Advertisement

ಅತಿಮಾನುಷ ಡಾಂಬರು ರಸ್ತೆ

03:35 PM May 23, 2019 | Team Udayavani |

ಇಳಿಜಾರಿನಲ್ಲಿ ಗೋಳಾಕಾರದ ವಸ್ತು ಕೆಳಕ್ಕೆ ಚಲಿಸುವುದು ಸಾಮಾನ್ಯ. ಆದರೆ ಕೀನ್ಯಾ ದೇಶಲ್ಲೊಂದು ಜಾಗವಿದೆ. ಅಲ್ಲಿನ ಇಳಿಜಾರಿನಲ್ಲಿ ಬಾಲ್‌ ಅಥವಾ ಯಾವುದೇ ಗೋಳಾಕಾರದ ವಸ್ತುವನ್ನು ಇಟ್ಟರೂ ಇಳಿಮುಖವಾಗಿ ಚಲಿಸದೆ ಮೇಲ್ಮುಖವಾಗಿ ಚಲಿಸುತ್ತದೆ. ವಾಹನಗಳ ಎಂಜಿನ್‌ ಆಫ್ ಮಾಡಿದಾಗ
ಇಳಿಜಾರಿನಲ್ಲಿ ಕೆಳಕ್ಕೆ ಜಾರುವ ಬದಲು ಹಿಮ್ಮುಖವಾಗಿ ಮೇಲ್ಗಡೆ ಚಲಿಸಿದ ಉದಾಹರಣೆಗಳಿವೆ.

Advertisement

ಪೂಜಿಸುತ್ತಿದ್ದ ಜಾಗವಾಗಿತ್ತು ಅನಾದಿ ಕಾಲದಲ್ಲಿ ಈ ಪ್ರದೇಶವನ್ನು ಕಿವುಟಿನಿ ಎಂದು ಕರೆಯಲಾಗುತ್ತಿತ್ತು. ಆಗ ಅಲ್ಲಿ ಡಾಂಬರು ರಸ್ತೆ ಇರಲಿಲ್ಲ. ಈ ವಿಸ್ಮಯವನ್ನು ಸುತ್ತಮುತ್ತಲಿನ ಹಳ್ಳಿಯ ಜನ ತಮ್ಮದೇ ಆದ ರೀತಿಯಲ್ಲಿ
ಬಣ್ಣಿಸುತ್ತಾರೆ. ಬಹಳ ವರ್ಷಗಳ ಹಿಂದೆ ಇಲ್ಲಿನವರು ಈ ಸ್ಥಳದಲ್ಲಿ ತಮ್ಮ ಪೂರ್ವಜರನ್ನು ಒಲಿಸಿಕೊಳ್ಳಲು ಬಲಿ ಕೊಡುತ್ತಿದ್ದರಂತೆ. ಬಲಿಯಿಂದ ಅವರನ್ನು ತೃಪ್ತಿಪಡಿಸಿ, ನಂತರ ಮಳೆ-ಬೆಳೆ ಕೊಡುವಂತೆ ಹಾಗೂ ದುಷ್ಟ ಶಕ್ತಿಗಳನ್ನು ನಾಶಮಾಡುವಂತೆ ಕೋರುತ್ತಿದ್ದರಂತೆ. ಬಲಿ ನೀಡಲು ಬಳಸುತ್ತಿದ್ದ ಬಲಿಪೀಠದಲ್ಲಿ ವಿಶೇಷ ಆಚರಣೆಗಳನ್ನು ನಡೆಸುತ್ತಿದ್ದುದರಿಂದ ಅದನ್ನು ಪವಿತ್ರ ಸ್ಥಳವೆಂದು ಪರಿಗಣಿಸಿ ಪೂಜಿಸುತ್ತಿದ್ದರಂತೆ.

