇದೀಗ ಬಸ್‌ ನಿಲ್ಲುವ ಜಾಗಕ್ಕೆ ಡಾಮರು ಹಾಕುವ ಮೂಲಕ ಸದ್ಯಕ್ಕೆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.

Advertisement

ಮಂಗಳೂರು ಭಾಗದಿಂದ ಆಗಮಿಸಿದ ಬಸ್‌ಗಳು ಹೆದ್ದಾರಿಯಲ್ಲೇ ಪ್ರಯಾಣಿಕರನ್ನು ಇಳಿಸುವುದು ಹಾಗೂ ಹತ್ತಿಸಿಕೊಳ್ಳುವ ಜಾಗವು ಇಳಿಜಾರಿನಿಂದ ಕೂಡಿತ್ತು. ಹೀಗಾಗಿ ಪ್ರಯಾಣಿಕರು ಬೀಳುವ ಸ್ಥಿತಿ ಇತ್ತು. ಈ ಕುರಿತು ‘ಉದಯವಾಣಿ ಸುದಿನ’ ದಲ್ಲಿ ವರದಿ ಪ್ರಕಟಗೊಂಡ ಬಳಿಕ ಶಾಸಕರ ನಿರ್ದೇಶನದ ಮೇರೆಗೆ ಕಾಮಗಾರಿ ನಡೆಸಲಾಗಿತ್ತು.

ಆದರೆ ಕಾಮಗಾರಿ ಆರಂಭಗೊಂಡ ಬಳಿಕ ಇಳಿಜಾರಿಗೆ ಮುಕ್ತಿ ಸಿಕ್ಕರೂ, ಚರಂಡಿ ನಿರ್ಮಿಸಿ ಆ ಭಾಗಕ್ಕೆ ಮಣ್ಣು ತುಂಬಿದ ಪರಿಣಾಮ ಮಳೆಯಿಂದ ಕೆಸರಿನ ಸ್ಥಿತಿ ಉಂಟಾಗಿತ್ತು. ಜತೆಗೆ ನೀರಿನ ಪೈಪ್‌ ಒಡೆದು ನೀರು ಕೂಡ ಪೋಲಾಗುತ್ತಿತ್ತು. ಕಾಮಗಾರಿ ಅರ್ಧಕ್ಕೆ ನಿಂತ ಕುರಿತು ಮತ್ತೆ ವರದಿ ಪ್ರಕಟಗೊಂಡ ಬೆನ್ನಲ್ಲೇ ಇದೀಗ ಡಾಮರು ಹಾಕುವ ಕಾಮಗಾರಿ ನಡೆಸಲಾಗಿದೆ. ಹೀಗಾಗಿ ಬಸ್ಸಿಗಾಗಿ ಕಾಯುವವರಿಗೆ ಕೆಸರಿನ ಸಮಸ್ಯೆ ಇಲ್ಲ. ಈ ನಿಲ್ದಾಣವನ್ನು ಬಳಸಿ ದಿನನಿತ್ಯ ನೂರಾರು ಮಂದಿ ಹಲವು ಭಾಗಗಳಿಗೆ ತೆರಳುತ್ತಿದ್ದಾರೆ. ಆದರೆ ಅವರಿಗೆ ಬಸ್ಸಿಗಾಗಿ ಕಾಯಲು ಸಮರ್ಪಕವಾದ ತಂಗುದಾಣವಿಲ್ಲ. ಪ್ರಸ್ತುತ ಮಳೆ-ಬಿಸಿಲಿಗೆ ಸ್ಥಳೀಯ ಅಂಗಡಿಗಳ ಮುಂಭಾಗವನ್ನೇ ಬಳಸಿಕೊಳ್ಳಬೇಕಾದ ಸ್ಥಿತಿ ಇದೆ. ಹೀಗಾಗಿ ಶೆಲ್ಟರ್‌ ಮಾದರಿಯಲ್ಲಿ ತಂಗುದಾಣ ಬೇಕು ಎಂಬ ಬೇಡಿಕೆ ಇನ್ನೂ ಕೂಡ ಹಾಗೇ ಉಳಿದುಕೊಂಡಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next