Advertisement
ನಗರದ ಹಲವು ಕಡೆಗಳಲ್ಲಿ ಗೈಲ್ ಸಂಸ್ಥೆಯು ಗ್ಯಾಸ್ ಲೈನ್ ಕಾಮಗಾರಿ ನಡೆಸುತ್ತಿದೆ. ಅದರಂತೆ ನಗರದ ಸಿಟಿ ಆಸ್ಪತ್ರೆ ಬಳಿ ರವಿವಾರ ಸಂಜೆ ವೇಳೆಗೆ ಪೈಪ್ ಲೈನ್ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ 450 ಎಂ.ಎಂ. ಕಬ್ಬಿಣದ ಪೈಪ್‌ಲೈನ್‌ಗೆ ಹಾನಿಯಾಗಿದ್ದು, ಈ ಪೈಪ್‌ಲೈನ್ ನಗರದ ಬೆಂದೂರ್‌ವೆಲ್ ಪಂಪ್‌ಹೌಸ್‌ನಿಂದ ಲಾಲ್ ಬಾಗ್‌ನ ಕರಾವಳಿ ಪಂಪ್‌ಹೌಸ್‌ಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲಿಂದ ಚಿಲಿಂಬಿ ಪಂಪ್ ಹೌಸ್, ಬೋಳೂರು, ಉರ್ವ, ಚಿಲಿಂಬಿ, ಅಶೋಕ ನಗರ, ಬೊಕ್ಕಪಟ್ಣ, ಮಣ್ಣಗುಡ್ಡೆ ಸಹಿತ ಸುಮಾರು 8 ವಾರ್ಡ್‌ಗಳಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.
Advertisement
ಪೈಪ್‌ಲೈನ್‌ಗೆ ಹಾನಿ; ನಗರದ 8 ವಾರ್ಡ್‌ಗಳಲ್ಲಿ ನೀರಿಲ್ಲ!
11:05 AM Mar 29, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.