ಕಾನ್ಪುರ: ಮದುವೆ ಆಗಿ ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿರುವುದು ನಿಯಮ. ಕೆಲ ಕಡೆ ಆಳಿಯ ಸಂತತಿ ಸಂಪ್ರದಾಯ ಕೂಡ ಇದೆ. ಆದರೆ ಇಲ್ಲೊಂದು ಗ್ರಾಮದ ಹೆಣ್ಣು ಮಕ್ಕಳನ್ನು ಮದುವೆಯಾದರೆ ಅಳಿಯನಿಗೆ ಆ ಮನೆಯ ಆಸ್ತಿಪಾಸ್ತಿಯನ್ನು ನೀಡುವ ರೂಢಿಯೊಂದಿದೆ.
500 ಕ್ಕಿಂತ ಹೆಚ್ಚು ಜನಸಂಖ್ಯೆ ಮತ್ತು 250 ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ಉತ್ತರ ಪ್ರದೇಶದ ಅಕ್ಬರ್‌ಪುರದ ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿಮೀ ದೂರದಲ್ಲಿರುವ ‘ದಮದನ್ ಪೂರ್ವʼ (‘ಅಳಿಯಂದಿರ ಗ್ರಾಮʼ) ದಲ್ಲಿ ಇಂಥದ್ದೊಂದು ಅಳಿಯಂದಿರ ಗ್ರಾಮವೊಂದಿದೆ. ಈ ಗ್ರಾಮವನ್ನು ಮೊದಲು ಸರಿಯಾಪುರ ಎಂದು ಕರೆಯಲಾಗುತ್ತಿತ್ತು. 10 ವರ್ಷದ ಹಿಂದೆ ‘ದಮದನ್ ಪೂರ್ವ’ಎಂದು ಹೆಸರು ಇಡಲಾಗಿದೆ.
ʼಅಳಿಯಂದಿರ ಗ್ರಾಮʼ ಆದದ್ದೇಗೆ?: 70ರ ದಶಕದಲ್ಲಿ ಗ್ರಾಮದ ಕೆಲವು ಕುಟುಂಬಗಳು ತಮ್ಮ ಹೆಣ್ಣುಮಕ್ಕಳು ಮದುವೆ ಬಳಿಕ ಅವರ ಗಂಡದಿರ ಜೊತೆ ಪತ್ನಿ ಮನೆಯಲ್ಲೇ ವಾಸಿಸಲು ಅನುಮತಿ ನೀಡಿತ್ತು. ಗಂಡದಿರ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರಿಂದ ಕುಟುಂಬಗಳು ಈ ಅನುಮತಿಯನ್ನು ನೀಡಿದ್ದವು. ಆರ್ಥಿಕವಾಗಿ ಸಹಾಯವಾಗಲೆಂದು ಪತ್ನಿಯ ಕುಟುಂಬದವರು ಅಳಿಯನಿಗೆ ಮನೆ, ಜಮೀನು ಅವರ ಹೆಸರಿಗೆ ನೀಡಿದ್ದರು. ಅಂದಿನಿಂದ ಯಾರೇ ಮದುವೆಯಾದರೂ ಅವರು ಪತ್ನಿ ಮನೆಯಲ್ಲೇ ಇರುತ್ತಾರೆ ಹಾಗೂ ಅವರಿಗೆ ಜಮೀನು, ಮನೆ ಇತ್ಯಾದಿ ಸೌಲಭ್ಯವನ್ನು ಪತ್ನಿ ಮನೆಯವರು ನೀಡುತ್ತಾ ಬಂದಿದ್ದಾರೆ. ಈ ರೂಢಿ ಮೂರು ತಲೆಮಾರು ದಾಟಿದೆ. ಅಲ್ಲಿಂದ ಇವತ್ತಿನವರೆಗೂ ಈ ಗ್ರಾಮ ಈ ಅಳಿಯಂದಿರ ಗ್ರಾಮವಾಗಿಯೇ ಖ್ಯಾತಿ ಆಗಿದೆ ಎಂದು ಊರಿನ ಹಿರಿಯರು ಹೇಳುತ್ತಾರೆ.
ಆರ್ಥಿಕವಾಗಿ ಹಿಂದುಳಿದಿರುವ ಯುವಕರು ಸ್ವಯಂ ಪ್ರೇರಿತ ಮುಂದೆ ಬಂದು ಈ ಗ್ರಾಮದ ಯುವತಿಯರನ್ನು ಮದುವೆ ಆಗಲು ಇಚ್ಛಿಸುತ್ತಾರೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.