Advertisement

ನೀರು ಸರಬರಾಜು ಪೈಪ್‌ಗೆ ಹಾನಿ: ದೂರು ದಾಖಲು

08:38 AM May 19, 2020 | Lakshmi GovindaRaj |

ಹೊಸಕೋಟೆ: ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಳವಡಿಸಿ ದ್ದ ಪೈಪ್‌ಗ್ಳಿಗೆ ಭಾನುವಾರ ರಾತ್ರಿ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ. ಈ ಬಗ್ಗೆ ನಗರಸಭೆಯಿಂದ ಪೊಲೀಸರಿಗೆ ದೂರು ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ  ನೀಡಿ ಪರಿಶೀಲಿಸಿದ ಶಾಸಕ ಶರತ್‌ ಬಚ್ಚೇಗೌಡ ಮಾತನಾಡಿದರು.

Advertisement

ಒಂದು ತಿಂಗಳ ಹಿಂದೆ ತಾಲೂಕಿನ ಉಪ್ಪಾರ ಹಳ್ಳಿಯಿಂದ ರೈತರ ಕೃಷಿ ಹೊಂಡ  ಗಳಿಂದ ನೀರು ಪಡೆಯಲಾಗುತ್ತಿದೆ. ಅದರೊಂ ದಿಗೆ ಕೆರೆ ಅಂಗಳದಲ್ಲಿ ನೂತನವಾಗಿ  ಕೊರೆದಿರುವ 4 ಕೊಳವೆ ಬಾವಿಗಳ ನೀರು ಸಂಗ್ರಹಿಸಲು ನಗರಸಭೆಯಿಂದ ದೊಡ್ಡ  ಕೆರೆ ಅಂಗಳದ ಗವಿರಸ್ತೆ ಬಳಿ ಕೃಷಿ ಹೊಂಡ ನಿರ್ಮಿಸಲಾಗಿದೆ.

ಎರಡು ನೀರನ್ನು ನಗರಸಭೆಯ ಬಾವಿಗೆ ನೀರು ಪಂಪ್‌ ಮಾಡಲು  ವ್ಯವಸ್ಥೆಗೊಳಿಸಲಾಗಿತ್ತು. ಇದರಿಂದಾಗಿ ನಗರದಲ್ಲಿ 12-15 ದಿನಗಳಿಗೊಮ್ಮೆ ನಿವಾಸಿಗಳಿಗೆ ಸರಬರಾಜಾಗುತ್ತಿದ್ದ, ನೀರಿನ ಅವಧಿ 8-10 ದಿನಗಳಿಗೆ ಇಳಿಕೆಯಾಗಲು ಸಹಕಾರಿಯಾಗಿತ್ತು. ವ್ಯವಸ್ಥೆ ಸುಧಾರಣೆ ಸಹಿಸದ ಕೆಲವು ದುಷ್ಕರ್ಮಿಗಳು ದುರುದ್ದೇಶದಿಂದ ಪೈಪ್‌ಗೆ ಹರಿತ ಆಯುಧದಿಂದ ಹಾನಿಗೊಳಿಸಿ 1 ಲಕ್ಷ ಲೀ. ನೀರು ಮಧ್ಯದಲ್ಲೇ ವ್ಯರ್ಥ ವಾಗುವಂತೆ ಮಾಡಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಇಂತಹ ಅನಾಹುತ 3ನೇ ಬಾರಿಗೆ ಮರುಕಳಿಸುತ್ತಿರುವುದು  ಖಂಡನೀಯ ಎಂದರು. ಇಂತಹ ಅಮಾನವೀಯ ಕೃತ್ಯ ನಡೆಸಿರುವವರ ವಿರುದ್ಧ ಪ್ರಕರಣ ದಾಖಲಿಸಿ  ಕೊಂಡು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ನಗರಸಭೆ ಸದಸ್ಯ ಕೇಶವಮೂರ್ತಿ, ಪೌರಾಯುಕ್ತ ನಿಸಾರ್‌  ಅಹಮದ್‌, ಎಸ್‌ಐ ರಾಜು ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next