Advertisement

ಡ್ಯಾಂ ಗೇಟ್‌ ದುರಸ್ತಿ ಆರಂಭ

06:06 PM Apr 23, 2020 | Suhan S |

ಕೊಪ್ಪಳ: ಜನ ಜೀವನ ಸೇರಿ ಹಲವು ಕಾರ್ಯಕ್ಕೂ ಕೋವಿಡ್ 19 ಸಂಕಷ್ಟ ತಂದಿಟ್ಟಿದೆ. ಯಾವುದೇ ಕಾಮಗಾರಿಗಳೂ ನಡೆಯುತ್ತಿಲ್ಲ. ಕಳೆದ ವರ್ಷ ತುಂಗಭದ್ರಾ ಡ್ಯಾಂ ಗೇಟ್‌ ಮುರಿದಿದ್ದು, ಈಗಷ್ಟೆ ಕಾಮಗಾರಿ ಆರಂಭವಾಗಿದ್ದು, ಉಳಿದಂತೆ ಎಲ್ಲ ಕಾಮಗಾರಿ ಸ್ಥಗಿತಗೊಂಡಿವೆ. ಜಿಲ್ಲಾಡಳಿತವು ಆದ್ಯತೆ ಮೇರೆಗೆ ಕಾಮಗಾರಿಗೆ ಒಪ್ಪಿಗೆ ಸೂಚಿಸುತ್ತಿದೆ.

Advertisement

ಹೌದು. ಕಳೆದ ವರ್ಷ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಜನ ತತ್ತರಿಸಿದ್ದಾರೆ. ಜಿಲ್ಲೆಗೆ ನೆರೆ ಹಾವಳಿ ಅಷ್ಟೇನು ಹಾನಿ ಮಾಡದಿದ್ದರೂ ತುಂಗಭದ್ರಾ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಡ್ಯಾಂನ ಎಡದಂಡೆ ಮೇಲ್ಮಟ್ಟದ ಗೇಟ್‌ ಮುರಿದು ಅಪಾರ ಪ್ರಮಾಣದ ನೀರು ಹರಿದು ಹೋಗಿತ್ತು. ಆಗ ತಾತ್ಕಾಲಿಕವಾಗಿ ಡ್ಯಾಂ ಗೇಟ್‌ ಮುರಿದ ಸ್ಥಳದಲ್ಲಿ ಮರುಳಿನ ಮೂಟೆಯನ್ನು ಇಳಿ ಬಿಟ್ಟಿದ್ದರಿಂದ ನೀರು ಹರಿವು ಕಡಿಮೆಯಾಗಿತ್ತು. ಡ್ಯಾಂನಲ್ಲಿ ನೀರು ಅಧಿಕವಿದ್ದರಿಂದ ಗೇಟ್‌ ದುರಸ್ತಿ ಮಾಡುವುದು ಸಾಧ್ಯವಿರಲಿಲ್ಲ. ಈಗ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಆದರೆ ಕಾಮಗಾರಿ ಆರಂಭಿಸಲು ಕೊರೊನಾ ಅಡ್ಡಿ ಮಾಡುತ್ತಿದೆ.

ಕೋವಿಡ್ 19  ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಕಟ್ಟುನಿಟ್ಟು ಕ್ರಮ ಕೈಗೊಂಡಿದ್ದು, ಯಾವುದೇ ಕಾಮಗಾರಿ ಆರಂಭಿಸದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಆದರೆ ಮಳೆಗಾಲ ಆರಂಭವಾಗಲಿದ್ದು, ಜೂನ್‌-ಜುಲೈ ವೇಳೆಗೆ ಡ್ಯಾಂಗೆ ನೀರು ಹರಿದು ಬರಲಿದೆ. ಅಷ್ಟರೊಳಗೆ ಡ್ಯಾಂ ಗೇಟ್‌ ದುರಸ್ತಿ ಮಾಡಬೇಕಿದೆ. ಆದರೆ ತುಂಗಭದ್ರಾ ಡ್ಯಾಂ ಅಧಿ ಕಾರಿಗಳು ಈಗಷ್ಟೇ ಡಿಸಿ ಅವರಿಂದ ಕಾಮಗಾರಿ ಆರಂಭಕ್ಕೆ ಅನುಮತಿ ಪಡೆದಿದ್ದಾರೆ. ಜಿಲ್ಲಾಧಿಕಾರಿ ಸಹ ಡ್ಯಾಂ ಗೇಟ್‌ ದುರಸ್ತಿ ಕಾಮಗಾರಿ ಬಿಟ್ಟು ಮತ್ತ್ಯಾವ ಕಾಮಗಾರಿಗೂ ಒಪ್ಪಿಗೆ