ನಿಗೂಢ ಮನುಷ್ಯರು
ಮ್ಯುಟಿಟುನಿ ಮತ್ತು ಕಿವುಟಿನಿ ಊರುಗಳ ನಂತರ ಸಿಗುವ ಡಾಂಬರು ರಸ್ತೆಯಲ್ಲಿ ಈ ವಿಸ್ಮಯಕಾರಕ ಕಿಟುಲುನಿ ಇದೆ. ಅನೇಕ ತಿರುವುಗಳಿಂದ ಕೂಡಿರುವ, ಸುತ್ತು ಬಳಸಿನ ಈ ದುರ್ಗಮ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದು ಸಾಹಸವೇ ಸರಿ. ಬೆಟ್ಟ ಅರ್ಧ ಹತ್ತುವವರೆಗೂ ಯಾವುದೇ ರೀತಿಯ ವಿಸ್ಮಯ ಕಾಣುವುದಿಲ್ಲ. ನಂತರ ಈ ಸ್ಥಳಕ್ಕೆ ಗಾಡಿ ಬಂದ ಕೂಡಲೇ ಯಾವುದೇ ವೇಗದಲ್ಲಿ ಚಲಿಸುತ್ತಿದ್ದರೂ ಜಗ್ಗಿದಂತಾಗುತ್ತದೆ ಮತ್ತು ವೇಗ ಸೂಚಕಕ್ಕೂ ತಿಳಿಯದಂತೆ ವೇಗ ಮತ್ತೂ ಹೆಚ್ಚುತ್ತದೆ. ಈ ರಸ್ತೆ ಬಹಳ ವರ್ಷಗಳಿಂದ ಉಪಯೋಗದಲ್ಲಿದ್ದರೂ ಸಹ ಈ ವಿಸ್ಮಯಕಾರಕ ಘಟನೆ ಯಾವಾಗ ಪ್ರಾರಂಭವಾಯಿತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆ ಸ್ಥಳದಲ್ಲಿ ಬಿಳಿ ನಿಲುವಂಗಿ ಧರಿಸಿದ ವಿಚಿತ್ರ ವ್ಯಕ್ತಿಗಳು ಓಡಾಡುವುದನ್ನು ಕಂಡಿರುವುದಾಗಿಯೂ, ಅವರು ಕಂಡಷ್ಟೇ ವೇಗವಾಗಿ ಕಣ್ಮರೆಯಾಗುತ್ತಾರೆ ಎಂಬುದಾಗಿ ಅಲ್ಲಿನ ಹಳ್ಳಿಗರು ಹೇಳುತ್ತಾರೆ. ಆದರೆ ಇಲ್ಲಿಯವರೆಗೆ ಅದಕ್ಕೆ ಪುರಾವೆಗಳು ಸಿಕ್ಕಿಲ್ಲ.

ಅತಿಮಾನುಷ ಶಕ್ತಿಗೆ ಕಾರಣ
ಮಚಕೊಸ್ನಿಂದ ಕಲೊಲೆನಿ ಕಡೆಗೆ ರಸ್ತೆ ಸಂಪರ್ಕ ಕಲ್ಪಿಸುವಾಗ ಅದು ಈ ಬೆಟ್ಟದ ಮುಖಾಂತರ ಹಾದು ಹೋಗಬೇಕಾಗಿ ಬಂತು. ಹಾಗಾಗಿ ವಿಧಿಯಿಲ್ಲದೆ ಸ್ಥಳೀಯರು ತಾವು ನಡೆಸುತ್ತಿದ್ದ ಆಚರಣೆಯನ್ನು ಬೇರೆ ಸ್ಥಳಕ್ಕೆ ಅಂದರೆ ಬೆಟ್ಟದ ಕೆಳಕ್ಕೆ ಸ್ಥಳಾಂತರ ಮಾಡಿಕೊಂಡರಂತೆ. ನೂರಾರು ವರ್ಷಗಳ ಪೂಜೆ ಪುನಸ್ಕಾರಗಳ ಆಚರಣೆಯಿಂದ ಈ ಬಲಿ ಪೀಠವಿದ್ದ ಸ್ಥಳಕ್ಕೆ ಅತಿಮಾನುಶ ಶಕ್ತಿ ಪ್ರಾಪ್ತವಾಯಿತು. ಅದರಿಂದಾಗಿ ವಾಹನಗಳು ತಂತಾನೆ ಏರುಮುಖ
ವಾಗಿ ಚಲಿಸುವುದು ಎಂಬುದು ಹಳ್ಳಿಗರ ವ್ಯಾಖ್ಯಾನ

ಪುರುಷೋತ್ತಮ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next