Advertisement

ಪೂರ್ವ ತಯಾರಿಯಿಂದ ಹಾನಿ ನಿಯಂತ್ರಣ: ಡಾ|ಚೂಂತಾರು

01:01 PM Jun 02, 2022 | Team Udayavani |

ಮೇರಿಹಿಲ್‌: ಸಾಕಷ್ಟು ಪೂರ್ವ ತಯಾರಿ ಮಾಡಿ ಮಾನಸಿಕವಾಗಿ ಸಿದ್ಧವಾಗಿದ್ದರೆ ಮುಂಬ ರುವ ಮಳೆಗಾಲದಲ್ಲಿ ಸಂಭವಿಸಬಹುದಾದ ಹಲವಾರು ಅನಾಹುತಗಳನ್ನು ತಡೆಗಟ್ಟಿ ಹಾನಿ ಕಡಿಮೆಗೊಳಿಸಬಹುದು ಎಂದು ದ.ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ| ಮುರಲೀ ಮೋಹನ ಚೂಂತಾರು ಅಭಿಪ್ರಾಯಪಟ್ಟಿದ್ದಾರೆ.

Advertisement

ಬುಧವಾರ ಮೇರಿಹಿಲ್‌ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ನಡೆದ ಮಳೆಗಾಲದ ಪೂರ್ವಸಿದ್ಧತೆ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಪ್ರತಿ ಘಟಕಗಳಲ್ಲಿ ಸಿಬಂದಿಯನ್ನು ಗುರುತಿಸಿ ಸಿದ್ಧವಾಗಿರುವಂತೆ ಅವರು ಘಟಕಾಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರವಾಹ ರಕ್ಷಣಾ ತಂಡ ರಚಿಸಲಾಯಿತು.

ಪ್ರತಿ ಬೀಚ್‌ಗೆ ಇಬ್ಬರು

ಜಿಲ್ಲಾಧಿಕಾರಿಗಳ ಆದೇಶದಂತೆ ಮಂಗಳೂರು ತಾಲೂಕಿನ ಸೋಮೇಶ್ವರ, ಉಳ್ಳಾಲ, ಮೊಗವೀರ ಪಟ್ನ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು, ಸುರತ್ಕಲ್‌ ಮತ್ತು ಫಾತಿಮ ಬೀಚ್‌ಗಳಲ್ಲಿ ತಲಾ ಇಬ್ಬರು ಗೃಹರಕ್ಷಕರನ್ನು ನಿಯೋಜಿಸಲಾಗುವುದು. ನುರಿತ ಈಜುಗಾರ ರನ್ನು ಗುರುತಿಸಲಾಗಿದ್ದು ಜಿಲ್ಲಾಧಿಕಾರಿಯವರ ಆದೇಶದಂತೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಡಾ| ಚೂಂತಾರು ತಿಳಿಸಿದರು.

Advertisement

60 ಗೃಹರಕ್ಷಕರ ತಂಡ

ನೆರೆ ಪೀಡಿತ ಪ್ರದೇಶಗಳಾದ ಉಪ್ಪಿನಂಗಡಿ, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಮೂಲ್ಕಿ, ಕಡಬ ಪ್ರದೇಶಗಳಲ್ಲಿ ಗೃಹರಕ್ಷಕರು ಸನ್ನದ್ಧರಾಗಿರುವಂತೆ ಘಟಕಾಧಿಕಾರಿಗಳು ಮತ್ತು ಗೃಹರಕ್ಷಕರಿಗೆ ಸಮಾದೇಷ್ಠರು ಸೂಚಿಸಿದರು.

ಎಲ್ಲ ಘಟಕಗಳಲ್ಲಿಯೂ ಲೈಫ್‌ ಬಾಯ್‌, ಲೈಫ್‌ ಜಾಕೆಟ್‌, ರೋಪ್‌, ವುಡ್‌ಕಟರ್‌, ಟಾರ್ಚ್‌ಲೈಟ್‌ ಮೊದಲಾದವುಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಜೂನ್‌, ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಜಿಲ್ಲಾದ್ಯಂತ 60 ಗೃಹರಕ್ಷಕರ ಪ್ರವಾಹ ರಕ್ಷಣಾ ತಂಡ ರಚಿಸಿ ಜನರ ಮತ್ತು ಆಸ್ತಿ ಪಾಸ್ತಿ ರಕ್ಷಣೆಗೆ ಸದಾ ಸನ್ನದ್ಧರಾಗಿಬೇಕು ಎಂದು ಘಟಕಾಧಿಕಾರಿಗಳಿಗೆ ಡಾ| ಚೂಂತಾರು ಸೂಚಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಉಪ ಸಮಾದೇಷ್ಠರಾದ ರಮೇಶ್‌ ಪಿ., ಮಂಗಳೂರು ಘಟಕದ ಸೀನಿಯರ್‌ ಪ್ಲಟೂನ್‌ ಕಮಾಂಡರ್‌ ಮಾರ್ಕ್‌ ಶೇರಾ, ಸುರತ್ಕಲ್‌ ಘಟಕದ ಪ್ರಭಾರ ಘಟಕಾಧಿಕಾರಿ ರಮೇಶ್‌, ಕಡಬ ಘಟಕದ ಘಟಕಾಧಿಕಾರಿ ತೀರ್ಥೇಶ್‌, ಪ್ರವಾಹ ರಕ್ಷಣಾ ತಂಡದ 40 ಮಂದಿ ಗೃಹರಕ್ಷಕ, ಗೃಹರಕ್ಷಕಿಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next