ಸೂಚಿಸಿಲ್ಲ. ಗೇಟ್‌ ದುರಸ್ತಿಗೆ 22 ಲಕ್ಷ ರೂ. ಟೆಂಡರ್‌ ಕರೆಯಲಾಗಿದೆ. ದಾವಣಗೆರೆ ಜಿಲ್ಲೆಯ ಗುತ್ತಿಗೆದಾರರಿಗೆ ಟೆಂಡರ್‌ ಆಗಿದ್ದು, ಕಾಮಗಾರಿ ಆರಂಭಿಸಬೇಕಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಸಾಮಗ್ರಿ ಸೇರಿ ಇತರೆ ಕಾರ್ಯಕ್ಕೆ ಅಡೆತಡೆಯಾಗುತ್ತಿದೆ. ಗೇಟ್‌ ಮುರಿದ ಸ್ಥಳದಲ್ಲಿ ಡ್ಯಾಂನ ಕಾರ್ಮಿಕರಿಂದ ಮರಂ ತೆರವು ಕಾರ್ಯ ನಡೆದಿದೆ. ಇನ್ನೂ ಡ್ಯಾಂ ನೀರು ಮುನಿರಾಬಾದ್‌ನ ಅಂಬೇಡ್ಕರ್‌ ನಗರದ 105ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿದ್ದರಿಂದ ಎಲ್ಲ ಕುಟುಂಬಗಳಿಗೂ ಮನೆ ದುರಸ್ತಿಗೆ ಸರ್ಕಾರದಿಂದ 10 ಸಾವಿರ ರೂ. ನೀಡಲಾಗಿದೆ. 3 ಮನೆಗಳು ಅಧಿಕ ಹಾನಿಯಾಗಿದ್ದು, ಅವರಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಲಾಗಿದೆ. ಸದ್ಯಕ್ಕೆ ಸರ್ಕಾರ ಯಾರಿಗೂ ಮನೆ ನಿರ್ಮಿಸಿಕೊಟ್ಟಿಲ್ಲ. ಮೇ ಅಂತ್ಯದೊಳಗೆ ಮಾಡದಿದ್ದರೆ ಕಷ್ಟ: ಇನ್ನೂ ಮುನಿರಾಬಾದ್‌ ಊರೊಳಗೆ ನೀರು ನುಗ್ಗದಂತೆ ಎರಡು ಸೇತುವೆ ಒಡೆಯಾಲಾಗಿತ್ತು. ಅವುಗಳ ದುರಸ್ತಿಯೂ ನಡೆದಿಲ್ಲ. ಡ್ಯಾಂ ಗೇಟ್‌ ದುರಸ್ತಿಯಲ್ಲೇ ಒಂದು ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲು ಯೋಜನೆ ಮಾಡಿದೆ. ತಾತ್ಕಾಲಿಕ ಮರಂ ಹಾಕಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ.

ಇನ್ನೂ ಅಂಜನಾದ್ರಿ, ಆನೆಗೊಂದಿ ಭಾಗದಲ್ಲಿ ನೀರಿನ ರಭಸಕ್ಕೆ ಕೆಲ ರಸ್ತೆಗಳು ಹಾನಿಯಾಗಿವೆ. ಜಿಪಂ ರಸ್ತೆಗಳ ದುರಸ್ತಿ ಕಾರ್ಯ ಕೈಗೊಂಡಿದೆ. ಡ್ಯಾಂ ಗೇಟ್‌ ಮೇ ಅಂತ್ಯದೊಳಗೆ ದುರಸ್ತಿ ಕಾರ್ಯ ಮಾಡಬೇಕಿದೆ. ಜೂನ್‌ ಹಾಗೂ ಜುಲೈನಲ್ಲಿ ಡ್ಯಾಂಗೆ ಅಧಿಕ ಪ್ರಮಾಣದ ನೀರು ಹರಿದು ಬರಲಿದ್ದು, ಆಗ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಕಾಮಗಾರಿ ಆರಂಭಿಸಿಲ್ಲ. ಕಳೆದ ವರ್ಷ ತುಂಗಭದ್ರಾ ಡ್ಯಾಂನ ಎಡದಂಡೆ ಮೇಲ್ಮಟ್ಟದ ಗೇಟ್‌ ಮುರಿದಿದ್ದರಿಂದ ಮುಂದೆ ಮಳೆಗಾಲವನ್ನು ಗಮನಿಸಿ ಗೇಟ್‌ ಕಾಮಗಾರಿ ಆರಂಭಕ್ಕೆ ಸಮ್ಮತಿ ಸೂಚಿಸಲಾಗಿದೆ. ಬುಧವಾರ ಸರ್ಕಾರದ ಮತ್ತೂಂದು ಆದೇಶ ಬಂದಿದ್ದು, ಸಿವಿಲ್‌ ಕಾಮಗಾರಿ ಆರಂಭಕ್ಕೆ ಸೂಚಿಸಿದ್ದಾರೆ. ಹಾಗಾಗಿ ಅಗತ್ಯ ಕಾಮಗಾರಿ ಆರಂಭಕ್ಕೆ ಸೂಚನೆ ನೀಡುವೆ. –ಸುನೀಲ್‌ ಕುಮಾರ, ಜಿಲ್ಲಾಧಿಕಾರಿ

 

ದತ್ತು ಕಮ್ಮಾರ

 

Advertisement

Udayavani is now on Telegram. Click here to join our channel and stay updated with the latest news.

Next